Rakshith Shetty: ಸಿಂಗರ್ ಐಶು ರಂಗನಾಥ್ ಜೊತೆ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ! ನೆಟ್ಟಿಗರ ಗಮನ ಸೆಳೆಯುತ್ತಿದೆ

Rakshith Shetty ಸ್ನೇಹಿತರೆ, ನಮ್ಮ ಏರಿಯಾದಲ್ಲಿ ಒಂದಿನ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ರಕ್ಷಿತ್ ಶೆಟ್ಟಿ (Rakshith Shetty) ಇಂದು ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟ. ಚಿಕ್ಕಂದಿನಿಂದಲೂ ನಟನೆ ಹಾಗೂ ನೃತ್ಯದ ಮೇಲೆ ಬಹಳ ಆಸಕ್ತಿ ಹೊಂದಿದ್ದಂತಹ ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ಮುಗಿಸಿದೊಡನೆ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ತುಗ್ಲಕ್, ವಾಸ್ತು ಪ್ರಕಾರ, ರಿಕ್ಕಿ,

ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಸೇರಿದಂತೆ ಮುಂತಾದ ಯಶಸ್ವಿ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ತುಳುನಾಡ ದೇಸಿ ಸೊಗಡಿನ ಕಲೆಯ ಮೂಲಕ 13 ವರ್ಷಗಳಿಂದ ನಮ್ಮೆಲ್ಲರನ್ನು ರಂಜಿಸುತ್ತ ಬಂದಿರುವ ರಕ್ಷಿತ್ ಶೆಟ್ಟಿ (Rakshith Shetty) ಅವರಿಗೆ ತಾವು ಬೆಳೆದು ತಮ್ಮ ಸುತ್ತಮುತ್ತಲಿರುವವರನ್ನು ಬೆಳೆಸುವಂತಹ ಗುಣವಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೀಗಾಗಿ ಹೊಸ ಹೊಸ ಪ್ರತಿಭೆಗಳನ್ನೆಲ್ಲ ಗುರುತಿಸಿ ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶವನ್ನು ರಕ್ಷಿತ್ ಕಲ್ಪಿಸಿ ಕೊಡುತ್ತಾರೆ. ಹೀಗೆ ಸಿನಿಮಾ ರಂಗದ ಎಲ್ಲಾ ಕಲಾವಿದರೊಂದಿಗೆ ಒಳ್ಳೆಯ ಭಾಂದವ್ಯವನ್ನು ಕಾಯ್ದುಕೊಂಡಿರುವ ರಕ್ಷಿತ್ ಶೆಟ್ಟಿ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ಸಿನಿಮಾ ರಂಗದ ಪ್ರಮುಖ ಹೆಣ್ಣು ಮಕ್ಕಳಿಗೆ ಉಡುಗೊರೆಗಳನ್ನು ಕಳಸಿ ಕೊಟ್ಟಿದ್ದರು.

ಅದರಂತೆ ಕನ್ನಡ ಚಿತ್ರರಂಗದ ಖ್ಯಾತ ಹಾಡುಗಾರ್ತಿ ಐಶು ರಂಗನಾಥ್(Aishu Ranghanath) ಅವರ ಮನೆಗೆ ಭೇಟಿ ನೀಡಿ ಉಡುಗೊರೆ ಒಂದನ್ನು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದರ ಕೆಲ ಫೋಟೋಗಳನ್ನು ಐಶು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಅದ್ಬುತ ಪ್ರತಿಕ್ರಿಯೆ ದೊರಕುತ್ತಿದೆ.

ಹೀಗೆ ಕಳೆದ ವರ್ಷ ತ್ರಿಬಲ್ ಸೆವೆನ್ ಚಾರ್ಲಿ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನೀಡಿದ್ದ ರಕ್ಷಿತ್ ಶೆಟ್ಟಿ ಅವರು ಸದ್ಯ ಸಪ್ತಸಾಗರದಾಚೆ ಎಲ್ಲೋ(Saptha sagaradache ello) ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ಒಂದರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಅಭಿಮಾನಿಗಳು ರಕ್ಷಿತ್ ಶೆಟ್ಟಿ ಅವರ ಮತ್ತೊಂದು ಹೊಸ ಪ್ರಯತ್ನಕ್ಕೆ ತುಂಬು ಹೃದಯದ ಪ್ರೀತಿ ಹಾಗೂ ಪ್ರೋತ್ಸಾಹವನ್ನು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಇದನ್ನೂ ಓದಿ ಒಂದು ಗಂಟೆಯ ಕಾಲ ಖಡಕ್ ಪೊಲೀಸ್ ಅಧಿಕಾರಿಯಾದ 8 ವರ್ಷದ ಬಾಲಕ, ತಮ್ಮ ಸ್ಥಾನವನ್ನೇ ಬಿಟ್ಟುಕೊಟ್ಟ ಪೊಲೀಸ್ ಆಫೀಸರ್!

Leave a Comment