ಸ್ನೇಹಿತರೆ, ನಿನ್ನೆಯಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲ ನಟಿ ಸಾಯಿ ಪಲ್ಲವಿ(Sai Pallavi) ಪ್ರೀತಿಸಿ ನಿರ್ದೇಶಕನನ್ನು ಮದುವೆಯಾಗಿರುವ ವದಂತಿಗಳು ಬಹುದೊಡ್ಡ ಮಟ್ಟಕ್ಕೆ ಸಂಚಲನ ಸೃಷ್ಟಿಯಾಗುತ್ತಿದೆ. ಅಲ್ಲದೆ ಸಾಯಿ ಪಲ್ಲವಿ(Sai Pallavi) ಅವರ ಫ್ಯಾನ್ ಪೇಜ್ ಗಳಲ್ಲಿಯೂ ಕೂಡ ಸಾಯಿ ಪಲ್ಲವಿ ಕೊನೆಗೂ ಮದುವೆಯಾದರೂ ಎಂಬ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಹಾಗಾದ್ರೆ ಹಾರ ಬದಲಿಸಿಕೊಂಡು ಮದುವೆ ಮಾಡಿಕೊಂಡಿರುವ ಹಾಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಈ ವೈರಲ್ ಸುದ್ದಿ ಹಿಂದಿನ ಅಸಲಿ ಕಥೆ ಏನು?
ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಕನ್ನಡ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಭಿನಯಿಸುತ್ತಾ ನ್ಯಾಚುರಲ್ ಬ್ಯೂಟಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ಸಾಯಿ ಪಲ್ಲವಿ ಅವರೆಂದರೆ ಪ್ರತಿಯೊಬ್ಬ ಅಭಿಮಾನಿಗಳಿಗೂ ಎಲ್ಲಿಲ್ಲದಂತಹ ಪ್ರೀತಿ ಅವರ ಸರಳ ವ್ಯಕ್ತಿತ್ವ ನಡೆ-ನುಡಿ ಎಂತವರನ್ನು ಅವರ ಫ್ಯಾನ್ ಆಗುವಂತೆ ಮಾಡಿಬಿಡುತ್ತದೆ.
ಹೀಗೆ ಓದಿದ್ದು ಎಂಬಿಬಿಎಸ್ ಆದರೂ ಕೂಡ ನಟನೆಯಲ್ಲಿ ಆಸಕ್ತಿ ತೋರಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿಯವರು 30 ವರ್ಷಗಳಾದರೂ ಇನ್ನು ಯಾಕೆ ಮದುವೆ ಆಗಿಲ್ಲ ಎಂಬ ಸುದ್ದಿ ಆಗಾಗ ಚರ್ಚೆ ಆಗುತ್ತಿತ್ತು. ಹಾಗೆ ಕಳೆದ ಕೆಲವು ದಿನಗಳ ಹಿಂದೆ ಸಾಯಿ ಪಲ್ಲವಿ(Sai Pallavi) ಮದುವೆಗೂ ನನ್ನ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಆದರೆ ಈಗ ಸಾಯಿ ಪಲ್ಲವಿ ಅವರು ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿಯವರೊಂದಿಗೆ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಗುಲಾಬಿ ಹಾರವನ್ನು ಧರಿಸಿ ಫೋಟೋಗೆ ಫೋಸ್ ನೀಡಿದ್ದು ಈ ಫೋಟೋ ವೈರಲ್ ಆದ ಬೆನ್ನಲ್ಲೇ ಸಾಯಿ ಪಲ್ಲವಿ(Sai Pallavi) ಅವರು ನಿರ್ದೇಶಕರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಹಬ್ಬಿಸಲಾಗುತ್ತಿತ್ತು. ಆದರೆ ಇದರ ಸತ್ಯ ಏನೆಂದರೆ ಸಾಯಿ ಪಲ್ಲವಿ ಅವರು ಮುಂಬರುವ ಚಿತ್ರದಲ್ಲಿ ನಟ ಶಿವ ಕಾರ್ತಿಕೇಯನ್(Shiva kartikeya) ಅವರೊಂದಿಗೆ ಅಭಿನಯಿಸುತ್ತಿದ್ದು ಎಸ್ ಕೆ 21(SK21) ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ತೆಗೆಯಲಾದ ಫೋಟೋ ಇದಾಗಿದೆ.
ಇದನ್ನೂ ಓದಿ Sanya Iyer: ಅದ್ದೂರಿಯಾಗಿ ಗೆಳತಿ ಸಾನ್ಯಾ ಬರ್ತಡೇ ಆಚರಿಸಿದ ರೂಪೇಶ್ ಶೆಟ್ಟಿ ವೈರಲ್ ಫೋಟೋಗಳು ಇಲ್ಲಿವೆ ನೋಡಿ!