ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವುದು ಸುಲಭದ ಮಾತಲ್ಲ. ನೂರಾರು ಕೋಟಿ ರುಪಾಯಿಗಳನ್ನು ಸಿನಿಮಾದ ಮೇಲೆ ಹಾಕಿ ಲಾಭ ಪಡೆಯ ಬೇಕೆಂದರೆ ನಿಜಕ್ಕೂ ಹರಸಾಹಸ ಮಾಡಬೇಕು. ಹಾಲಿವುಡ್ ನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಹಾಕಿ ಇಂಗ್ಲಿಷ್ ಸಿನಿಮಾ ಮಾಡುತ್ತಾರೆ. ಯಾಕೆಂದರೆ ಅವರಿಗೆ ಅದರ ಡಬಲ್ ಲಾಭ ಪಡೆಯುವಷ್ಟು ಸೌಲಭ್ಯ ಸೌಕರ್ಯಗಳಿವೆ. ಆದರೆ ನಮ್ಮ ದೇಶದಲ್ಲಿ ಹಾಗಲ್ಲ.
ನಮ್ಮ ದೇಶದಲ್ಲಿ ಮಾಡುವ ಸಿನಿಮಾಗಳು ಕೇವಲ ನಮ್ಮ ದೇಶಕ್ಕೆ ಅಷ್ಟೇ ಸೀಮಿತವಾಗಿರುತ್ತೆ ಆದ್ದರಿಂದ ಬೇರೆ ದೇಶಗಳಲ್ಲಿ ನಮ್ಮ ಸಿನಿಮಾವನ್ನು ಓಡಿಸಿ ಲಾಭ ಪಡೆಯುವುದು ತುಂಬಾ ಕಷ್ಟದ ಕೆಲಸ. ಬೇರೆ ದೇಶಗಳಲ್ಲಿ ಕೂಡ ಯಶಸ್ವಿಯಾಗಿ ತೆರೆಕಂಡ ಹಲವಾರು ಭಾರತೀಯ ಸಿನಿಮಾಗಳು ಇವೆ ಆದರೆ ಅವು ವಿರಳ. ಬಾಹುಬಲಿ ಮತ್ತು ರಜನಿಕಾಂತ್ ಅವರು ರೋಬೋ ಸಿನಿಮಾಗಳು ಇದಕ್ಕೆ ಉದಾಹರಣೆ.
ಪ್ರಭಾಸ್ ರಾಧೆ ಶ್ಯಾಮ್ ಎಂಬ ಸಿನೆಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು.ಈ ಚಿತ್ರ ಬಿಡುಗಡೆಯಾದ ಒಂದೇ ವಾರಕ್ಕೆ ಥಿಯೇಟರ್ ಗಳಿಂದ ಎತ್ತಂಗಡಿ ಆಗಿತ್ತು. ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಲಿಕ್ಕೆ ವಿಫಲವಾಗಿದೆ. ಪ್ರಭಾಸ್ ಅವರ ನಿರಾಶೆ ನಟನೆ, ಸ್ಲೋ ಮೂವಿಂಗ್ ಸಿನೆಮಾಟೋಗ್ರಫಿ ಮತ್ತು ಅರ್ಥವಾಗದಂತಹ ವ್ಯರ್ಥ ಕಥೆ ಈ ಚಿತ್ರದ ನೆಗೆಟಿವ್ ಅಂಶಗಳು. ಈ ಚಿತ್ರ ಪ್ರಭಾಸ್ ಅವರ ಅಭಿಮಾನಿಗಳಿಗಂತೂ ನಿರಾಸೆ ಮೂಡಿಸಿದೆ.
ಪ್ರಭಾಸ್ ಅವರ ರಾಧೆಶಾಮ್ ಚಿತ್ರ ಇದೀಗ ದುರಂತವೇ ಕಂಡಿದೆ. ಈ ಚಿತ್ರವನ್ನು ಸುಮಾರು 350 ನೂರು ಕೋಟಿ ರುಪಾಯಿಗಳ ಬಂಡವಾಳ ಹಾಕಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾ ಕೇವಲ 180 ಕೋಟಿ ರುಪಾಯಿಗಳ ಕಲೆಕ್ಷನ್ ಮಾಡಿದೆ. ಡಿಜಿಟಲ್ ಮತ್ತು ಸೆಟಲೈಟ್ ರೈಟ್ಸ್ ಗಳನ್ನು ಹಿಡಿದರೆ ಅಬ್ಬಬ್ಬಾ ಎಂದರೆ 80 ಕೋಟಿ ಬರಬಹುದು ಅಷ್ಟೆ. ಹೀಗೆ ನೋಡಿದರೆ ರಾಧೆಶ್ಯಾಮ್ ಚಿತ್ರಕ್ಕೆ ಹಾಕಿದ ಬಂಡವಾಳ ಕೂಡ ವಾಪಸ್ಸು ಬಂದಿಲ್ಲ. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರು ಕೈಹಿಡಿದಿರುವ ಯಾವ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿಲ್ಲ. ಸಿನಿಮಾಗಳ ಹಾಗೂ ಕಥೆಗಳ ಆಯ್ಕೆಯಲ್ಲಿ ಪ್ರಭಾಸ್ ಅವರು ಸತತವಾಗಿ ವಿಫಲರಾಗಿದ್ದಾರೆ.