ಇತರರಿಗಿಂತ ತುಂಬಾನೇ ಸ್ಪೆಷಲ್ ಆಗಿ ಗಣೇಶ ಚತುರ್ಥಿಯನ್ನಾಚರಿಸಿದ ರಾಧಿಕಾ ಪಂಡಿತ್ ಮತ್ತು ಮಕ್ಕಳು ಕ್ಯೂಟೆಸ್ಟ್ ಫೋಟೋ ಇಲ್ಲಿದೆ ನೋಡಿ!

ಸ್ನೇಹಿತರೆ, ಬರುವಂತಹ ಪ್ರತಿಯೊಂದು ಹಬ್ಬವನ್ನು ಮನೆಯಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಅದರ ಹಿಂದಿನ ವೃತ್ತಂತಾವೇನು? ಹಾಗೂ ಹಬ್ಬವನ್ನು ಮಾಡುವುದು ಯಾಕೆ? ಎಂಬ ಎಲ್ಲಾ ವಿವರವನ್ನು ತಮ್ಮ ಎರಡು ಮುದ್ದಾದ ಮಕ್ಕಳಿಗೆ ತಿಳಿಸುವಂತಹ ತಾಯಿ ರಾಧಿಕಾ ಪಂಡಿತ್(Radhika Pandith) ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಈ ಬಾರಿ ಗಣೇಶ ಚತುರ್ಥಿಯನ್ನು ಬಹಳ ವಿಶೇಷವಾಗಿ ಆಚರಿಸಿದ್ದು,

ಅದರ ಕೆಳಗೆ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ರಾಧಿಕಾ ಪಂಡಿತ್(Radhika Pandith) ಅವರು ಹೊರಗಡೆಯಿಂದ ಗಣೇಶನನ್ನು ಮನೆಗೆ ಬರಮಾಡಿಕೊಳ್ಳುವ ಬದಲು ಮನೆಯಲ್ಲಿರುವಂತಹ ಬಣ್ಣದ ಮಣ್ಣನ್ನು(Clay) ಬಳಸಿ ತಮ್ಮ ಮಕ್ಕಳಿಗೆ ಗಣೇಶ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ. ಅದರಂತೆ ಐರ (Ayra) ಮತ್ತು ಯಥರ್ವ(Yatharva) ಇಬ್ಬರು ಕುಳಿತು ಬಣ್ಣ ಬಣ್ಣದ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮಾಡಿದ್ದು

ರಾಧಿಕಾ ಪಂಡಿತ್(Radhika Pandith) ತಮ್ಮ ಮಗಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಗಣೇಶನ ಮೂರ್ತಿಯಲ್ಲಾಗಿರುವಂತಹ ತಪ್ಪನ್ನು ತಿದ್ದುತಿದ್ದಾರೆ. ಆ ಸಂದರ್ಭದಲ್ಲಿ ಐರ ಕಿರುಚುತ್ತಿರುವಾಗಲೇ ಫೋಟೋಗ್ರಾಫರ್ ಮುದ್ದಿನ ಫೋಟೋಗಳನ್ನು ಕ್ಲಿಕ್ ಮಾಡಿ ಅವೆಲ್ಲವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್ “ಅದರಂತೆಯೇ ನಮ್ಮ ಪುಟ್ಟ ಮಕ್ಕಳು ಗಣೇಶನನ್ನು ಬರಮಾಡಿಕೊಂಡರು.

ಎಲ್ಲರಿಗೂ ಗೌರಿ ಗಣೇಶ ಚತುರ್ಥಿಯ ಶುಭಾಶಯಗಳು ನೀವೆಲ್ಲರೂ ಬಹಳ ಮೋಜು ಮಸ್ತಿ ಮಾಡಿದ್ದೀರಾ ಎಂದು ಭಾವಿಸುತ್ತೇನೆ. ನೀವು ಎಷ್ಟು ಮೋದಕ ಹಾಗೂ ಪತೋಲಿಗಳನ್ನು ಸೇವಿಸಿದ್ದೀರಾ ಎಂಬುದನ್ನು ಲೆಕ್ಕ ಹಾಕಬೇಡಿ ಎಲ್ಲರಿಗೂ ಮತ್ತೊಮ್ಮೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮ್ಮ ರಾಧಿಕಾ ಪಂಡಿತ್(Radhika Pandith)” ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಫೋಟೋಗಳನ್ನು ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಗೌರಿ ಗಣೇಶ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ದಂಪತಿಗಳು!

Leave a Comment