Radhika Pandit ನಟಿ ರಾಧಿಕಾ ಪಂಡಿತ್ ಹಾಗೂ ನಟ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರು ಕೂಡ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಕಿರುತೆರೆಯ ಮೂಲಕ ಒಟ್ಟಿಗೆ ನಟನೆಯ ಜರ್ನಿಯನ್ನು ಪ್ರಾರಂಭಿಸಿ ನಂತರ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡುತ್ತಾರೆ.
ಆರಂಭ ದಿನದಿಂದಲೂ ಕೂಡ ಇವರಿಬ್ಬರ ನಡುವೆ ಪ್ರೀತಿ ಇದ್ದರೂ ಕೂಡ ಚಿತ್ರರಂಗದಲ್ಲಿ ಯಾರಿಗೂ ತಿಳಿಯದ ಹಾಗೆ ಅದನ್ನು ನಿರ್ವಹಿಸಿಕೊಂಡು ಬಂದ ರೀತಿ ಹಾಗೂ ಪ್ರೀತಿಯ ಮೇಲೆ ಇಬ್ಬರಿಗೂ ಇದ್ದಂತಹ ನಂಬಿಕೆ ಹಾಗೂ ಗೌರವ ಅವರಿಬ್ಬರ ಪ್ರೀತಿಯನ್ನು ಸಾಕಷ್ಟು ದೀರ್ಘ ಕಾಲಗಳ ವರೆಗೂ ಕೂಡ ಉಳಿಸಿಕೊಂಡು ಬರುವಂತೆ ಮಾಡಿತು.
ಇನ್ನು 2016ರಲ್ಲಿ ಚಿತ್ರರಂಗದಲ್ಲಿ ಒಂದು ಹಂತದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದ ನಂತರ ರಾಧಿಕಾ ಪಂಡಿತ್(Radhika Pandit) ಹಾಗು ಯಶ್ ಜೋಡಿಗಳಿಬ್ಬರೂ ಕೂಡ ಅಧಿಕೃತವಾಗಿಯೇ ಮದುವೆಯಾಗುವ ಮೂಲಕ ದಾಂಪತ್ಯ ಜೀವನವನ್ನು ಪ್ರಾರಂಭಿಸಿ ಸತಿಪತಿಗಳಾಗುತ್ತಾರೆ.
ಆದರೆ ಯಶ್(Yash) ಅವರು ಮಾತ್ರ ತಮ್ಮ ಪತ್ನಿಯಾಗಿರುವ ರಾಧಿಕಾ ಪಂಡಿತ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರಾಗಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರಲು ಸಾಧ್ಯವಿಲ್ಲ ಈ ಲೇಖನಿಯ ಮೂಲಕ ನಾವು ಈ ವಿಚಾರವನ್ನು ನಿಮಗೆ ಬಹಿರಂಗಪಡಿಸಿದ್ದೇವೆ.