Rashmika Mandanna wedding: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) 2016ರಲ್ಲಿ ಸಾನ್ವಿ ಜೋಸೆಫ್ ಆಗಿ ಮಿಂಚಿ ಇಂದು ಬಾಲಿವುಡ್ನ ಬಿಗ್ ಬಿ ಅಮಿತಾ ಬಚ್ಚನ್ ಅವರಂತಹ ದಿಗ್ಗಜರೊಂದಿಗೆ ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಂಡು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಪಂಚ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ನಟಿ.
ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ವರ್ಷವೊಂದರಲ್ಲಿಯೇ ಎರಡರಿಂದ ಮೂರು ಸಿನಿಮಾಗಳನ್ನು ತೆರೆಗೆ ತರುವ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ. ಹೀಗೆ ಇತ್ತೀಚಿಗಷ್ಟೇ “ನಾನು ಈಗಾಗಲೇ ಮದುವೆಯಾಗಿದ್ದೇನೆ” ಎಂಬ ಹೇಳಿಕೆ ಒಂದನ್ನು ಸಿನಿಮಾ ಪ್ರಚಾರದಲ್ಲಿ ನೀಡಿದ್ದಾರೆ.
ಹಾಗಾದ್ರೆ ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಹಾಗೂ ವಿಜಯ್ ದೇವರಕೊಂಡ ಅವರಂತಹ ಸ್ಟಾರ್ ನಟರನ್ನು ತ್ಯಜಿಸಿ ಯಾರನ್ನು ಮದುವೆಯಾಗಿರಬಹುದೆಂದು ಅಭಿಮಾನಿಗಳು ಹುಡುಕ ತೊಡಗಿದ್ದಾರೆ. ಹೌದು ಸ್ನೇಹಿತರೆ ಗೀತ ಗೋವಿಂದ ಡಿಯರ್ ಕಾಮ್ರೆಡ್ಗಳಂತಹ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿ ತಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅವರ ಹೆಸರು ಆಗಾಗ ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ.
ಇನ್ನು ಕೆಲ ಸಂಗತಿಗಳಲ್ಲಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರುಕೊಂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಚಾಲ್ತಿಯಲ್ಲಿರುವಾಗ ರಶ್ಮಿಕಾ ಮಂದಣ್ಣ ಟೈಗರ್ ಶ್ರಾಫ್ (Tiger Shroff) ಜೊತೆ ಹಿಂದಿ ಸಿನಿಮಾದ ಪ್ರಚಾರಕ್ಕೆಂದು ಹೋದಾಗ “ನಾನು ಈಗಾಗಲೇ ಮದುವೆಯಾಗಿದ್ದೇನೆ,
ನಾನು ನರೂಟೊನನ್ನು ವಿವಾಹವಾಗಿದ್ದೇನೆ ಅವನನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಮನಸ್ಸಿನಲ್ಲಿ ಅವನೊಬ್ಬನೇ ಇದ್ದಾನೆ” ಎಂದು ಹೇಳಿಕೊಂಡಿದ್ದಾರೆ ಇದರಿಂದ ಅಭಿಮಾನಿಗಳ ತಲೆಗೆ ಕೊಂಚ ಹುಳ ಬಿಟ್ಟಂತಾಗಿದ್ದು ಆ ನರುಟೊ ಯಾರು ಎಂದು ತಲೆಕೆಡಿಸಿಕೊಂಡಿದ್ದರು. ಆದರೆ ರಶ್ಮಿಕ ಮಂದಣ್ಣ ಅವರ ಬಳಿ ನರುಟೊ(Naruto) ಎಂಬ ಅನಿಮೆ ಕಾರ್ಟೂನ್ (Anime Cartoon) ಇದ್ದು ಅದನ್ನು ಕಂಡರೆ ರಶ್ಮಿಕ ಅವರಿಗೆ ಎಲ್ಲಿಲ್ಲದ ಪ್ರೀತಿ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಅದರೊಂದಿಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದನ್ನೂ ಓದಿ DK Shivakumar: ನೂರಾರು ಕೋಟಿ ಸಂಪತ್ತಿನ ಒಡತಿ ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ