ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಹಿಂದಿ ಮ್ಯೂಸಿಕಲ್ ಸಾಂಗ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾದ್ ಷಾ ಟಾಪ್ ಟಕ್ಕರ್ ಸಾಂಗ್ನಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಈ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ. ಈಗಾಗಲೇ ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅವರು ಸಿನಿಮಾದಲ್ಲಿ ನಟಿಸುತ್ತಿಲ್ಲ. ಗೊತ್ತಿರುವ ಹಾಗೆ ರಶ್ಮಿಕಾ ಹಿಂದಿಯ ಆಲ್ಬಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಾಡಿನ ಶೂಟಿಂಗ್ ಪ್ರಾರಂಭವಾಗಿದ್ದು, ಕೆಲವು ದಿನಗಳಿಂದ ಚಂಡೀಗಢದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ ರಾಶ್ಮಿಕಾ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್ಡ್ ಮತ್ತು ಪಿಂಕ್ ಬಣ್ಣದ ಕಾಸ್ಟ್ಯೂಮ್ ನಲ್ಲಿ ಹಾಡಿಗೆ ಹೆಜ್ಜೆ ಹಾಕಿರುವ ಫೋಟೋಗಳು ರಶ್ಮಿಕಾ ಫ್ಯಾನ್ಸ್ ಬಳಗದಲ್ಲಿ ಹರಿದಾಡುತ್ತಿದೆ. ಮೊದಲ ಬಾರಿಗೆ ರಶ್ಮಿಕಾ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂದು ನೋಡಲು ಕಾತರರಾಗಿದ್ದಾರೆ.
ಟಾಲಿವುಡ್, ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೊದಲ ಬಾರಿ ವಿಡಿಯೋ ಸಾಂಗ್ವೊಂದರಲ್ಲಿ ರ್ಯಾಪರ್ ಬಾದ್ಶಾ ಜೊತೆ ಹೆಜ್ಜೆ ಹಾಕಿ ಹೆಜ್ಜೆ ಹಾಕಿರುವ ಹಿಂದಿ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಮೂಲಕ ಬಾಲಿವುಡ್ ನ ಚೊಚ್ಚಲ ಚಿತ್ರ ಮಿಷನ್ ಮಜ್ನು ಚಿತ್ರೀಕರಣಕ್ಕೆ ಮುನ್ನವೇ ಹಿಂದಿ ವಿಡಿಯೋ ಸಾಂಗ್ನಲ್ಲಿ ರಶ್ಮಿಕಾ ಎಲ್ಲ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಲು ಮುಂದಾಗಿದ್ದಾರೆ. ಈ ಮೂಲಕ ಯುವನ್ ಶಂಕರ್ ರಾಜ್ ಅವರ ಟಾಪ್ ಟಕ್ಕರ್ ಹಾಡಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ ರಶ್ಮಿಕಾ. ಈಗಾಗಲೇ ಈ ಹಾಡಿನ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನ ಟೀಸರ್ ಫೆಬ್ರವರಿ ಎಂಟರಂದು ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಬ್ಯುಟಿಫೂಲ್ ಆಗಿ ನಟಿ ರಶ್ಮಿಕಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬಿ ಶೈಲಿಯಲ್ಲಿ ಹಾಡು ಮೂಡು ಬಂದಿದ್ದು, ರಶ್ಮಿಕಾ ಅವರ ಪೇಟ ತೊಟ್ಟು ಎಲ್ಲರ ಗಮನಸೆಳೆದಿದ್ದರು.
ಅಂದಹಾಗೆ ಈ ಆಲ್ಬಂ ಹಾಡು ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿದ್ದು, ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಲೀಕ್ ಆಗಿರುವ ಫೋಟೋಗಳು ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದ್ದು, ರಶ್ಮಿಕಾ ಮೊದಲ ಹಿಂದಿ ಆಲ್ಬಂ ಹಾಡು ಹೇಗಿರಲಿದೆ ಕಾಯುತ್ತಿದ್ದಾರೆ. ಸಧ್ಯ ರಶ್ಮಿಕಾ ಸದ್ಯ ತೆಲುಗಿನ ಬಹುನಿರೀಕ್ಷೆಯ ಪುಷ್ಪಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತೆಲುಗಿನ ಮತ್ತೊಂದು ಸಿನಿಮಾ ರಶ್ಮಿಕಾ ಕೈಯಲ್ಲಿದೆ ಜೊತೆಗೆ ತಮಿಳು ಮತ್ತು ಕನ್ನಡದ ಒಂದೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಚಿತ್ರೀಕರಣದ ನಡುವೆಯೂ ರಶ್ಮಿಕಾ ಬಿಗ್ ಬಜೆಟ್ ನ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆಹಾಕುವ ಮೂಲಕ ಮೋಡಿ ಮಾಡಲು ಸಿದ್ಧರಾಗಿದ್ದಾರೆ.