Sadhu Kokila: ಕಾಮಿಡಿ ಕಿಂಗ್ ಸಾಧು ಕೋಕಿಲ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ? ಇವರ ಹೆಂಡತಿ ಮಕ್ಕಳು ತುಂಬಾನೇ ಫೇಮಸ್!

ಸ್ನೇಹಿತರೆ, ತಮ್ಮ ಅಮೋಘ ಹಾಸ್ಯ ಪ್ರತಿಭೆಯಿಂದಾಗಿ ಕನ್ನಡ ಸಿನಿ ಪ್ರೇಕ್ಷಕರಿಗೆ ನಗುವಿನ ಕಚ್ಚಗೊಳಿ ಇಡುವಂತಹ ಕಲಾವಿದ ಸಾದು ಕೋಕಿಲ (Sadhu Kokila) ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯವಿಲ್ಲ ಹೇಳಿ? ತಮ್ಮ ಅದ್ಭುತ ನಟನೆ, ಕಾಮಿಡಿ ಟೈಮಿಂಗ್ ಸಂಗೀತ ಹಾಗೂ ನಿರ್ದೇಶನದಿಂದಾಗಿ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿರುವ ಕಲಾವಿದ.

ಸಾಧು ಕೋಕಿಲ ಅವರ ವಿಶಿಷ್ಟ ಮ್ಯಾನರಿಸಂ ಬಾಡಿ ಲ್ಯಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿಗೆ ಕ್ಲೀನ್ ಬೋಲ್ಡ್ ಆದಂತಹ ಅಭಿಮಾನಿಗಳ ಸಂಖ್ಯೆ ಇಂದಿಗೂ ಅಸಂಖ್ಯಾತ. ನಟನೆ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ಸಾಧುಕೋಕಿಲ ಅವರು 1993 ರಂದು ಸೆಲೀನ(Salena) ಎಂಬ ತಮ್ಮ ಕ್ರಿಶ್ಚಿಯನ್ ಧರ್ಮದ ಹುಡುಗಿ ಒಬ್ಬರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರಿಬ್ಬರ ಮದುವೆಗೆ ಮನೆಯವರ ತೀವ್ರ ವಿರೋಧವಿತ್ತು. ಹೌದು ಗೆಳೆಯರೇ ಸಾಧು ಕೋಕಿಲ ಅವರ ತಂದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ ಕಾರಣ ಮನೆಯ ಜವಾಬ್ದಾರಿಯನ್ನೆಲ್ಲ ಸಾಧುಕೋಕಿಲ (Sadhu Kokila) ಹೊತ್ತಿದ್ದರು. ಇಂತಹ ಸಂದರ್ಭದಲ್ಲಿ ತಾಯಿಗೆ ಹೇಳದೆ ಮದುವೆ ಮಾಡಿಕೊಂಡಿದ್ದು ಆಕೆಯ ಬೇಸರಕ್ಕೆ ಕಾರಣವಾಗಿತ್ತು. ಅಲ್ಲದೆ ಸೆಲೀನ ಅವರ ಮನೆಯವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಂತಹ ವ್ಯಕ್ತಿಗೆ ತನ್ನ ಮಗಳನ್ನು ನೀಡಲು ಕಿಂಚಿತ್ತು ಇಷ್ಟವಿರಲಿಲ್ಲ.

ಹೀಗಾಗಿ ಮನೆಯವರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯ ಆದರ್ಶ ದಂಪತಿಗಳಂತೆ ಜೀವನ ನಡೆಸುತ್ತಿದ್ದಾರೆ. ಇನ್ನು ಈ ದಂಪತಿಗಳಿಗೆ ಸುರಾಗ್ ಮತ್ತು ಸೃಜನ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅವರು ಸಹ ತಮ್ಮ ಅದ್ಭುತ ಮ್ಯೂಸಿಕ್ ಕಲೆಯಿಂದಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲು ಸಕಲ ತಯಾರಿಯನ್ನು ನಡೆಸುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್(Weekend with Ramesh) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಂತಹ ಇವರ ಕುಟುಂಬದ ಫೋಟೋಸ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.

Leave a Comment