ತೆಲಗು ಖ್ಯಾತ ನಟಿ ಸಮಂತಾ ಅವರು ತಮ್ಮ ವಿವಾಹ ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ ಹಾಗು ವೃತ್ತಿ ಜೀವನದಲ್ಲಿ ಮತ್ತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈ ಸಾಲಿನಲ್ಲಿ ತೆಲುಗಿನ ಶಾಕುಂತಲಂ ಚಿತ್ರದಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ ಪೌರಾಣಿಕ ಆಧಾರಿತ ಶಾಕುಂತಲಂ ಸಿನಿಮಾಕ್ಕೆ ಸಮಂತಾ ಅವರನ್ನ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಸಾಕಷ್ಟು ಹುಟ್ಟಿಸಿತ್ತು
ಈ ಸಿನಿಮಾದ ಫಸ್ಟ್ ಲುಕ್ ಸಿನಿಮಾ ತಂಡ ಬಿಡುಗಡೆಗೊಳಿಸಿದೆ ಶಕುಂತಲೆ ಪಾತ್ರದಲ್ಲಿ ಸಮಂತಾ ಅವರು ಪೋಸ್ ನೀಡಿದ್ದಾರೆ ಬಿಳಿಬಣ್ಣದ ಸೀರೆಯಲ್ಲಿ ನಿಸರ್ಗದ ಮದ್ಯೆ ಕುಳಿತುಕೊಂಡು ತಾಗಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ ತುಂಬಾನೇ ಸದ್ದುಮಾಡುತ್ತಿದೆ
ಶಕುಂತಲಂ ಸಿನಿಮಾ ಬಗ್ಗೆ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ ಫಸ್ಟ್ ಲುಕ್ ಬಿಡುಗಡೆಗೊಳಿಸಿದ ಕೆಲವೇ ಕ್ಷಣದಲ್ಲಿ ಸಾಕಷ್ಟು ಮಂದಿ ಲೈಕ್ ಮಾಡಿದ್ದಾರೆ ಶಕುಂತಲಂ ಚಿತ್ರದಬಗ್ಗೆ ತಾರಾಮಂದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇದು ಚಿತ್ರತಂಡಕ್ಕೆ ಖುಷಿ ನೀಡಿದೆ ಯಾವ ಪಾತ್ರ ಕೊಟ್ಟರು ಅದನ್ನು ಸರಿಯಾಗಿ ನಿಭಾಯಿಸುವ ಸಮಂತಾ ಅವರನ್ನು ಶಕುಂತಲೆ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಿಡುಗಡೆ ಆಗಿರುವ ಫಸ್ಟ್ ಲುಕ್ ಇಂದಾಗಿ ಫ್ಯಾನ್ಸ್ ಗಳಿಗೆ ಇನ್ನು ಆ ಚಿತ್ರದಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ ಇತ್ತೀಚಿಗೆ ದಿ ಫ್ಯಾಮಿಲಿ ಮ್ಯಾನ್ ಸರಣಿ 2 ಚಿತ್ರದಮೂಲಕ ಹಾಗು ಪುಷ್ಪ ಚಿತ್ರದ ಹೂ ಅಂತೀಯಾ ಮಾವ ಉಹು ಅಂತೀಯಾ ಮಾವ ಹಾಡಿಗೆ ಸಕತ್ ಬೋಲ್ಡ್ ಆಗಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ
ಹಾಗೆಯೆ ಶಕುಂತಲಂ ಚಿತ್ರ ಅಭಿಮಾನಿಗಳಿಗೆ ರಂಜಿಸಲು ಸಜ್ಜಾಗುತ್ತಿದೆ ಮೇನಕೆ ಹಾಗು ವಿಶ್ವಮಿತ್ರರ ಮಗಳಾದ ಶಕುಂತಲೆ ಕಣ್ವ ಮಹರ್ಷಿಗಳ ಆಶ್ರಯದಲ್ಲಿ ಬೆಳೆಯುತ್ತಾಳೆ ಆಕೆಗೆ ಪರಿಸರ ಪ್ರಾಣಿ ಎಂದರೆ ಬಹಳಷ್ಟು ಪ್ರೀತಿ ಅದರಂತೆಯೇ ಫಸ್ಟ್ ಲುಕ್ ಅಲ್ಲಿ ಪ್ರಕೃತಿ ಪ್ರಾಣಿ ಪಕ್ಷಿ ಮದ್ಯೆ ಕಾಣಿಸಿಕೊಂಡಿದ್ದಾರೆ ಶಕುಂತಲಂ ಸಿನಿಮಾ ಪ್ರತಿ ಫ್ರೇಮ್ ಪೇಂಟಿಂಗ್ ರೀತಿ ಇದೆ ಹಿಂದಿನ ಸಿನಿಮಾಗಿಂತ ಈ ಸಿನಿಮಾದಲ್ಲಿ ಅತಿ ಹೆಚ್ಚು ಮನಮೋಹಕವಾಗಿ ಪ್ರತಿಬಿಂಬಿಸಿದ್ದಾರೆ ಎಂದು ಸ್ವತಃ ಸಮಂತಾ ಅವರು ಹೇಳಿದ್ದಾರೆ
ಖ್ಯಾತ ನಿರ್ದೇಶಕ ಗುಣಶೇಖರ್ ಅವರು ಈ ಪೌರಾಣಿಕ ಹಾಗು ಐತಿಹಾಸಿಕ ಶಕುಂತಲಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿತ್ತಿದ್ದು ನೀಲಿಮಾ ಗುಣ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಪುತ್ರಿ ಅರ್ಹಾ ಅವರು ಬಣ್ಣ ಹಚ್ಚುತ್ತಿರುವುದು ವಿಶೇಶವಾಗಿದೆ