Salaar Teaser ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸಲಾರ್ ಟೀಸರ್(Salaar Teaser) ಈಗ ಕೊನೆಗೂ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಅಭಿಮಾನಿಗಳ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ.
ಪ್ರಭಾಸ್(Prabhas) ಅವರ ಮೂರು ಸಿನಿಮಾಗಳು ಈಗಾಗಲೇ ನೆಲಕಚ್ಚಿದ್ದು ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ಈ ಸಿನಿಮಾವಾದರು ಅವರ ಮಾರುಕಟ್ಟೆಯನ್ನು ಮತ್ತೊಮ್ಮೆ ಮೇಲೆದ್ದು ಬರುವಂತೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಆದರೆ ಈಗ ಈ ಸಿನಿಮಾದ ಟೀಸರ್ ಮೊದಲ ಇಂಪ್ರೆಷನ್ ಅನ್ನು ನೆಗೆಟಿವ್ ಆಗಿ ಮಾಡಿಕೊಂಡಿರುವುದು ಚಿತ್ರದ ಜನಪ್ರಿಯತೆಗೆ ಧಕ್ಕೆ ತರಬಹುದು ಎಂಬುದಾಗಿ ಅಂದಾಜಿಸಲಾಗಿದೆ.
ಕೇವಲ ಎಷ್ಟು ಮಾತ್ರವಲ್ಲದೆ ಕೆಜಿಎಫ್ ನಲ್ಲಿ ಕಂಡುಬಂದಿರುವ ಅಂತಹ ಸಾಕಷ್ಟು ಅಂಶಗಳನ್ನು ನೀವು ಎಲ್ಲಿ ಕೂಡ ಗುರುತಿಸಬಹುದಾಗಿದ್ದು ಹೊಸದೇನು ಇದರಲ್ಲಿ ಕಂಡುಬಂದಂತಿಲ್ಲ. ಇದು ಕೂಡ ಸಿನಿಮಾ ಪ್ರೇಕ್ಷಕರಲ್ಲಿ ಈ ಟೀಸರ್ ಕುರಿತಂತೆ ಅಸಮಾಧಾನವನ್ನು ಮೂಡುವಂತೆ ಮಾಡಿದೆ. ಟೀಸರ್ ನೋಡಿದ ನಂತರ ನಿಮಗೂ ಕೂಡ ಇದೇ ಅನಿಸಬಹುದು.
ಎಲ್ಲಕ್ಕಿಂತ ಪ್ರಮುಖವಾಗಿ ಇದರ ಬ್ಯಾಗ್ರೌಂಡ್ ಮ್ಯೂಸಿಕ್ ನಲ್ಲಿ ಕೂಡ ರವಿ ಬಸ್ರೂರು(Ravi Basrur) ಅವರು ಹಾಲಿವುಡ್ ಸಿನಿಮಾದ ಮ್ಯೂಸಿಕ್ ಅನ್ನು ಬಳಸಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.