Rashmika Mandanna: ಅನಿಮಲ್ ಸಿನಿಮಾಗೆ ರಶ್ಮಿಕ ಮಂದಣ್ಣ ಪಡೆಯುತ್ತಿರುವ ಸಂಭವನೆ ಎಷ್ಟು ಕೋಟಿ?

Rashmika Mandanna ನಾಯಕ ನಟಿ ರಶ್ಮಿಕ ಮಂದಣ್ಣ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವುದನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ. ಹೇಗಿದ್ದರೂ ಕೂಡ ಅವರ ಬೇಡಿಕೆಯೆನ್ನುವುದು ಉಳಿದ ಸೌತ್ ಇಂಡಿಯನ್ ಭಾಷೆಗಳಲ್ಲಿ ಹಾಗೂ ಬಾಲಿವುಡ್(Bollywood) ನಲ್ಲಿ ಕೂಡ ಹೆಚ್ಚಾಗಿದೆ.

ತೆಲುಗು ಚಿತ್ರರಂಗದಲ್ಲಿ ರಶ್ಮಿಕ ಮಂದಣ್ಣ(Rashmika Mandanna) ಅವರನ್ನು ನಾವು ಟಾಪ್ ನಾಯಕ ನಟಿ ಎಂದರು ಕೂಡ ತಪ್ಪಾಗಲಾರದು. ಇನ್ನು ಹಿಂದಿ ಚಿತ್ರರಂಗದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಒಂದೊಂದು ಸೂಪರ್ ಸ್ಟಾರ್ ನಾಯಕ ನಟರ ಜೊತೆಗೆ ಕಾಣಿಸಿಕೊಳ್ಳುತ್ತಾ ಅಲ್ಲಿ ಕೂಡ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಕೊಡಗಿನ ಕುವರಿ. ಹಿಂದಿ ಸಿನಿಮಾದಿಂದಲೂ ಕೂಡ ಸಾಕಷ್ಟು ಆಫರ್ ಗಳು ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಬೇಡಿಕೆ ಬಾಲಿವುಡ್ ನಲ್ಲಿ ಕೂಡ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಅದರಲ್ಲೂ ಇತ್ತೀಚಿಗೆ ಅವರು ಲೇಟೆಸ್ಟ್ ಆಗಿ ಹಿಂದಿ ಚಿತ್ರರಂಗದಲ್ಲಿ ನಟಿಸುತ್ತಿರುವ ಸಿನಿಮಾ ಅನಿಮಲ್(Animal) ಆಗಿದೆ. ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ ಆಗಿರುವ ರಣಬೀರ್ ಕಪೂರ್(Ranbir Kapoor) ರವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಈ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇನ್ನು ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಆಗಿರುವಂತಹ ಸಂದೀಪ್ ವಂಗ(Sandeep Vanga) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗಾಗಿ ರಶ್ಮಿಕ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಭರ್ಜರಿ 3 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಬಾಲಿವುಡ್ ನಲ್ಲಿ ಎರಡನೇ ಸಿನಿಮಾ ಮಾಡುತ್ತಿರುವ ನಟಿಗೆ ಎಷ್ಟೊಂದು ಸಂಭಾವನೆ ನೀಡುತ್ತಿರುವುದು ನಿಜಕ್ಕೂ ಕೂಡ ದೊಡ್ಡ ಮೊತ್ತವೇ ಎಂದು ಹೇಳಬಹುದು.

Leave a Comment