Rashmika mandanna Family latest photo: ಸ್ನೇಹಿತರೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ 2016ರಲ್ಲಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ನಟಿ ರಶ್ಮಿಕಾ ಮಂದಣ್ಣ(Rashmika mandanna) ಇಂದು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಪೀಕ್ ನಲ್ಲಿರುವಂತಹ ನಟಿಯಾಗಿ ಹೊರಹೊಮ್ಮಿದ್ದಾರೆ.
ಅಚನಕ್ಕಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಇಂದೂ ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ನಂಬರ್ ವನ್ ನಟಿ. ರಕ್ಷಿತ್ ಶೆಟ್ಟಿ ಅವರೊಂದಿಗೆ ತಮ್ಮ ನಟನಾ ಬದುಕನ್ನು ಶುರು ಮಾಡಿದ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಹಾಗೂ ಬಾಲಿವುಡ್ನ ಬಿಗ್ ಬಿ ಅಮಿತಾ ಬಚ್ಚನ್ರವರಂತ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ಗಳು ಸಹ ಕ್ರಿಯೇಟ್ ಆಗಿದ್ದು, ಹಾಗಾಗ ಇವರ ಕ್ಯೂಟ್ ಕ್ಯೂಟ್ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಅದರಂತೆ ಈಗ ನಟಿ ರಶ್ಮಿಕ ಮಂದಣ್ಣ ಅವರ ಫ್ಯಾಮಿಲಿ ಫೋಟೋ ನೆಟ್ಟಿಗರು ಗಮನ ಸೆಳೆಯುತ್ತಿದೆ. ಹೌದು ಗೆಳೆಯರೇ ಮೂಲತಃ ಕೊಡಗಿನ ವಿರಾಜ್ ಪೇಟೆಯವರದ ರಶ್ಮಿಕ ಮಂದಣ್ಣ ಕೊಡವ ಸಂಪ್ರದಾಯಕ್ಕೆ ಸೇರಿದವರಾಗಿದ್ದು, ಏಪ್ರಿಲ್ 5 ನೇ ತಾರೀಕು 1996 ರಂದು ಸುಮನ್ ಮತ್ತು ಮದನ್ ಮಂದಣ್ಣ ದಂಪತಿಗೆ ಜನಿಸಿದರು.
ಇನ್ನೂ 27 ವರ್ಷದ ಈ ನಟಿಗೆ 10 ವರ್ಷದ ಶಿಮನ್ ಮಂದಣ್ಣ(Shiman mandanna) ಎಂಬ ತಂಗಿ ಇದ್ದು ಆಗಾಗ ತಮ್ಮ ಹಾಗೂ ತಮ್ಮ ತಂಗಿಯ ಕ್ಯೂಟ್ ಫೋಟೋಗಳನ್ನು ರಶ್ಮಿಕ ತಮ್ಮ instagram ಪೋಸ್ಟ್ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಸದ್ಯ ರಶ್ಮಿಕ ಮಂದಣ್ಣ ಅವರ ಸಂಪೂರ್ಣ ಫ್ಯಾಮಿಲಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು,
ಇವರ ಸುಂದರ ಕುಟುಂಬ ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇನ್ನು ಬಾಲಿವುಡ್ (bollywood) ನ ಸ್ಟಾರ್ ನಟ ರಣ್ಭೀರ್ ಕಪೂರ್ ಅವರೊಂದಿಗೆ ಅನಿಮಲ್(Animal) ಹಾಗೂ ತೆಲುಗಿನ ಅಲ್ಲು ಅರ್ಜುನ್ ಅವರೊಂದಿಗೆ ಪುಷ್ಪ 2 (Pushpa 2) ಸಿನಿಮಾದಲ್ಲಿ ಬಿಜಿ ಇದ್ದು, ಮುಂದಿನ ದಿನಗಳಲ್ಲಿ ಯಾವ ನಟರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾಮಿಲಿ ಫೋಟೋ