Rishab shetty: ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನಾಚರಣೆಯನ್ನು ಆಚರಿಸಿದ ರಿಷಬ್ ಶೆಟ್ಟಿ!

Rishab shetty latest photos: ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಸಣ್ಣಪುಟ್ಟ ಸಿನಿಮಾಗಳಲ್ಲಿ ಅಭಿನಯಿಸುತ್ತ ತಕ್ಕ ಮಟ್ಟದ ಪ್ರಖ್ಯಾತಿಯನ್ನು ಹೊಂದಿದ್ದಂತಹ ರಿಷಬ್ ಶೆಟ್ಟಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟ. ಹೌದು ಗೆಳೆಯರೇ ರಿಷಬ್ ಶೆಟ್ಟಿ ಅವರ ಅಭಿನಯ ಹಾಗೂ ನಿರ್ದೇಶನದಲ್ಲಿ ಮೂಡಿಬಂದಂತಹ ಕಾಂತರಾ (Kantara) ಸಿನಿಮಾ ಬದುಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.

ಸಾಮಾನ್ಯ ನಟರಂತೆ ಬೆರಳಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತ ತಕ್ಕಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಂತಹ ರಿಷಬ್ ಶೆಟ್ಟಿಯವರಿಗೆ ಸದ್ಯ ದೇಶ ವ್ಯಾಪಿ ಅಭಿಮಾನಿ ಸಂಗವಿದೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ನಿರ್ದೇಶಕ ನಿರ್ಮಾಪಕರು ಕೂಡ ರಿಶಬ್ ಶೆಟ್ಟಿ ಅವರ ಸಿನಿಮಾ ಡೇಟ್ಸ್ಗಾಗಿ ಕಾದು ಕುಳಿತಿದ್ದಾರೆ. ಹೇಗೆ ಒಂದೇ ಒಂದು ಸಿನಿಮಾದಿಂದ ತಮ್ಮ ಸಂಪೂರ್ಣ ಬದುಕನ್ನೇ ಬದಲಿಸಿಕೊಂಡಂತಹ ರಿಷಬ್ ಶೆಟ್ಟಿ (Rishab Shetty) ಕನ್ನಡ ಚಿತ್ರರಂಗದ ಯಶಸ್ಸನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದರು.

ಹೀಗೆ ಕಾಂತರಾ ಸಿನಿಮಾದ ನಂತರ ರಿಷಬ್ ಶೆಟ್ಟಿ ಏನೇ ಮಾಡಿದರೂ ಅದು ಭಾರಿ ಮಟ್ಟದಲ್ಲಿ ವೈರಲಾಗುತ್ತಿರುತ್ತದೆ. ಈ ಕಾರಣದಿಂದ ತಮ್ಮ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸನ್ಮಾರ್ಗದಲ್ಲೇ ನಡೆಯುವಂತೆ ಸ್ಪೂರ್ತಿಯ ನಿರ್ದೇಶನಗಳನ್ನೇ ಮಾಡುವಂತಹ ರಿಷಬ್ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಳಿ ಬಟ್ಟೆಯನ್ನು ಧರಿಸಿ ತಮ್ಮ ಮನೆಯ ಮೇಲೆ ಧ್ವಜಾರೋಹಣವನ್ನು ಮಾಡಿದ್ದಾರೆ.

ಅಲ್ಲದೆ ಆ ಕೆಲ ಫೋಟೋಗಳೊಂದಿಗೆ ತಮ್ಮ ಪುಟ್ಟ ಕಂದಮ್ಮ ರಾಧ್ಯಾಳಿಗೆ(Radhya) ಬಾವುಟ ಒಂದನ್ನು ನೀಡಿ ಮುದ್ದಾದ ಫೋಟೋ ಹಿಡಿಸಿದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮಗನಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವೇಷ ಹಾಕಿಸಿ ಮಗನಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೆಚ್ಚಿಸಿದ್ದಾರೆ. ಹೇಗೆ ಮನೆಯವರೆಲ್ಲರೂ ಸೇರಿ ಒಟ್ಟಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು

(Independence Day)ಬಹಳನೇ ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಅದರ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೂ ಶುಭಕೋರಿದ್ದಾರೆ. ಈ ಫೋಟೋಗಳು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದ್ದು ನಟ ರಿಷಬ್ ಶೆಟ್ಟಿ (Rishab Shetty) ಅವರೊಳಗಿರುವಂತಹ ದೇಶಪ್ರೇಮಕ್ಕೆ ನೆಟ್ಟಿಗರು ಮನಸೋತು ಹೋಗಿದ್ದಾರೆ. ಇದನ್ನೂ ಓದಿ KGF ಸೃಷ್ಟಿಕರ್ತ ಪ್ರಶಾಂತ್ ನೀಲ್ ತನ್ನ ಹೆಂಡತಿಯ ಜೊತೆಗಿನ ಕ್ಯೂಟೆಸ್ಟ್ ಫೋಟೋ! ಇಲ್ಲಿದೆ

Leave a Comment