ನಿರ್ದೇಶಕ ರಾಜಮೌಳಿ ಅವರು ಭಾರತದ ನಂಬರ್ ಒನ್ ಡೈರೆಕ್ಟರ್.ರಾಜಮೌಳಿ ಅವರು ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ರಾಜಮೌಳಿ ಅವರು ಸೋಲಿಲ್ಲದ ಸರದಾರ. ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಇವರನ್ನು ಕರೆಯುತ್ತಾರೆ ಯಾಕೆಂದರೆ ಇವರು ಸಿನಿಮಾ ಮಾಡಿರುವುದು ತುಂಬಾ ಕಡಿಮೆಯಾದರೂ ಮಾಡಿರುವ ಸಿನಿಮಾಗಳ ಯಶಸ್ಸನ್ನು ಕಂಡಿವೆ. ಸತತವಾಗಿ ಯಶಸ್ಸನ್ನು ಕಾಣಬೇಕೆಂದರೆ ನಿರ್ದೇಶಕನಿಗೆ ಸೂಪರ್ ಟ್ಯಾಲೆಂಟ್ ಇರಬೇಕು.
ಇತ್ತೀಚೆಗೆ ತೆರೆಕಂಡ ರಾಜಮೌಳಿಯವರ ಆರ್ ಆರ್ ಆರ್ ಸಿನೆಮಾ ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಾಹುಬಲಿ ಚಿತ್ರ ಮಾಡಿದಾಗಲೇ ರಾಜಮೌಳಿ ಅವರು ಪ್ಯಾನ್ ಇಂಡಿಯನ್ ನಿರ್ದೇಶಕರಾಗಿದ್ದರು ಇದೀಗ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.ಸದ್ಯದ ಮಟ್ಟಿಗೆ ರಾಜಮೌಳಿ ಅವರು ಭಾರತ ಚಿತ್ರರಂಗದ ನಂಬರ್ ಒನ್ ನಿರ್ದೇಶಕ ಎಂದರೆ ತಪ್ಪಾಗಲಾರದು. ಇವರ ಸಿನಿಮಾಗಳು ಹೈ ಬಜೆಟ್ ಸಿನಿಮಾಗಳೇ ಇರುತ್ತವೆ. ಹಾಗೆ ಸಿನಿಮಾ ದೊಡ್ಡ ಮಟ್ಟದಲ್ಲಿ ಲಾಭವನ್ನು ಕೂಡ ಪಡೆಯುತ್ತೆ. ರಾಜಮೌಳಿಯವರು ನಿರ್ದೇಶಿಸುವ ಸಿನಿಮಾಗಳಿಗೆ ತೆಗೆದುಕೊಳ್ಳುವ ಸಂಭಾವನೆ ಕೂಡ ದೊಡ್ಡ ಮಟ್ಟದಲ್ಲಿರುತ್ತದೆ.
ಉದಾಹರಣೆಗೆ ಈ ವರ್ಷ ತೆರೆಕಂಡ ಆರ್ ಆರ್ ಆರ್ ಚಿತ್ರಕ್ಕೆ ರಾಜಮೌಳಿ ಅವರು ಸಂಭಾವನೆಯಂತೆ ಚಿತ್ರದ ಲಾಭಾಂಶದಲ್ಲಿ ಶೇಕಡಾ ಮೂವತ್ತ ರಷ್ಟು ಹಣವನ್ನು ಪಡೆದಿದ್ದಾರೆ. ಆರ್ ಆರ್ ಆರ್ ಚಿತ್ರ ಒಂದು ಸಾವಿರ ಕೋಟಿಗೂ ಅಧಿಕ ಲಾಭಾಂಶ ಪಡೆದಿತ್ತು. ರಾಜಮೌಳಿ ಅವರಿಗೆ ಕಡಿಮೆಯೆಂದರೂ ಮುನ್ನೂರು ಕೋಟಿ ರುಪಾಯಿಗಳ ಸಂಭಾವನೆ ಸಿಕ್ಕಿದೆ. ಒಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುವ ರಾಜಮೌಳಿ ಅವರ ಬಳಿ ಇರುವ ಕಾರುಗಳು ಮತ್ತು ಅದರ ಮೊತ್ತ ಎಷ್ಟು ಗೊತ್ತಾ ಮುಂದೆ ಓದಿ..
ರಾಜಮೌಳಿ ಅವರ ಬಳಿ ಇರುವ ಅತ್ಯಂತ ಅಧಿಕ ಮೊತ್ತದ ಕಾರು ಎಂದರೆ ರೇಂಜ್ ರೋವರ್. ಇವರ ಬಳಿ ಎರಡು ಕೋಟಿ ರುಪಾಯ ರೇಂಜ್ ರೋವರ್ ಕಾರು ಇದೆ. ಹಾಗೆ ಒಂದೂವರೆ ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ 350D ಕಾರು ಕೂಡ ಇವರ ಬಳಿಯಿದೆ. ಹಾಗೆ ಒಂದು ಮುಕ್ಕಾಲು ಕೋಟಿ ರುಪಾಯಿಯ ಬಿಎಂಡಬ್ಲ್ಯೂ ಏಳನೇ ಸೀರೀಸ್ ಕಾರಿದೆ. ಇಷ್ಟೇ ಅಲ್ಲದೆ ರಾಜಮೌಳಿ ಅವರ ಬಳಿ ನಲವತ್ತು ಲಕ್ಷ ಬೆಲೆ ಬಾಳುವ ಟೊಯೋಟಾ ಫಾರ್ಚುನರ್ ಮತ್ತು ಮಿನಿ ಕ್ಲಬ್ ಮ್ಯಾನ್ ಕಾರು ಗಳಿವೆ .
ಬರೋಬ್ಬರಿ ಐದು ಐಷಾರಾಮಿ ಕಾರುಗಳು ಇದ್ದರೂ ಕೂಡ ರಾಜಮೌಳಿಯವರು ಇನ್ನೊಂದು ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ್ದಾರೆ ಈ ಕಾರಿನ ಹೆಸರು ವೋಲ್ವೋ ಎಕ್ಸ್ ಸಿ 40. ಫ್ಯಾಮಿಲಿ ಅವರ ಜತೆ ಓಡಾಡಲಿಕ್ಕೆ ತುಂಬಾ ಕಂಫರ್ಟ್ ಆಗಿರುತ್ತದೆ ಎಂದು ವೊಲ್ವೋ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಐವತ್ತು ಲಕ್ಷ ರೂಪಾಯಿ. ಒಟ್ಟಾರೆ ರಾಜಮೌಳಿ ಅವರ ಬಳಿ ಆರು ಐಷಾರಾಮಿ ಕಾರುಗಳ ಕಲೆಕ್ಷನ್ ನೀವೇ ಮತ್ತು ಒಟ್ಟು ಎಲ್ಲಾ ಕಾರುಗಳ ಬೆಲೆ ಆರು ಕೋಟಿಗೂ ಅಧಿಕ..