ಅಪ್ಪು ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ರಾಘಣ್ಣ ಮಾಡಿದ ಕೆಲಸವೇನು ನೋಡಿ! ನಿಜಕ್ಕೂ ಮನ ಕಲಕುವ ದೃಶ್ಯ

ಮಾರ್ಚ್ 17 ಕನ್ನಡಿಗರಿಗೆ ತುಂಬಾ ವಿಶೇಷವಾದ ದಿನ ಯಾಕೆಂದರೆ ಇಂದು ಪುನೀತ್ ಅವರ ಜನ್ಮದಿನ ಹಾಗೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಒಂದು ಕಡೆ ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅದರ ಇನ್ನೊಂದು ಕಡೆ ಅಪ್ಪು ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ. ಅಪ್ಪು ದಿನದ ಆಚರಣೆ ಯನ್ನು ಅಭಿಮಾನಿಗಳು ನಿನ್ನೆ (ಮಾರ್ಚ್ 16) ಯಿಂದಲೇ ಶುರು ಮಾಡಿ ಕೊಂಡಿದ್ದಾರೆ.

ಒಂದು ಕಡೆ ಥಿಯೇಟರ್ ಗಳಲ್ಲಿ ಪುನೀತ್ ಅವರ ಜೇಮ್ಸ್ ಚಿತ್ರ ತೆರೆ ಕಾಣುತ್ತಿದ್ದರೆ. ಇನ್ನೊಂದು ಕಡೆ ಪುನೀತ್ ಅವರ ಹುಟ್ಟು ಹಬ್ಬದ ಉತ್ಸವ ನಡೆಯುತ್ತಿದೆ. ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿದೆ. ಮಾರ್ಚ್ 17 ಬೆಳ್ಳಂಬೆಳಿಗ್ಗೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಶೋ ಗಳು ಪ್ರಾರಂಭವಾಗಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡಿದ್ದಾರೆ.

ಪುನೀತ್ ಅವರ ಕೊನೆಯ ಸಿನಿಮಾವನ್ನು ನೋಡಲು ದೊಡ್ಮನೆ ಕುಟುಂಬದ ಸದಸ್ಯರಾದ ರಾಘವೇಂದ್ರ ರಾಜ್ ಕುಮಾರ್ ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್ ಅವರು ಬೆಳಿಗ್ಗೆ 4 ಗಂಟೆಗೆ ಥಿಯೇಟರ್ ಗೆ ಹೋಗಿ ಜೇಮ್ಸ್ ಚಿತ್ರವನ್ನು ವೀಕ್ಷಿಸಿದ್ದಾರೆ. ಜೇಮ್ಸ್ ಚಿತ್ರವನ್ನು ವೀಕ್ಷಿಸುವ ವುದಕ್ಕಿಂತ ಮುಂಚೆ ರಾಘಣ್ಣನವರ ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ದೊಡ್ಡದಾದ ಕೇಕ್ ಕಟ್ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ರಾಘಣ್ಣ ಮತ್ತು ಕುಟುಂಬದವರು ಅಪ್ಪು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಅಪ್ಪು ಅವರಿಗೋಸ್ಕರ ಅಭಿಮಾನಿಗಳು ವಿಶೇಷವಾದ ಬ್ರಹತ್ ಆಕಾರದ ಕೇಕ್ ಒಂದನ್ನು ರೆಡಿ ಮಾಡಿದ್ದರು. ರಾಘಣ್ಣನವರು ಮುಂದೆ ನಿಂತು ಕೇಕನ್ನು ಕಟ್ ಮಾಡಿದ್ದಾರೆ. ಹಾಗೆ ಕಟ್ ಮಾಡಿದ ಮೊದಲ ಕೇಕ್ ಪೀಸ್ ಅನ್ನು ರಾಘಣ್ಣ ಅವರು ಆಕಾಶಕ್ಕೆ ಮುಖ ಮಾಡಿ ಕೇಕ್ ಪೀಸ್ ಅನ್ನು ಅಪ್ಪು ಅವರಿಗೆ ಅರ್ಪಿಸಿದ್ದಾರೆ. ಆಕಾಶಕ್ಕೆ ಕೈ ತೋರಿಸಿ ಅಪ್ಪು ಗೆ ಕೇಕ್ ತಿನ್ನಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಯುವ ರಾಜ್ಕುಮಾರ್ ಜೈ ಪವರ್ ಸ್ಟಾರ್ ಎಂಬ ಘೋಷಣೆ ಕೂಗಿದರು. ಈ ದೃಶ್ಯ ವನ್ನು ನೋಡಿ ಅಭಿಮಾನಿಗಳು ಭಾವುಕರಾದರು.

Leave a Comment