Rakshith Shetty: ಕೊನೆಗೂ ತೆಲುಗು ನೆಲದಲ್ಲೇ ರಶ್ಮಿಕ ಮಂದಣ್ಣ ಬಗ್ಗೆ ಮನವಿಚ್ಚಿ ಮಾತನಾಡಿದ ರಕ್ಷತ್ ಶೆಟ್ಟಿ! ಹೇಳಿದ್ದೆ ಬೇರೆ

Rakshith Shetty: ಸ್ನೇಹಿತರೆ, ಒಂದು ರಶ್ಮಿಕ(Rashmika) ಹಾಗೂ ರಕ್ಷಿತ್ ಶೆಟ್ಟಿ(Rakshith Shetty) ನಡುವೆ, ಬ್ರೇಕ್ ಅಪ್ ಎಂಬ ಮಾಯೇ ಬರದೇ ಹೋಗಿದ್ದಲ್ಲಿ ಇಂದು ಇಬ್ಬರಿಬ್ಬರು ಸಂಸಾರಿಕ ಜೀವನದ ಖುಷಿಯನ್ನು ಅನುಭವಿಸುತ್ತಾ ಬಹಳನೇ ಸಂತೋಷದಿಂದ ಇರುತ್ತಿದ್ದರು. ಹೌದು ಸ್ನೇಹಿತರೆ, ಕಿರಿಕ್ ಪಾರ್ಟಿ(Kirik Party) ಸಿನಿಮಾ ಮುಗಿದ ನಂತರ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಮೊಳಕೆ ಒಡೆದು ಮದುವೆಯಾಗಬೇಕೆಂದು ನಿರ್ಧರಿಸಿ ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು.

ಆದರೆ ರಶ್ಮಿಕ ಮಂದಣ್ಣ ಅವರಿಗೆ ಟೋಲಿವುಡ್ ಸಿನಿಮಾ ಗಳಿಂದ ಆಫರ್ ಹೆಚ್ಚಾದ ನಂತರ ಕೆಲ ವೈಯಕ್ತಿಕ ಕಾರಣಗಳನ್ನು ನೀಡಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಅದಾದ ಬಳಿಕ ರಶ್ಮಿಕಾರನ್ನು ಸಿಕ್ಕಾಪಟ್ಟೆ ಮಾಡಲಾಗಿತ್ತು, ಇದ್ಯಾವುದಕ್ಕೂ ತುಟಿ ಬಿಚ್ಚಿ ಮಾತನಾಡದ ರಕ್ಷಿತ್ ಶೆಟ್ಟಿಯವರು ತೆಲುಗು ನೆಲದಲ್ಲಿಯೇ ರಶ್ಮಿಕಾ ಮಂದಣ್ಣರ ಬಗ್ಗೆ ಧ್ವನಿಯೆತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯ ತ್ರಿಬಲ್ ಚಾರ್ಲಿ ಸಿನಿಮಾದಿಂದಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇದೀಗ ಇವರ ಸಪ್ತಸಾಗರದಾಚೆಯಲ್ಲೂ(Santa Sagaradache ello) ಸಿನಿಮಾ ಕೂಡ ಸಪ್ತಸಾಗರವನ್ನು ದಾಟಿ ಸುದ್ದಿಗೊಳಾಗುತ್ತಿದೆ. ಹೌದು ಗೆಳೆಯರೇ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ರವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಪ್ರತಿಯೊಬ್ಬ ಹುಡುಗರ ಮನಸ್ಸನ್ನು ನಾಟುವಂತಿದ್ದು ಪ್ರತಿ ಪ್ರೇಮಿಗಳು ಬಹಳ ಫೀಲ್ ಮಾಡಿಕೊಂಡು ಈ ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ.

ಇದೀಗ ಈ ಸಿನಿಮಾವನ್ನು ತೆಲುಗಿನಲ್ಲೂ ಬಿಡುಗಡೆ ಮಾಡುವ ಯೋಜನೆ ಹೂಡಿರುವ ಸಪ್ತಸಾಗರದ ಆಚೆಯಲ್ಲೂ ಟೀಂ ಟಾಲಿವುಡ್ ನಲ್ಲಿ ತಮ್ಮ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಅದಕ್ಕಾಗಿ ಸಂದರ್ಶನ ಒಂದರಲ್ಲಿ ಯೂಟ್ಯೂಬರ್ ಜೊತೆಗೆ ಮಾತನಾಡಿದ ರಕ್ಷಿತ್ “ಆಕೆಗೆ ಸದಾ ದೊಡ್ಡ ಕನಸುಗಳು ಇರುತ್ತಿದ್ದವು ಆ ಕನಸುಗಳನ್ನು ಈಗ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರ ಸಾಧನೆಗೆ ಭೇಷ್ ಅನ್ನಬೇಕು, ಆಕೆಯ ಸಕ್ಸಸ್ ಬಗ್ಗೆ ಖುಷಿ ಇದೆ” ಎಂದು ಪ್ರಬುದ್ಧವಾಗಿ ರಶ್ಮಿಕ ಅವರ ಬಗ್ಗೆ ಮಾತನಾಡಿದರು.

ಸಾಮಾನ್ಯವಾಗಿ ಯಾವುದೇ ಹುಡುಗರಿಗಾಗಲಿ ಅಥವಾ ಹುಡುಗರಿಗಾಗಲಿ ತಾವು ಮನಸಾರೆ ಇಷ್ಟಪಟ್ಟು ಪ್ರೀತಿಸಿದಂತಹ ವ್ಯಕ್ತಿ ನಮ್ಮನ್ನು ಬಿಟ್ಟು ಹೋದರೆ ಅವರ ಮೇಲೆ ನಮಗೆ ಕೋಪ ಮೂಡುವುದು ಸಹಜ ಆದ್ರೆ ರಕ್ಷಿತ್ ಶೆಟ್ಟಿ(Rakshith Shetty) ಮಾತ್ರ ಅದ್ಯಾವುದನ್ನು ಮಾಡಿಕೊಳ್ಳದೆ ವಾಸ್ತವವನ್ನು ಅರ್ಥ ಮಾಡಿಕೊಂಡು ಇತರರಿಗೂ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗುತ್ತದೆ.

ಇದನ್ನೂ ಓದಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಿವೇದಿತಾ ಗೌಡ ಫ್ಯಾಮಿಲಿ ಫೋಟೋ! ನಿವೇದಿತಾರ ತಾಯಿ ಕಂಡು ಸಂತೂರ್ ಮಮ್ಮಿ ಎಂದ ನೆಟ್ಟಿಗರು!

Leave a Comment