ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ನಟ ನಟಿಯರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಕನ್ನಡ ಪದವನ್ನು ಬಳಸುತ್ತಾರೆ. ನಿಜಜೀವನದಲ್ಲಿ ಸಿನಿಮಾ ತಾರೆಯರು ಕನ್ನಡಕ್ಕಿಂತ ಆಂಗ್ಲಭಾಷೆಯನ್ನು ಬಳಸೋದೇ ಜಾಸ್ತಿ. ಅದರಲ್ಲೂ ಹೀರೋಯಿನ್ ಗಳಂತೂ ಟಸ್ಸು ಪುಸ್ಸು ಅಂತ ಇಂಗ್ಲೀಷ್ ಮಾತಾಡಿ ಕೊಂಡು ಶೋಕಿ ಮಾಡುತ್ತಾರೆ. ಕನ್ನಡ ಚಿತ್ರಗಳಿಂದ ಹೆಸರು ಸಂಪಾದನೆ ಮಾಡಿ ಬೇರೆ ಭಾಷೆಗಳಲ್ಲಿ ಮೆರೆಯುತ್ತಿರುವ ನಟಿಯರು ತುಂಬಾ ಜನ ಇದ್ದಾರೆ.
ಇಂಥವರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಮೊದಲಿಗರು. ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಚಿತ್ರದಿಂದಲೇ ಹೆಸರು ಮಾಡಿ ಕರ್ನಾಟಕದ ಕೃಶ್ರಾ ಎನಿಸಿ ಕೊಂಡಿದ್ದ ರಶ್ಮಿಕಾ ಮಂದಣ್ಣ ಇದೀಗ ತೆಲುಗು ತಮಿಳು ಭಾಷೆಗಳಲ್ಲಿ ಅಭಿನಯಿಸಿದ ನಂತರ ನನಗೆ ಕನ್ನಡವೇ ನೆನಪಿಲ್ಲ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಕನ್ನಡಿಗರಿಗೆ ಎಲ್ಲಿಲ್ಲದ ಕೋಪ. ಅಷ್ಟೇ ಅಲ್ಲದೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರ ಜೊತೆ ಎಂಗೇಜ್ ಮೆಂಟ್ ಆಗಿ ತದನಂತರ ತನಗೆ ದಾರಿ ತೋರಿಸಿದ ರಕ್ಷಿತ್ ಶೆಟ್ಟಿ ಅವರನ್ನು ಕೈಬಿಟ್ಟಿರುವುದು ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
ಅಷ್ಟೇ ಅಲ್ಲ ರಶ್ಮಿಕಾ ಮಂದಣ್ಣ ಅವರು ತಮ್ಮ ತೆಲುಗು ಚಿತ್ರದ ಪ್ರಚಾರಕ್ಕೋಸ್ಕರ ಆಗಾಗ ಬೆಂಗಳೂರಿಗೆ ಬರ್ತಾರೆ. ಕೆಲವೊಮ್ಮೆ ಕರ್ನಾಟಕಕ್ಕೆ ಬಂದರೂ ಸಹ ರಶ್ಮಿಕಾ ಮಂದಣ್ಣ ಅವರು ಕನ್ನಡವನ್ನು ಮಾತನಾಡುವಾಗ ತೊದಲುತ್ತಾರೆ. ನನಗೆ ತೆಲುಗು ಮಾತನಾಡಿ ಕನ್ನಡವೇ ಮರೆತುಹೋಗಿದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ನನಗೆ ಸಮಯವಿಲ್ಲ ಎಂದು ಹೇಳುತ್ತಾಳೆ. ರಶ್ಮಿಕಾ ಮಂದಣ್ಣ ಅವರ ಈ ಎಲ್ಲಾ ನ್ಯೂನತೆಗಳು ಕನ್ನಡಿಗರಿಗೆ ಸ್ವಲ್ಪವೂ ಕೂಡ ಹಿಡಿಸುವುದಿಲ್ಲ.
ಇನ್ನೂ ಕೆಲವು ಹೀರೋಯಿನ್ ಗಳು ಬೇರೆ ರಾಜ್ಯದಲ್ಲಿ ಹುಟ್ಟಿದರೂ ಸಹ ಕನ್ನಡ ಭಾಷೆಯನ್ನು ಕಲಿತು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂಥವರಲ್ಲಿ ಗೂಗ್ಲಿ ಚಿತ್ರ ನಟಿ ಕೃತಿ ಕರಬಂಧ ಅವರು ಕೂಡ ಒಬ್ಬರು. ಈಕೆ ಹುಟ್ಟಿದ್ದು ನವದೆಹಲಿಯಲ್ಲಿ. ಇವರು ಮಾಡಿರುವುದು ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳಾದ್ರೂ ಸಹ ಅಚ್ಚುಕಟ್ಟಾಗಿ ಕನ್ನಡ ಮಾತಾಡುತ್ತಾರೆ. ಕನ್ನಡ ಚಿತ್ರರಂಗವನ್ನು ಬಿಟ್ಟು ಬಾಲಿವುಡ್ ಚಿತ್ರರಂಗಕ್ಕೆ ಹೋದರೂ ಸಹ ಈ ಹೀರೋಯಿನ್ ಕನ್ನಡವನ್ನು ಮರೆತಿಲ್ಲ.
ಇತ್ತೀಚೆಗೆ ಕೃತಿ ಕರಬಂಧ ಅವರು ತಮ್ಮ ಹಿಂದಿ ಚಿತ್ರದ ಚಿತ್ರದ ಪ್ರಚಾರಕ್ಕೋಸ್ಕರ ಬೆಂಗಳೂರಿಗೆ ಬಂದಿದ್ದರು. ಈ ಸಮಯದಲ್ಲಿ ಮಾಧ್ಯಮಗಳ ಜೊತೆ ಕೃತಿ ಕರಬಂದ ಅವರು ಕನ್ನಡದಲ್ಲಿಯೇ ಮಾತನಾಡುತ್ತಾರೆ. ಮತ್ತು ಕನ್ನಡಿಗರಲ್ಲಿ ತನ್ನ ಹಿಂದಿ ಚಿತ್ರವನ್ನು ನೋಡಲು ಕನ್ನಡದಲ್ಲಿಯೇ ವಿನಂತಿಸಿಕೊಂಡಿದ್ದಾರೆ. ನಾನು ಸದಾ ಕನ್ನಡಿಗರಿಗೆ ಚಿರ ಋಣಿಯಾಗಿರುತ್ತೇನೆ ನನ್ನನ್ನು ಇಷ್ಟು ದೊಡ್ಡ ಹೀರೋಯಿನ್ನಾಗಿ ಮಾಡಿರುವುದು ಕನ್ನಡಿಗರೇ ತಾನು ಎಂದೆಂದಿಗೂ ಬೆಂಗಳೂರನ್ನು ಹಾಗೂ ಕನ್ನಡಿಗರನ್ನು ಮರೆಯುವುದಿಲ್ಲ ಎಂದು ಕೃತಿ ಖರಬಂದ ತಾನು ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.
ವರ್ಷಕ್ಕೊಮ್ಮೆ ತೆಲುಗು ತಮಿಳು ಚಿತ್ರದ ಪ್ರಚಾರಕ್ಕೋಸ್ಕರ ಬೆಂಗಳೂರಿಗೆ ಬರುವ ರಶ್ಮಿಕಾ ಮಂದಣ್ಣ ಅವರು ಒಂದು ದಿನ ಕೂಡ ಕನ್ನಡಿಗರಿಗೆ ಈ ರೀತಿಯ ಮಾತುಗಳನ್ನು ಆಡಿಲ್ಲ. ಸದಾ ಕನ್ನಡಿಗರಿಗೆ ರಶ್ಮಿಕಾ ಒಂದು ಸಲ ಕೂಡ ಕನ್ನಡಿಗರಿಗೆ ಧನ್ಯವಾದಗಳನ್ನು ಸೂಚಿಸುವುದಿಲ್ಲ. ಅಲ್ಪಸ್ವಲ್ಪ ಕನ್ನಡವನ್ನು ಮಾತ್ರ ಇಂಗ್ಲಿಷಿನಲ್ಲೇ ತನ್ನ ಚಿತ್ರದ ಪ್ರಚಾರವನ್ನು ಗಿಟ್ಟಿಸಿಕೊಳ್ಳುವ ರಶ್ಮಿಕಾ ಮಂದಣ್ಣ ಅವರು ಕೃತಿ ಕರಬಂಧ ನಂತಹ ನಟಿಯರನ್ನು ನೋಡಿ ಕಲಿಯಬೇಕು. ಮನುಷ್ಯ ಎಷ್ಟೇ ದೊಡ್ಡ ಹೆಸರು ಹಣ ಆಸ್ತಿ ಮಾಡಿದರೂ ಕೂಡ ತಾನು ಬೆಳೆದು ಬಂದ ಮೂಲವನ್ನು ಯಾವತ್ತೂ ಗೌರವಿಸಬೇಕು ಮತ್ತು ನೆನಪಿಸಿಕೊಳ್ಳಬೇಕು.