ಕಾಶ್ಮೀರಿ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಸಾಯಿ ಪಲ್ಲವಿಗೆ ಚಳಿ ಬಿಡಿಸಿದ ಪಬ್ಲಿಕ್ ಟಿವಿ ರಂಗಣ್ಣ ಇಲ್ಲಿದೆ ನೋಡಿ ವಿಡಿಯೋ

ಸಾಯಿ ಪಲ್ಲವಿಯ ಹೇಳಿಕೆಗೆ ಬಂತು ಭಾರಿ ವಿರೋಧ; ಪಬ್ಲಿಕ್ ಟಿವಿ ರಂಗಣ್ನ ಸಾಯಿ ಪಲ್ಲವಿ ಮೇಲೆ ಫುಲ್ ಗರಂ. ನಟಿ ಸಾಯಿ ಪಲ್ಲವಿ ಇಂದು ನ್ಯಾಷನಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ಅಷ್ಟೇ ಅಲ್ಲ ’ಗಾರ್ಗಿ’ಯಾಗಿ ಕನ್ನಡಕ್ಕೂ ಕೂಡ ಇನ್ನೇನು ಪಾದಾರ್ಪಣೆ ಮಾಡಲಿದ್ದಾರೆ. ಸ್ವತಃ ತಾವೇ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಕನ್ನಡಿಗರ ಮನ ಗೆದ್ದಿದ್ದರು ಈ ಸಿಂಪಲ್ ಸ್ಟಾರ್! ಆದರೆ ಅದೇ ನಟಿ ಇಂದು ವಿವಾದವೊಂದನ್ನ ಸೃಷ್ಟಿಸಿಕೊಂಡಿದ್ದಾರೆ ಅವರು ಇತ್ತೀಚಿಗೆ ನೀಡಿರುವ ಒಂದು ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿವೆ.

ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು? ನಟಿ ಸಾಯಿ ಪಲವಿ ತಮ್ಮ ’ವಿರಾಟ ಪರ್ವಂ’ ಸಿನಿಮಾ ಪ್ರಚಾರದ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ. ಸಂದರ್ಶನದಲ್ಲಿ ಅವರಿಗೆ ಕೇಳಲಾದ ಪ್ರಶ್ನೆಯೊಂದಕ್ಕೆ ’ನೀವು ಕಾಶ್ಮೀರ ಪಂಡಿತರ ಹ’ತ್ಯೆಯನ್ನು ಧಾರ್ಮಿಕ ಸಂಘರ್ಷ ಎನ್ನುವುದಾದರೆ ಗೋವುಗಳನ್ನು ಸಾಗಿಸುತ್ತಿದ್ದವನ ಮೇಲೆ ಹಲ್ಲೆ ಮಾಡಿದ್ದೂ ಅದೇ ಅಲ್ಲವೇ. ಇದೆರಡರ ನಡುವೆ ವ್ಯತ್ಯಾಸ ಏನಿದೆ?’ ಎಂದು ಪ್ರಶ್ನಿಸಿದ್ದಾರೆ’. ಈ ಒಂದು ಹೇಳಿಕೆ ಹಲವಾರು ವಿವಾದಗಳಿಗೆ ಕಾರಣವಾಗಿದೆ.

ನಟಿ ಸಾಯಿಪಲ್ಲವಿ ಹೇಳುತ್ತಿರುವ ಮಾತುಗಳ ಹಿಂದಿನ ಉದ್ದೇಶ ಸರಿಯಾದೆ ಎನ್ನುವುದು ಹಲವರ ಅಭಿಪ್ರಾಯ. ಯಾಕಂದರೆ ಅವರು ಹೇಳುವಂತೆ ’ತುಳಿತಕ್ಕೊಳಗಾದವದವರನ್ನು ರಕ್ಷಿಸಬೇಕು’ ಸಮಾನರ ನಡುವೆ ಹೋರಾಟ ಇರಬೇಕೆ ಹೊರತು ಹೆಚ್ಚು ಸಂಖ್ಯೆಯ ಜನರು ಕಡಿಮೆ ಸಂಖ್ಯೆ ಇರುವವರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಇವರ ಈ ಮಾತು ಅಕ್ಷರಶಃ ಸತ್ಯ. ಆದರೆ ಅಂದು ನಡೆದ ಕಾಶ್ಮೀರ ಪಂಡಿತರ ಹತ್ಯೆಗೂ, ಗೋವುಗಳನ್ನು ಕ’ಡಿಯಲು ಸಾಗಿಸುತ್ತಿದ್ದವನನ್ನು ಹೀದಿದು ಥಳಿಸಿದ್ದಕ್ಕೂ ಹೋಲಿಕೆ ಮಾಡಿದ್ದು ಸರಿಯಿಲ್ಲ ಎನ್ನುವುದು ಹಲವರ ವಾದ.

ಇನ್ನು ಸಾಯಿ ಪಲ್ಲವಿಯ ಈ ಮಾತುಗಳಿಗೆ ಸಂಬಂಧಪಟ್ಟಂತೆ ಮಾತನಾಡಿದ್ದ, ಪಬ್ಲಿಕ್ ಟಿವಿ ರಂಗಣ್ನ ಮೊದಲು ಸರಿಯಾಗಿ ಇತಿಹಾಸ ಓದಿಕೊಂಡು ಬರುವಂತೆ ಸಾಯಿ ಪಲ್ಲವಿಗೆ ಹೇಳಿದ್ದಾರೆ. ಎಲ್ಲಿಂದ ಎಲ್ಲಿಗೆ ಹೋಲಿಕೆ, ಕಾಶ್ಮೀರಿ ಪಂಡಿತರ ಹ’ತ್ಯೆಯ ವಿಷಯವೇ ಬೇರೆ, ಗೋವು ಸಾಕಣಿಕೆ ಮಾಡಿದವನನ್ನು ಹಲ್ಲೆ ಗೊಳಿಸಿದ್ದ ವಿಷಯವೇ ಬೇರೆ. ಇದೆರಡಕ್ಕೂ ಹೋಲಿಕೆ ಮಾಡುವುದು ತಪ್ಪು ಅಂತ ರಂಗಣ್ಣ ಸಾಯಿಪಲ್ಲವಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಸಾಯಿ ಪಲ್ಲವಿಯವರ ಮಾತಿಗೆ ಸೆಲಿಬ್ರೆಟಿಗಳು, ನೆಟ್ಟಿಗರು ಪರ ವಿರೋಧ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment