Radhika Pandit ರಾಧಿಕಾ ಪಂಡಿತ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಜೊತೆಗೆನೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟವರು. ರಾಧಿಕಾ ಪಂಡಿತ್ ಈಗಾಗಲೇ ತಮ್ಮ ಸಿನಿಮಾಗಳ ಪಾತ್ರಗಳ ಮೂಲಕ ತಾವು ಒಬ್ಬ ಪರಿಪೂರ್ಣ ನಟಿ ಎಂಬುದಾಗಿ ಸಾಬೀತುಪಡಿಸಿದವರು.
ಪ್ರತಿಯೊಂದು ರೀತಿಯಲ್ಲಿ ಕೂಡ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ನಟಿಯಾಗಿದ್ದಾರೆ ರಾಧಿಕಾ ಪಂಡಿತ್(Radhika Pandit). ಆದರೆ ಮದುವೆಯಾದ ನಂತರ ಸಿನಿಮಾ ರಂಗದಿಂದ ರಾಧಿಕಾ ಪಂಡಿತ್ ಅವರು ದೂರ ಹೋದರು ಎಂದರು ಕೂಡ ತಪ್ಪಾಗಲಾರದು.
ಆದರೆ ಇತ್ತೀಚಿನ ದಿನಗಳಲ್ಲಿ ಅವರ ಬಗ್ಗೆ ಕೆಲವೊಂದು ಗಾಳಿ ಸುದ್ದಿಗಳು ಓಡಾಡುತ್ತಿದ್ದು ಅದರ ಪ್ರಕಾರ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ನಾಯಕನಟಿಯಾಗಿ ಮರು ಪಾದರ್ಪಣೆ ಮಾಡಲಿದ್ದಾರೆ ಎನ್ನುವುದಾಗಿ ತಿಳಿದು ಬಂದಿದೆ. ಇನ್ನು ಅವರು ಮುಂದಿನ ದಿನಗಳಲ್ಲಿ ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.
ಹೌದು ಮುಂದಿನ ದಿನಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿರುವಂತಹ ರಾಧಿಕಾ ಪಂಡಿತ್(Radhika pandit) ರವರು ಭರ್ಜರಿ 35 ರಿಂದ 40 ಲಕ್ಷ ಪ್ರತಿ ಸಿನಿಮಾಗೆ ಸಂಭಾವನೆ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.