Radhika Kumaraswamy ನಟಿ ರಾಧಿಕಾ ಕುಮಾರಸ್ವಾಮಿ(Actress Radhika) ಅವರು ಚಿತ್ರರಂಗದಿಂದ ಹೊರಹೋದವರು ಮತ್ತೆ ಲಕ್ಕಿ ಸಿನಿಮಾದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡುತ್ತಾರೆ. ಅದಾದ ನಂತರ ಸ್ವಲ್ಪ ಸಮಯ ಬಿಟ್ಟು ಕೆಲವೊಂದು ಸಿನಿಮಾಗಳ ಮೂಲಕ ಅದರಲ್ಲಿ ವಿಶೇಷವಾಗಿ ಮಹಿಳಾ ಪ್ರಾಮುಖ್ಯತೆ ಹೊಂದಿರುವಂತಹ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ವಯಸ್ಸು 25ರ ಹರಿಯಾದ ಯುವತಿಯಂತೆ ಕಾಣಿಸಿಕೊಳ್ಳುವ ರಾಧಿಕಾ ಕುಮಾರಸ್ವಾಮಿ ಅವರು ಇಂದಿನ ಸಮಯದಲ್ಲಿ ಕೂಡ ಕನ್ನಡ ಚಿತ್ರರಂಗದ ಟಾಪ್ ನಟಿಯರಿಗೆ ಕಾಂಪಿಟೇಶನ್ ನೀಡುವ ರೀತಿಯಲ್ಲಿ ನಟನೆ ಮಾಡುತ್ತಾರೆ.
ಸದ್ಯಕ್ಕೆ ಅವರು ಅಜಾಗ್ರತೆ ಎನ್ನುವ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾ ಹೊಸ ರೀತಿಯ ಪ್ರಯೋಗಾತ್ಮಕ ಸಿನಿಮಾವಾಗಿ ಕಾಣಿಸಿಕೊಳ್ಳಲಿದೆ ಎಂಬುದಾಗಿ ಸಿನಿಮಾ ಮೂಲಗಳು ತಿಳಿಸಿವೆ. ಆದರೆ ಇದರ ನಡುವೆ ರಾಧಿಕಾ ಕುಮಾರಸ್ವಾಮಿ ಅವರ ಹೊಸ ಲುಕ್ ಕಣ್ಮನ ಸೆಳೆಯುತ್ತಿದೆ.
ಹಿಂದೆಂದೂ ಕಾಣಿಸದ ಸಾಂಸ್ಕೃತಿಕ ರೂಪದಲ್ಲಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಕಾಣಿಸಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಪ್ರತಿಯೊಬ್ಬರೂ ಕೂಡ ಈ ಫೋಟೋಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಮುಂದಿನ ಸಿನಿಮಾಗೆ ಶುಭಾಶಯಗಳನ್ನು ಕೂಡ ಕೋರಿದ್ದಾರೆ.