Rishab Shetty ಉಳಿದವರು ಕಂಡಂತೆ ಸಿನಿಮಾಗಳ ಮೂಲಕವೇ ಎಲ್ಲಾ ಕಡೆ ಪರಿಚಿತರಾಗಿದ್ದ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಿರ್ದೇಶಕನಾಗಿ ಯಶಸ್ಸನ್ನು ಕಂಡಿದ್ದು ರಕ್ಷಿತ್ ಶೆಟ್ಟಿ(Rakshit Shetty) ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ. ಇದಾದ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕಮರ್ಷಿಯಲ್ ಹಾಗೂ ಅವಾರ್ಡ್ ವಿನ್ನಿಂಗ್ ಎರಡು ದೃಷ್ಟಿಕೋನದಲ್ಲಿ ಕೂಡ ಗೆಲುವನ್ನು ಸಾಧಿಸುವ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಫೇವರೆಟ್ ಗಳಲ್ಲಿ ಒಬ್ಬರಾಗುತ್ತಾರೆ.
ಆದರೆ ಕಾಂತಾರ(Kantara) ಸಿನಿಮಾ ರಿಷಬ್ ಶೆಟ್ಟಿ(Rishab Shetty) ಅವರನ್ನು ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ನಾಯಕ ನಟನಾಗಿ ಕೂಡ ಸಾಬೀತುಪಡಿಸುತ್ತದೆ ಹಾಗೂ ಕೇವಲ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಅಂತಹ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 400 ಕೋಟಿ ಕಲೆಕ್ಷನ್ ಮಾಡಿದೆ ಎಂದರೆ ನಿಜಕ್ಕೂ ಕೂಡ ಅವರ ಸಾಧನೆಯನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಕಾಂತಾರ ಸಿನಿಮಾದ ನಂತರ ಅವರ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ.
ಸದ್ಯದ ಮಟ್ಟಿಗೆ ನಾವು ಮಾತನಾಡುವುದಾದರೆ ಕಾಂತರಾ2 ಸಿನಿಮಾದ ನಿರೀಕ್ಷೆ ಪ್ರೇಕ್ಷಕರಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಿಗೆ ಕಂಡಿದ್ದು ಸಿನಿಮಾ ಆಗಸ್ಟ್ ತಿಂಗಳಿನಿಂದ ಚಿತ್ರೀಕರಣವನ್ನು ಪ್ರಾರಂಭ ಮಾಡುವಂತಹ ಸುದ್ದಿ ಇದೆ. ಇನ್ನು ನಿನ್ನೆಯಷ್ಟೇ ರಿಷಬ್ ಶೆಟ್ಟಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದು ಅವರ ಆಸ್ತಿಯ ವಿವರಗಳನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ ರಿಷಬ್ ಶೆಟ್ಟಿ, ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು ಕೂಡ ಸಿನಿಮಾ ರಂಗದಲ್ಲಿ ಚಿಕ್ಕ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಗಳಿಸುವ ಫಾರ್ಮುಲವನ್ನು ಕಂಡುಹಿಡಿದಿದ್ದರು. ಹೀಗಾಗಿ ಸಹಜವಾಗಿ ಕಾಂತಾರ ಸಿನಿಮಾದ ಮೂಲಕ ಸಾಧಿಸಿರುವ ಯಶಸ್ಸಿನ ಮೂಲಕ ಅವರ ಆಸ್ತಿಯಲ್ಲಿ ಕೂಡ ಹೆಚ್ಚಳವಾಗಿದ್ದು, ಒಟ್ಟಾರೆ ಆಸ್ತಿ 15 ರಿಂದ 20 ಕೋಟಿ ಎಂಬುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.