ಕಾಂತರಾ ಚಿತ್ರದ ಬಜೆಟ್ ಬಗ್ಗೆ ಹೇಳಿ ವಿವಾದವನ್ನು ಮೈಮೇಲೆ ಹಾಕಿಕೊಂಡ್ರಾ ರಾಜ್ B ಶೆಟ್ಟಿ

ಸ್ನೇಹಿತರೆ, ಸೆಪ್ಟೆಂಬರ್ 30ನೇ ತಾರೀಕು 2022 ರಂದು ಕೇವಲ ಕನ್ನಡ ಭಾಷೆಯಲ್ಲಿ ತೆರೆಗೆ ಬಂದಂತಹ 16 ಕೋಟಿ ಬಜೆಟ್ ನ ಕಾಂತರಾ(Kantara) ಸಿನಿಮಾ ಅಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತದೆ ಎಂಬ ಸಣ್ಣ ನಿರೀಕ್ಷೆಯು ಸಿನಿಮಾ ತಂಡದವರಿಗೆ ಇರಲಿಲ್ಲ. ಕನ್ನಡಿಗರು ಮೆಚ್ಚಿ ಫುಲ್ ಮಾರ್ಕ್ಸ್ ನೀಡಿದಂತಹ ಈ ಸಿನಿಮಾವನ್ನು ಹಿಂದಿ ತಮಿಳು ತೆಲುಗು ಭಾಷೆಗೂ ಡಬ್ ಮಾಡಲಾಯಿತು. ಹೀಗೆ ಬಾಕ್ಸ್ ಆಫೀಸ್ ನಲ್ಲಿ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಾ ಬಾಲಿವುಡ್ ಮಂದಿಗೆ ನಡುಕ ಹುಟ್ಟಿಸಿದಂತಹ ಈ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಚಿತ್ರದಲ್ಲಿ ಅಭಿನಯಿಸಿದಂತಹ

ರಿಷಬ್ ಶೆಟ್ಟಿ(Rishab Shetty) ಹಾಗೂ ಸಪ್ತಮಿ ಗೌಡ (Saptami Gowda) ಸೇರಿದಂತೆ ಮುಂತಾದ ಕಲಾವಿದರಿಗೆ ಅದ್ಭುತ ಜನಪ್ರಿಯತೆ ದೊರಕಿದ್ದು ರಿಷಬ್ ಶೆಟ್ಟಿ ಇದರ ಎರಡನೇ ಭಾಗದ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೌದು ಗೆಳೆಯರೇ ಕಾಂತರಾ ಸಿನಿಮಾದ ನಟ ಹಾಗೂ ನಿರ್ದೇಶಕನ ಪಾತ್ರವನ್ನು ವಹಿಸಿರುವಂತಹ ರಿಷಬ್ ಶೆಟ್ಟಿಯವರು ಆಗಾಗ ವೇದಿಕೆಯ ಮೇಲೆ ತಮ್ಮ ಕಾಂತರಾ ಪಾರ್ಟ್ ಟು ಕುರಿತದ ಅಪ್ಡೇಟ್ಗಳನ್ನು ನೀಡುತ್ತಿದ್ದು ಇದೀಗ ಸಂದರ್ಶನ ಒಂದರಲ್ಲಿ ಕಾಂತರಾ ಚಿತ್ರದ ಕುರಿತು ಮಾತನಾಡಿದ ರಾಜ ಬಿ ಶೆಟ್ಟಿ ವಿವಾದವನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದಾರೆ.

ಹೌದು ಗೆಳೆಯರೇ ಟೋಬಿ ಸಿನಿಮಾ ನಮ್ಮ ಕರ್ನಾಟಕದಲ್ಲಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡ ಬೆನ್ನಲ್ಲೇ ಮಲಯಾಳಂನಲ್ಲಿಯು ಡಬ್ಬಾಗುತ್ತಿದ್ದು ಅಲ್ಲಿನ ಸಂದರ್ಶಕರೊಂದಿಗೆ ತಮ್ಮ ಸಿನಿಮಾದ ಕುರಿತು ಪ್ರಚಾರ ಮಾಡುವಾಗ ಕಾಂತರ ಸಿನಿಮಾ ಕುರಿತದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು ಗೆಳೆಯರೇ ಕಾಂತಾರ ಟು ಸಿನಿಮಾ ಸ್ಕ್ರಿಪ್ಟ್ ಹಂತದಲ್ಲಿದೆ ಇದು ನೂರು ಕೋಟಿ ಬಜೆಟ್ ನಲ್ಲಿ ತಯಾರಾಗುವಂತಹ ಬಿಗ್ ಬಜೆಟ್ ಸಿನಿಮಾ ಎಂದು ರಾಜ್ ಬಿ ಶೆಟ್ಟಿ(Raj B Shetty) ಹೆಮ್ಮೆಯಿಂದ ಹೇಳಿದ್ದೆ ವಿವಾದಕ್ಕೆ ಕಾರಣವಾಗಿದೆ.

ಹೀಗೆ ಸಿನಿಮಾ ತಂಡ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕುವ ಮುನ್ನವೆ ರಾಜ್ ಬಿ ಶೆಟ್ಟಿ(Raj B Shetty) ಬಜೆಟ್ ಈ ಕುರಿತು ಮಲಯಾಳಂ ಸಂದರ್ಶನದಲ್ಲಿ ಹೇಳಿರುವುದು ಸದ್ಯ ಸಿನಿಮಾ ತಂಡಕ್ಕೆ ಬೇಸರವನ್ನು ತಂದಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ.

ಇದನ್ನೂ ಓದಿ ಇಂತಹ ಇಳಿ ವಯಸ್ಸಿನಲ್ಲಿಯೂ ಆರೋಗ್ಯ ಲೆಕ್ಕಿಸದೆ ಕಾವೇರಿ ನೀರಿಗಾಗಿ ಲೀಲಾವತಿ ಅವರು ಏನ್ ಮಾಡಿದ್ದಾರೆ ಗೊತ್ತಾ..

Leave a Comment