ಮಾರ್ಚ್ 25 ರಿಂದ ಆರ್ ಆರ್ ಆರ್ ಸಿನಿಮಾದ ಹವಾ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿ ಕೂಡ ಅಬ್ಬರಿಸುತ್ತಿದೆ. ನಮ್ಮ ಭಾರತ ಸಿನಿಮಾಗಳ ತಾಕತ್ತು ಇದೀಗ ಇಡೀ ಪ್ರಪಂಚವೇ ತಿಳಿಯುತ್ತಿದೆ. ಈ ಸಿನಿಮಾದ ಸೂತ್ರಧಾರ ರಾಜಮೌಳಿ. ಈ ಹಿಂದೆ ರಾಜಮೌಳಿ ಅವರು ಬಾಹುಬಲಿ ಯಂತಹ ಐತಿಹಾಸಿಕ ಚಿತ್ರವನ್ನು ಮಾಡಿ ಇಡೀ ಪ್ರಪಂಚಕ್ಕೆ ಭಾರತ ಚಿತ್ರರಂಗದ ಶಕ್ತಿಯನ್ನು ಪ್ರದರ್ಶನ ಮಾಡಿದ್ದರು. ಇದೀಗ ಮತ್ತೊಮ್ಮೆ ಭಾರತ ಚಿತ್ರರಂಗದ ತೋಳ್ಬಲವನ್ನು ಪ್ರದರ್ಶಿಸಿ ದ್ದಾರೆ.
ಅದ್ಭುತ ಮೇಕಿಂಗ್ ಮತ್ತು ನಟನೆ ಈ ಚಿತ್ರದ ಜೀವಾಳವಾಗಿದೆ. ಚಿತ್ರದ ಪ್ರತಿಯೊಂದು ಆ್ಯಕ್ಷನ್ ದೃಶ್ಯ ಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಸಡಗರ. ಈ ಚಿತ್ರ 3 ಗಂಟೆಗಳ ಕಾಲ ಪ್ರೇಕ್ಷಕರನ್ನು ಥಿಯೇಟರ್ ಸೀಟ್ ನಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ರಾಮ್ ಚಾರಣ ಮತ್ತು ಜೂನಿಯರ್ಬಿ ಎನ್ಡು ಟಿ ಆರ್ ಇಬ್ಬರನ್ನೂ ಒಟ್ಟಿಗೆ ತೆರೆ ಮೇಲೆ ನೋಡೋದೇ ಒಂದು ಹಬ್ಬ. ಬಿಡುಗಡೆಯಾದ ದಿನವೇ ಅದ್ದೂರಿ ಪ್ರದರ್ಶನಗಳೊಂದಿಗೆ ಬೃಹತ್ ಮೊತ್ತದ ಕಲೆಕ್ಷನ್ ಮಾಡಿದೆ.
ಆರ್ ಆರ್ ಆರ್ ಚಿತ್ರದ ಬಜೆಟ್ 400 ಕೋಟಿ. ಸಿನಿಮಾ ಚಿತ್ರೀಕರಣ ಮತ್ತು ಗ್ರಾಫಿಕ್ಸ್ ಗಳಿಗೆ 200 ಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ. ಸಿನಿಮಾದಲ್ಲಿ ಅಭಿನಯಿಸಿದ ನಟ ನಟಿಯರಿಗೆ ನೂರೈವತ್ತು ಕೋಟಿ ರುಪಾಯಿ ಗಿಂತಲೂ ಹೆಚ್ಚು ಸಂಭಾವನೆಯ ಖರ್ಚಾಗಿದೆ. ಈ ಚಿತ್ರದ ನಿರ್ದೇಶಕರಾದ ರಾಜಮೌಳಿ ಅವರಿಗೆ ಸಂಭಾವನೆಯ ಬದಲು ಸಿನಿಮಾಗೆ ಬಂದ ಲಾಭದಲ್ಲಿ ಶೇಕಡಾ ಐವತ್ತು ರಷ್ಟು ಕೊಡಲಾಗುತ್ತೆ.
400 ಕೋಟಿ ಬಜೆಟ್ ಹೊಂದಿರುವ ಈ ದೊಡ್ಡ ಸಿನಿಮಾ ಕೇವಲ ಒಂದೇ ಒಂದು ದಿನದಲ್ಲಿ ಅರ್ಧದಷ್ಟು ಮೊತ್ತವನ್ನು ಗಳಿಸಿದೆ ಎಂದರೆ ನೀವೆಲ್ಲಾ ನಂಬಲೇ ಬೇಕು. ಮೊದಲನೇ ದಿನದ ಕಲೆಕ್ಷನ್ ಕೇಳಿ ಸ್ವತಃ ಸಿನಿಮಾ ತಂಡದವರೇ ಬೆರಗಾಗಿದ್ದಾರೆ. ಭಾರತದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿರುವ ಮೊದಲ ಚಿತ್ರ ಇದಾಗಿದೆ. ಈ ಹಿಂದೆ ಬಾಹುಬಲಿ-2 ಚಿತ್ರ ಮೊದಲನೇ ದಿನವೇ ನೂರು ಕೋಟಿ ರುಪಾಯಿಗಳನ್ನು ಮಾಡಿ ದಾಖಲೆ ಬರೆದಿತ್ತು. ಇದೀಗ ಆರ್ ಆರ್ ಆರ್ ಸಿನೆಮಾ ಬಾಹುಬಲಿ ಚಿತ್ರವನ್ನೇ ಮೀರಿಸಿದೆ.
ಆರ್ ಆರ್ ಆರ್ ಸಿನಿಮಾಗೆ ವಿದೇಶದಲ್ಲಿಯೇ ಮೊದಲ ದಿನ 6 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲನೇ ದಿನ 135 ಕೋಟಿಗೂ ಅಧಿಕ. ಉತ್ತರ ಭಾರತ ಮತ್ತು ಇನ್ನುಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಿನಿಮಾ 80-100 ಕೋಟಿ ರುಪಾಯಿಗಳನ್ನು ಕಲೆಕ್ಟ್ ಮಾಡಿದೆ. ಆರ್ ಆರ್ ಸಿನಿಮಾದ ಮೊದಲನೇ ದಿನದ ಒಟ್ಟು ಗಳಿಕೆ ಅಂದಾಜು 250 ಕೋಟಿ ರುಪಾಯಿಗಳು. ಒಟ್ಟಿನಲ್ಲಿ ಒಂದೇ ದಿನಕ್ಕೆ 2 ನೂರು ಕೋಟಿಗೂ ಅಧಿಕ ಹಣವನ್ನು ಗಳಿಸಿರುವ ಮೊದಲ ಭಾರತದ ಸಿನಿಮಾ ಎಂಬ ದಾಖಲೆ ಸೃಷ್ಟಿಯಾಗಿದೆ.