Sanchith Sanjeev ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಅಳಿಯಾಗಿರುವಂತಹ ಸಂಚಿತ್ ಸಂಜೀವ್ ರವರು ಕೊನೆಗೂ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಹಾಗೂ ತಮ್ಮ ಮೊದಲ ಸಿನಿಮಾದಲ್ಲಿ ನಿರ್ದೇಶಕನಾಗಿಯೂ ಕೂಡ ಪಾದಾರ್ಪಣೆ ಮಾಡಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಂತಹ ಸಂಚಿತ್ ಸಂಜೀವ್(Sanchith Sanjeev) ರವರು ಕೊನೆಗೂ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿರುವುದು ಕಿಚ್ಚನ ಅಭಿಮಾನಿಗಳಿಗೆ ಸೇರಿದಂತೆ ಪ್ರತಿಯೊಬ್ಬ ಕನ್ನಡ ಅಭಿಮಾನಿಗಳು ಕೂಡ ಖುಷಿ ಪಡುವಂತಹ ವಿಚಾರವಾಗಿದೆ. ಪ್ರತಿಯೊಬ್ಬರೂ ಕೂಡ ಈ ವಿಚಾರದ ಕುರಿತಂತೆ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಯಾಕೆಂದರೆ ಮೊದಲ ಸಿನಿಮಾದಲ್ಲಿ ನಾಯಕ ನಟನಾಗಿ ನಟನೆ ಮಾಡುವುದರ ಜೊತೆಗೆ ಸಿನಿಮಾದ ನಿರ್ದೇಶನವನ್ನು ಮಾಡುವುದು ಕೂಡ ಅಷ್ಟೊಂದು ಸುಲಭದ ಮಾತಲ್ಲ ಆದರೆ ಸಂಚಿತ್ ಸಂಜೀವ್ ರವರು ಆ ಎರಡು ಚಾಲೆಂಜ್ಗಳನ್ನು ಕೂಡ ಸ್ವೀಕರಿಸಿ ಕಿಚ್ಚ ಸುದೀಪ್ ರವರ ಲೆಗಸ್ಸಿಯನ್ನು ಮುಂದುವರಿಸುತ್ತಿದ್ದಾರೆ.
ಇನ್ನು ಮೊದಲ ಸಿನಿಮಾದಲ್ಲಿ ಅವರು ಆಯ್ಕೆ ಮಾಡಿಕೊಂಡಿರುವ ಜಾನರ್ ಹಾಗೂ ಸಿನಿಮಾದ ಶೈಲಿ ನಿಜಕ್ಕೂ ಕೂಡ ಫಸ್ಟ್ ಲುಕ್ ಟೀಸರ್ ಮೂಲಕವೇ ಪ್ರತಿಯೊಬ್ಬ ಸಿನಿಮಾ ಅಭಿಮಾನಿಗಳನ್ನು ಕೂಡ ಖಂಡಿತವಾಗಿಯೂ ಹುಡುಗ ಮುಂದೆ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ದೊಡ್ಡದನ್ನು ಸಾಧಿಸುತ್ತಾನೆ ಎಂಬ ಭರವಸೆಯನ್ನು ಮೂಡಿಸುವಂತೆ ಮಾಡಿದೆ.