ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ಕರ್ನಾಟಕದ ಕ್ರಶ್ ಎಂದು ಹೆಸರು ಮಾಡಿದ್ದ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ನಮ್ಮ ಕನ್ನಡದ ಹುಡುಗಿ ದೇಶದಾದ್ಯಂತ ಹೆಸರುವಾಸಿಯಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಆದರೆ ರಶ್ಮಿಕಾ ಅವರ ಮೇಲೆ ಕನ್ನಡಿಗರಿಗೆ ಸ್ವಲ್ಪ ಅಸಮಾಧಾನ ಕೂಡ ಇದೆ. ರಶ್ಮಿಕಾ ಅವರು ಕನ್ನಡ ಭಾಷೆಯ ಮೇಲೆ ತೋರುವ ನಿರಾಸಕ್ತಿಯೇ ಇದಕ್ಕೆಲ್ಲ ಮೂಲ ಕಾರಣ. ಕನ್ನಡತಿಯಾಗಿ ಹುಟ್ಟಿ ಇದೀಗ ಕನ್ನಡ ಭಾಷೆಯನ್ನು ಮರೆತಿರುವ ರಶ್ಮಿಕಾ ಕಂಡರೆ ಕನ್ನಡಿಗರಿಗೆ ಎಲ್ಲಿಲ್ಲದ ಕೋಪ.
ಸದ್ಯಕ್ಕೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟನೆ ಮಾಡುವುದರಲ್ಲಿ ರಶ್ಮಿಕಾ ಅವರು ಬ್ಯುಸಿಯಾಗಿದ್ದಾರೆ. ಕರ್ನಾಟಕವನ್ನು ಬಿಟ್ಟು ರಶ್ಮಿಕಾ ಅವರು ಆಂಧ್ರಪ್ರದೇಶಕ್ಕೆ ಹೋಗಿ ಸೆಟಲ್ ಆಗಿದ್ದಾರೆ. ಆಂಧ್ರಪ್ರದೇಶದಲ್ಲಿ ರಶ್ಮಿಕಾ ಅವರು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಕೈತುಂಬ ಸಿನಿಮಾಗಳು ಸಿಗುವ ಕಾರಣ ರಶ್ಮಿಕಾ ಅವರು ಕಳೆದ 2-3 ವರ್ಷಗಳಿಂದ ಆಂಧ್ರದಲ್ಲಿ ನೆಲೆಯೂರಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ನ್ಯಾಷನಲ್ ಕ್ರಶ್ ಎಂದೇ ಹೆಸರಾಗಿರುವ ರಶ್ಮಿಕಾ ಅವರು ಇದೀಗ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ. ನಾನು ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟುವುದೇ ಇಲ್ಲ ಎಂಬ ವಿವಾದಾತ್ಮಕ ಸ್ಟೇಟ್ ಮೆಂಟ್ ನೀಡಿದ್ದಾರೆ. ಹೌದು ಗೆಳೆಯರು ಸ್ವತಃ ರಶ್ಮಿಕಾ ಅವರೇ ಸಂದರ್ಶನವೊಂದರಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದರೂ ಕೂಡ , ಕೈತುಂಬಾ ಹಣ ಮತ್ತು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು ಕೂಡ ರಶ್ಮಿಕಾ ಈ ರೀತಿಯ ಹೇಳಿಕೆ ಯಾಕೆ ಕೊಟ್ಟರು ಎಂದು ಹಲವರಿಗೆ ಪ್ರಶ್ನೆ ಕಾಡುತ್ತಿದೆ.
ಕೆಲವು ನೆಟ್ಟಿಗರು ರಶ್ಮಿಕಾ ಅವರ ಮೇಲೆ ಮಾಡಿದ ಕಮೆಂಟ್ ಗಳು ರಶ್ಮಿಕಾಗೆ ಬೇಸರ ತರಿಸಿವೆ ಇದೇ ಕಾರಣಕ್ಕೆ ರಶ್ಮಿಕಾ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸೆಲೆಬ್ರಿಟಿಗಳು ಅಂದಮೇಲೆ ಅವರು ನಡೆಯುವ ಪ್ರತಿ ಹೆಜ್ಜೆಗೂ ಕಮೆಂಟ್ ಮಾಡುವವರು ಇರುತ್ತಾರೆ. ಟೀಕೆ ಮತ್ತು ಟ್ರೋಲ್ ಗಳು ಸೆಲೆಬ್ರಿಟಿಗಳ ಜೀವನದಲ್ಲಿ ಸರ್ವೇ ಸಾಮಾನ್ಯ. ಅದರ ರಶ್ಮಿಕಾ ಮಂದಣ್ಣ ಅವರು ಟೀಕೆ ಮತ್ತು ಸ್ಟೋರ್ ಗಳನ್ನು ಪ್ರತಿದಿನ ಅನುಭವಿಸುತ್ತಿದ್ದಾರಂತೆ. ರಶ್ಮಿಕಾ ಅವರ ಹಾಕಿಕೊಂಡು ಬಟ್ಟೆ ಮತ್ತು ಆಡುವ ಮಾತುಗಳು ಸರಿಯಿಲ್ಲ ಎಂದು ಹಲವರು ದೂಷಿಸುತ್ತಾರೆ ಇಂದು ರಶ್ಮಿಕಾ ಹೇಳಿದ್ದಾರೆ.
ಹುಡುಗಿಯಾಗಿ ಹುಟ್ಟಿದ ಮೇಲೆ ತುಂಬಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಮಗೆ ಇಷ್ಟವೋ.. ಇಲ್ಲವೋ.. ಹುಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಬಟ್ಟೆ ಧರಿಸಬೇಕು, ಹುಡುಗರ ಸಂಬಂಧಿಕರ ಮುಂದೆ ನಾವು ತಲೆತಗ್ಗಿಸಿ ನಿಲ್ಲಬೇಕು. ಈ ಸಂಕಟವನ್ನು ನೋಡಿ ನಾನು ಮುಂದಿನ ಜನ್ಮದಲ್ಲಾದರೂ ಹೆಣ್ಣಾಗಿ ಹುಟ್ಟಬಾರದು ಎಂದು ಬಯಸಿದ್ದೇನೆ. ಏಕೆಂದರೆ, ಗಂಡು ಮಕ್ಕಳು ಕಾಲು ಮೇಲೆ ಕಾಲು ಹಾಕಿಕೊಂಡು ಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲವು ಅವರ ಇಚ್ಛೆಯಂತೆ ನಡೆಯುತ್ತದೆ ಎಂದರು.
ಮುಂದಿನ ಜನ್ಮದಲ್ಲಿ ನನ್ನನ್ನು ದೇವರು ಗಂಡು ಮಗುವಾಗಿ ಜನಿಸಲಿ ಎಂದು ರಶ್ಮಿಕಾ ಬೇಡಿಕೊಂಡಿದ್ದಾರೆ. ಹೆಣ್ಣು ಮಗುವಾಗಿ ಹುಟ್ಟಿದರೆ ಬದುಕುವ ಸ್ವಾತಂತ್ರ್ಯವೇ ಇರಲ್ಲ ಎಂದು ತಮ್ಮ ಅನಾನುಕೂಲತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಹೆಸರು ಖ್ಯಾತಿ ಪಡೆದುಕೊಂಡಿರುವ ರಶ್ಮಿಕಾ ಅವರ ಈ ರೀತಿಯ ಮಾತುಗಳನ್ನು ಹೇಳಿದರೆ.. ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗೆ ಎಂಬುದು ಪ್ರಶ್ನಾತೀತವಾಗಿದೆ. ಇದೇ ವೇಳೆ ಯಾವ ರೀತಿಯ ಹುಡುಗ ಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರು.