Samantha ನಟಿ ಸಮಂತ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಗಚೈತನ್ಯ(Nagachaithanya) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಎರಡು ವರ್ಷಗಳೇ ಕಳೆದಿವೆ. ಇಂದಿಗೂ ಕೂಡ ಇವರಿಬ್ಬರೂ ಮತ್ತೆ ಪ್ಯಾಚ್ ಅಪ್ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೊಳ್ಳುವಂತಹ ಯಾವುದೇ ಬೆಳವಣಿಗೆ ನಡೆದಿಲ್ಲ.
ಆ ಕಡೆ ನಾಗ ಚೈತನ್ಯ ಅವರನ್ನು ನೋಡಿದರೆ ಅದಾಗಲೇ ಅವರು ಮತ್ತೊಬ್ಬ ನಟಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವುದು ಕೂಡ ಕಂಡು ಬರುತ್ತಿದೆ. ಇನ್ನು ಈ ಕಡೆ ಸಮಂತ(Samantha) ಅವರ ಹೆಸರು ಸಾಕಷ್ಟು ನಟರ ಜೊತೆಗೆ ಕೇಳಿ ಬರುತ್ತಿದ್ದು ಎರಡನೇ ಮದುವೆ ಆಗುತ್ತಿದ್ದಾರೆ ಎಂಬುದಾಗಿ ಸುದ್ದಿ ಇದ್ದರೂ ಕೂಡ ಅದನ್ನು ಅವರು ನಿರಾಕರಿಸುತ್ತಾರೆ.
ಇನ್ನು ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟ ನಟಿ ಸಮಂತ ಅವರ ಜೊತೆಗೆ ಇರುವಂತಹ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಸಮಂತ ನನ್ನ ನೆಚ್ಚಿನ ಹುಡುಗಿ ಎಂಬುದಾಗಿ ಕ್ಯಾಪ್ಶನ್ ಬೇರೆ ಹಾಕಿದ್ದಾರೆ. ಇದು ಚಿತ್ರರಂಗದಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಆ ಫೋಟೋ ಹಾಕಿರೋದು ಯಾರು ಎಂಬುದನ್ನು ನೀವೆಲ್ಲರೂ ಗಮನಿಸಿರುತ್ತೀರಿ.
ಹೌದು ನಾವ್ ಮಾತನಾಡ್ತಿರೋದು ತೆಲುಗು ಚಿತ್ರರಂಗದ ಯೂಥ್ ಐಕಾನ್ ಆಗಿರುವ ವಿಜಯ್ ದೇವರಕೊಂಡ(Vijay Deverakonda) ಅವರ ಬಗ್ಗೆ. ಹೌದು ಸಮಂತ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಕೂಡ ಖುಷಿ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ತೆಗೆದಂತಹ ಫೋಟೋ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ.