Radhika Pandit ರಾಕಿಂಗ್ ಸ್ಟಾರ್ ಯಶ್ ರವರ ಪತ್ನಿ ಹಾಗೂ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವಂತಹ ನಟಿ ರಾಧಿಕಾ ಪಂಡಿತ್(Radhika Pandit) ಅವರು ಕನ್ನಡ ಚಿತ್ರರಂಗದ ಬಹುಬೇಳಿಕೆ ನಾಯಕ ನಟಿಯಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದವರು. ಯಶ್ ಅವರನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂದರೂ ಕೂಡ ತಪ್ಪಾಗಲಾರದು.
ಹೌದು ಮಿತ್ರರೇ ಒಂದು ಕಾಲದಲ್ಲಿ ಪ್ರತಿಯೊಬ್ಬ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಮೊದಲ ಆಯ್ಕೆ ರಾಧಿಕಾ ಪಂಡಿತ್ ಅವರಾಗಿರುತ್ತಿದ್ದರು. ಈಗಲೂ ಕೂಡ ಅವರ ಅಭಿಮಾನಿಗಳು ಮತ್ತೆ ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಪಂಡಿತ್ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿ ಅನ್ನುವಂತಹ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಪುನೀತ್ ರಾಜಕುಮಾರ್(Puneeth Rajkumar) ಹಾಗೂ ರಾಧಿಕಾ ಪಂಡಿತ್ ರವರ ಕಾಂಬಿನೇಷನ್ ಸಾಕಷ್ಟು ಸೂಪರ್ ಹಿಟ್ ಆಗಿತ್ತು ಎನ್ನುವುದನ್ನು ಕೂಡ ನೀವು ಗಮನಿಸಬಹುದಾಗಿದೆ. ಅಪ್ಪು ಅವರ ಇಪ್ಪತೈದನೇ ಸಿನಿಮಾ ಆಗಿರುವಂತಹ ದೊಡ್ಮನೆ ಹುಡುಗ ಸಿನಿಮಾದಲ್ಲಿ ಕೂಡ ರಾಧಿಕಾ ಪಂಡಿತ್ ನಟಿಸಿದ್ದಾರೆ.
ದೊಡ್ಮನೆ ಹುಡುಗ ಸಿನಿಮಾದಲ್ಲಿ ರಾಧಿಕಾ ಪಂಡಿತ್(Radhika Pandit) ನಾಯಕಿಯಾಗಿ ಕಾಣಿಸಿಕೊಳ್ಳಲು ಎಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ನೋಡಲು ಹೋಗುವುದಾದರೆ ಭರ್ಜರಿ 25 ರಿಂದ 30 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿರಬಹುದು ಎಂಬುದಾಗಿ ಅಂದಾಜಿಸಲಾಗುತ್ತಿದೆ. ಈ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.