ಸ್ಟಾರ್ ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುತ್ತದೆ. ಹೀಗಾಗಿ ಸ್ಟಾರ್ ನಟ ನಟಿಯರು ತಮ್ಮ ಕಾಸ್ಟೂಮ್ಗಳ ಮೇಲೆ ಹೆಚ್ಚಿನ ಗಮನ ವಹಿಸಿ ಸ್ಟೈಲಿಶ್ಟ್ (Stylist) ಗಳಿಂದ ಮಾಡಿಸಲಾದಂತಹ ಉಡುಪು ಹಾಗೂ ಆವರಣಗಳನ್ನು ಧರಿಸುತ್ತಾರೆ. ತಮ್ಮ ಸ್ಟೈಲ್ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಬಹುದೊಡ್ಡ ಮಟ್ಟದಲ್ಲಿ ಸುದ್ದಿಗಳಿಗಾಗುವ ನ್ಯಾಷನಲ್ ರಶ್ಮಿಕಾ ಮಂದಣ್ಣ(Rashmika Mandanna) ಯಾವುದೇ ಪಾರ್ಟಿ ಹಾಗೂ ಸಮಾರಂಭಗಳಿಗೆ ಹೋದರು ತಮ್ಮ ಉಡುಪನ್ನು ಎಂದಿಗೂ ರಿಪೀಟ್ ಮಾಡುವುದಿಲ್ಲ.
ಅಲ್ಲದೆ ಯಾವ ಸ್ಟಾರ್ ಸೆಲೆಬ್ರಿಟಿಗಳು ಧರಿಸಿದಂತಹ ವಿಶೇಷವಾದ ಉಡುಪಿನಲ್ಲಿ ರಶ್ಮಿಕ ಮಂದಣ್ಣ ಸದಾ ಮಿಂಚುತ್ತಿರುತ್ತಾರೆ. ಬೋಲ್ಡ್ ಲುಕ್ಗೂ ಸೈ, ಟ್ರೆಡಿಶನಲ್ ವೇರ್ಗೂ ಸೈ ಎನ್ನುವ ರಶ್ಮಿಕಾ ಆಗಾಗ ಸೀರೆಯುಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವುದು ಸಹಜವಾಗಿಬಿಟ್ಟಿದೆ. ಹೀಗಿರುವಾಗ ನಿನ್ನೆಯಷ್ಟೇ ನಡೆದ ತಮ್ಮ ಸಹಾಯಕನ ಮದುವೆಯಲ್ಲಿ ಹಳದಿ ಬಣ್ಣದ ಸೀರೆಯುಟ್ಟು ಕ್ಯಾಮರಾದ ಕಣ್ಣಿಗೆ ಬಹಳ ಮೋಹಕವಾಗಿ ನೀಡಿರುವ ರಶ್ಮಿಕ ಮಂದಣ್ಣ
ಆ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಕಳೆದ ಆರು ಏಳು ವರ್ಷಗಳಿಂದ ನಟಿ ರಶ್ಮಿಕ ಮಂದಣ್ಣ ಅವರ ಸಹಾಯಕರಾಗಿದಂತಹ ಸಾಯಿಬಾಬು(Sai babu) ಅವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದಂತಹ ರಶ್ಮಿಕಾ ಮಂದಣ್ಣ(Rashmika Mandanna) ಸಿಂಪಲ್ಲಾದ ಹಳದಿ ಸೀರೆಯನ್ನು ಉಟ್ಟು, ಸ್ಲೀವ್ಸ್ ಬ್ಲೌಸ್ ಧರಿಸಿ, ಫ್ರೀ ಇಯರ್ಸ್ ಬಿಟ್ಟು, ಕಣ್ಣಿಗೆ ಗಾಗಲ್ಸ್ ಹಾಕಿಕೊಂಡು ಫೋಟೋಗೆ ಫೋಸ್ ನೀಡಿರುವ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದರ ಬೆನ್ನಲ್ಲೇ ರಶ್ಮಿಕ ಮಂದಣ್ಣ(Rashmika Mandanna) ಅವರ ಸೀರೆಯ ಬೆಲೆ ಎಷ್ಟಿರಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸುದ್ದಿಗೊಳಾಗುತ್ತಿದ್ದು, ಮೂಲವೊಂದರ ಮಾಹಿತಿಯ ಪ್ರಕಾರ ಇದರ ಬೆಲೆಯು ಬರೊಬ್ಬರಿ 35000 ನಿಮ್ಮ ಮಾಹಿತಿ ಹೊರ ಬಿದ್ದಿದ್ದು ಇದನ್ನು ಕೇಳಿದಂತಹ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.