ಸಮಂತಾ ಪ್ರಭು ಅವರು ದಕ್ಷಿಣ ಕನ್ನಡದ ಲೀಡಿಂಗ್ ಹಾಗೂ ಯಶಸ್ವಿ ನಟಿ. ಈ ನಟಿ ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಚಿತ್ರಾಂಗದ ಮಾಯಾಲೋಕದಲ್ಲಿ ನಟಿಯರಿಗೆ ದಿನದಿಂದ ದಿನಕ್ಕೆ ಪಾಪ್ಯುಲಾರಿಟಿ ಕಡಿಮೆಯಾಗುತ್ತೆ. ಆದರೆ ಇವರ ವಿಷಯದಲ್ಲಿ ಇದು ಉಲ್ಟಾ ಆಗಿದೆ. ದಿನದಿಂದ ದಿನಕ್ಕೆ ಇವಳ ಪಾಪ್ಯುಲಾರಿಟಿ ಹೆಚ್ಚುತ್ತಲೇ ಇದೆ. ಸಮಂತಾಗೆ ವಯಸ್ಸಾದ ಹಾಗೆ ಬೇಡಿಕೆ ಕೂಡ ಹೆಚ್ಚುತ್ತಿದೆ.
ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದ ಸಮರ್ಥ ಇದೀಗ ಭಾರತದಲ್ಲೇ ನಂಬರ್ ವನ್ ನಟಿಯಾಗಿದ್ದಾರೆ.ಇತ್ತೀಚೆಗೆ ಬಿಡುಗಡೆಗೊಂಡ ಪುಷ್ಪಾ ಚಿತ್ರ ಭಾರತದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಷ್ಟೇ ಅಲ್ಲದೆ ಸಮಂತಾ ಅವರು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಫ್ಯಾಮಿಲಿ ಮ್ಯಾನ್ ಎಂಬ ಇಂಡಿಯನ್ ವೆಬ್ ಸೀರೀಸ್ ನಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದರು. ಪ್ಯಾನ್ ಇಂಡಿಯನ್ ಸಿನಿಮಾ ಮತ್ತು ಸೀರಿಯಲ್ ಗಳಿಂದ ಸಮಂತಾ ಅವರ ಪಾಪ್ಯುಲಾರಿಟಿ ಆಕಾಶಕ್ಕೇರಿದೆ.
ಸಮಂತಾ ಪ್ರಭು ಅವರ ಈಗಿನ ಸಂಭಾವನೆ ಯಾವ ಹೀರೋಗೂ ಕಮ್ಮಿಯಿಲ್ಲ. ಭಾರತೀಯ ಕ್ರಿಕೆಟರ್ ಗಳಾದ ಧೋನಿ ವಿರಾಟ್ ಕೊಹ್ಲಿ ಅವರ ರೇಂಜ್ ಗೆ ಸಮಂತಾ ಪಾಪ್ಯುಲಾರಿಟಿ ಕಳಿಸಿದ್ದಾರೆ. ಸಮಂತಾ ಅವರ ಇತ್ತೀಚಿನ ಸಂಭಾವನೆಯನ್ನು ಕೇಳಿದರೆ ನಿಜಕ್ಕೂ ಅಭಿಮಾನಿಗಳೆಲ್ಲಾ ಊಹೆ ಕೂಡ ಮಾಡಿರಲಿಲ್ಲ. ಪುಷ್ಪಾ ಚಿತ್ರದಲ್ಲಿ ಸಮಂತಾ ಅವರು 5 ನಿಮಿಷಗಳ ಐಟಂ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಹತ್ತು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಸಮಂತಾ ಪ್ರಭು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಪ್ ಲೋಡ್ ಮಾಡುವ ಒಂದು ಪೋಸ್ಟ್ ಗೆ ಅವರಿಗೆ ಇಪ್ಪತ್ತರಿಂದ ಮೂವತ್ತು ಲಕ್ಷ ರುಪಾಯಿಗಳ ಸಂಭಾವನೆ ಕೊಡಬೇಕಾಗುತ್ತೆ. ಹಾಗೆ ದೂರದರ್ಶನದ ಜಾಹೀರಾತುಗಳಲ್ಲಿ ಕೂಡಾ ಸಮಂತಾ ಅವರು ಇದೀಗ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ನಡೆಯುವ ಬಿಡುವಿನಲ್ಲಿ ಸಮಂತಾ ಅವರ ಹತ್ತು ಸೆಕೆಂಡುಗಳ ಜ್ಯೂಸ್ ಕುಡಿಯುವ ಜಾಹೀರಾತನ್ನು ನೀವೆಲ್ಲಾ ನೋಡಿರುತ್ತೀರಿ. ಹತ್ತು ಸೆಕೆಂಡ್ ಗಳ ಕಾಲ ಜ್ಯೂಸ್ ಕುಡಿಯುವ ಜಾಹೀರಾತಿನಲ್ಲಿ ಅಗ್ನಿ ಮಾಡಿದಕ್ಕೆ ಸಮಂತಾ ಕೇಳಿದ ಸಂಭಾವನೆ ಎಷ್ಟು ಅಂತ ಕೇಳಿದರೆ ನೀವೆಲ್ಲ ನಂಬಲ್ಲ.
ಕಡಿಮೆಯೆಂದರೂ ಸಮಂತಾ ಪ್ರಭು ಅವರು ಟಿವಿ ಜಾಹೀರಾತುಗಳಿಗೆ ಒಂದರಿಂದ ಎರಡು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ. ಡ್ರೀಮ್ ಇಲೆವೆನ್ ಮತ್ತು ಫಾಂಟಾ ಜ್ಯೂಸ್ ಗಳ ಜಾಹೀರಾತುಗಳಲ್ಲಿ ಅಭಿನಯಿಸಲು ಸಮಂತಾ ತಲಾ ಒಂದರಿಂದ ಎರಡು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಸಮಂತಾ ಕೈಯಲ್ಲಿ ಜಾಹೀರಾತುಗಳನ್ನು ಪ್ರಮೋಟ್ ಮಾಡುವುದು ಸುಲಭದ ಕೆಲಸವಲ್ಲ. ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ ಸಮಂತಾ ಪ್ರಭು ಅವರು ಮಾಲ್ ಮತ್ತು ಶಾಪ್ ಗಳ ಓಪನಿಂಗ್ ಗೆ ಅತಿಥಿಯಾಗಿ ಬರೋಕೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರಂತೆ.