Rishab Shetty ರಿಷಬ್ ಶೆಟ್ಟಿ ಕಾಂತಾರ(Kantara) ಸಿನಿಮಾದ ಮೂಲಕ ಈಗಾಗಲೇ ರಾಜ್ಯದ್ಯಂತ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಸಾಕು, ಯಾರು ಬೇಕಾದರೂ ಕೂಡ ಸ್ಟಾರ್ ಆಗಬಹುದು ಎಂಬುದನ್ನು ರಿಷಬ್ ಶೆಟ್ಟಿ ನಿರೂಪಿಸಿದ್ದಾರೆ. ಇದನ್ನು ನೀವು ಕೂಡ ಒಪ್ಪಿಕೊಳ್ಳುತ್ತೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ರಿಷಬ್ ಶೆಟ್ಟಿ(Rishab Shetty) ಅವರ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬರೂ ಕೂಡ ಅವರ ಬಗ್ಗೆ ಕಾಯುತ್ತಿರುವುದು ಅವರ ಕಾಂತದ ಸಿನಿಮಾದ ಎರಡನೇ ಭಾಗದ ಬಿಡುಗಡೆ ದಿನಾಂಕ ಹಾಗೂ ಚಿತ್ರೀಕರಣದ ಪ್ರಾರಂಭಕ್ಕಾಗಿ. ಕೇಳಿ ಬಂದಿರುವ ಸುದ್ದಿಗಳ ಪ್ರಕಾರ ಆಗಸ್ಟ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದಕ್ಕಿಂತಲೂ ಮುಂಚೆ ಇತ್ತೀಚಿಗಷ್ಟೇ ಅಂದರೆ ಆಗಸ್ಟ್ ಏಳರಂದು ನಡೆದಿರುವಂತಹ ರಿಷಬ್ ಶೆಟ್ಟಿ ಅವರ ಬರ್ತಡೇ ಹೊಂಬಾಳೆ ಫಿಲಂಸ್(Hombale Films) ಅವರಿಂದ ನಂದಿನಿ ಲಿಂಕ್ಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದ್ದು ಇದಕ್ಕೆ ನಡೆದಿರುವಂತಹ ಒಟ್ಟಾರೆ ಖರ್ಚು ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ರಿಷಬ್ ಶೆಟ್ಟಿ ಅವರ ಬರ್ತಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು ಇನ್ನು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕಂಡು ಬಂದಿದ್ದವು. ಒಟ್ಟಾರೆಯಾಗಿ ಸರಿ ಸುಮಾರು 40 ರಿಂದ 45 ಲಕ್ಷ ರೂಪಾಯಿ ಖರ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.