ರಶ್ಮಿಕಾ ಮಂದಣ್ಣ ಮಾಡಿದ ಈ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಅಪ್ಪು ಅಭಿಮಾನಿಗಳು. ರಶ್ಮಿಕಾ ನಡೆದುಕೊಂಡ ರೀತಿ ಎಷ್ಟು ಸರಿ ನೀವೇ ಹೇಳಿ

ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಇಡೀ ಸೌತ್ ಇಂಡಿಯಾದ ನಂಬರ್ ಒನ್ ಹೀರೋಯಿನ್. ಮತ್ತು ನ್ಯಾಷನಲ್ ಕ್ರಶ್ ಅಂತ ಕೂಡ ಇವರು ಫೇಮಸ್ ಆಗಿದ್ದಾರೆ. ಇದು ಕನ್ನಡಿಗರೆಲ್ಲ ಹೆಮ್ಮೆ ಪಡುವಂತಹ ವಿಚಾರ. ಆದರೆ ಕನ್ನಡಿಗರಿಗೆಲ್ಲಾ ರಶ್ಮಿಕಾ ಮಂದಣ್ಣ ಅವರು ಯಾಕಾದರೂ ಕರ್ನಾಟಕದಲ್ಲಿ ಹುಟ್ಟಿದರು ಎಂದು ಅನಿಸುವಷ್ಟು ಬೇಸರ ತಂದಿದೆ. ಪದೇ ಪದೇ ರಶ್ಮಿಕಾ ಮಂದಣ್ಣ ನಡೆದುಕೊಳ್ಳುವ ರೀತಿ ಪ್ರತಿಯೊಬ್ಬ ಕನ್ನಡಿಗನಿಗೂ ಮನಸ್ಸಿಗೆ ನೋ ವುಂಟು ಮಾಡುತ್ತದೆ.

ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಲ್ಲಿ ಹೆಸರು ಮಾಡಿ ಇದೀಗ ಬೇರೆ ಭಾಷೆಗಳಲ್ಲಿ ಮಿಂಚುತ್ತಿದ್ದಾಳೆ ಇದು ನಮಗೆಲ್ಲ ಹೆಮ್ಮೆಯ ವಿಚಾರವೇ ಸರಿ. ಈ ವಿಷಯದಲ್ಲಿ ಕನ್ನಡಿಗರಿಗೆ ಯಾವುದೇ ಬೇಸರವಿಲ್ಲ. ಬೇರೆ ಭಾಷೆ ಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಒಂದು ದಿನ ಕೂಡ ನಾನು ಕನ್ನಡದ ಹುಡುಗಿ ಎಂದಾಗಲಿ ಅಥವಾ ಕನ್ನಡದ ಮೇಲಿರುವ ಭಾಷಾಭಿಮಾನ ವಾಗಲಿ ತೋರಿಸಿಲ್ಲ. ರಶ್ಮಿಕಾಳ ಈ ಧಿಮಾಕಿನ ವ್ಯಕ್ತಿತ್ವ ಕನ್ನಡಿಗರಿಗೆ ಕೋಪ ತರಿಸುತ್ತದೆ.

ಇದೀಗ ರಶ್ಮಿಕಾ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ರಶ್ಮಿಕಾ ಮಂದಣ್ಣ ಪುನೀತ್ ಜೊತೆ ಅಂಜನಿಪುತ್ರ ಎಂಬ ಚಿತ್ರದಲ್ಲಿ ನಟಿಸಿದ್ದರು. ಪುನೀತ್ ಅವರ ಜತೆ ತೆರೆಹಂಚಿಕೊಂಡಿದ್ದರು ಸಹ ರಶ್ಮಿಕಾಗೆ ಪುನೀತ್ ಅವರ ಹುಟ್ಟುಹಬ್ಬದ ದಿನ ನೆನಪಾಗಲಿಲ್ಲ. ಅಪ್ಪು ಅವರ ಹುಟ್ಟಿದ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ವಿಶ್ ಕೂಡ ಮಾಡಿಲ್ಲ. ಸಿನಿಮಾ ಶೂಟಿಂಗ್ ಕೆಲಸದಲ್ಲಿ ರಶ್ಮಿಕಾ ಬ್ಯುಸಿಯಾಗಿರಬಹುದು ಎಂದು ನೀವೆಲ್ಲ ಅಂದುಕೊಳ್ಳಬಹುದು.

ಆದ್ರೆ ರಶ್ಮಿಕಾ ಅವರಿಗೆ ಅಪ್ಪು ಅವರ ಹುಟ್ಟಿದ ದಿನ ಗೊತ್ತಿದ್ದರೂ ಕೂಡ ವಿಶ್ ಮಾಡದೇ ಇರುವುದು ವಿಲಕ್ಷಣ. ಪುನೀತ್ ಅವರ ಹುಟ್ಟುಹಬ್ಬದ ಹಿಂದಿನ ದಿನ ವಿಜಯ್ ದೇವರಕೊಂಡ ಅವರ ತಮ್ಮನ ಹುಟ್ಟಿದ ದಿನವಾಗಿತ್ತು. ಅಂದರೆ ಮಾರ್ಚ್ 16 ರಂದು ರಶ್ಮಿಕಾ ವಿಜಯ್ ದೇವರುಕೊಂಡ ಅವರ ತಮ್ಮ ಆನಂದ್ ದೇವರುಕೊಂಡ ಅವರ ಬರ್ತ್ ಡೇ ಗೆ ಇನ್ ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ವಿಶ್ ಮಾಡಿದ್ದಾರೆ. ತಾನು ತೆರೆಹಂಚಿಕೊಂಡ ನಟನ ತಮ್ಮನಿಗೆ ವಿಶ್ ಮಾಡಲು ರಶ್ಮಿಕಾಗೆ ಸಮಯ ಸಿಕ್ಕಿದೆ.

ಅದೇ ಮರುದಿನ ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ರಶ್ಮಿಕಾಗೆ ಹತ್ತು ಸೆಕೆಂಡ್ ಗಳ ಕನಿಷ್ಟ ಸಮಯ ಇರಲಿಲ್ಲವಾ ಎಂದು ಅಭಿಮಾನಿಗಳು ಪ್ರಶ್ನೆ ಹಾಕಿದ್ದಾರೆ. ಪುನೀತ್ ಅವರ ಜೊತೆ ತೆರೆ ಹಂಚಿಕೊಂಡ ಪ್ರತಿಯೊಬ್ಬ ನಟ ನಟಿಯರು ಕೂಡ ಪುನೀತ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಜೇಮ್ಸ್ ಚಿತ್ರಕ್ಕೆ ಕೂಡ ಶುಭ ಕೋರಿದ್ದರು ಆದರೆ ರಶ್ಮಿಕಾ ಮಂದಣ್ಣ ಮಾತ್ರ ಪುನೀತ್ ಅವರಿಗೆ ವಿಶ್ ಮಾಡದೇ ಇರುವುದು ರಶ್ಮಿಕಾ ಮೇಲೆ ಇದ್ದ ಅಭಿಮಾನ ಕಡಿಮೆಯಾಗಿದೆ.

Leave a Comment