ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಟ್ಯಾಟೂ(tattoos) ಎಂಬುದು ಬಹುದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿ ಮಾಡಿ ಬಿಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳವರೆಗೂ ತಮ್ಮ ದೇಹದ ಅಂಗಾಂಗಗಳ ಮೇಲೆ ಭಿನ್ನವಿಭಿನ್ನವಾದ ಟ್ಯಾಟುಗಳನ್ನು ಹಾಕಿಸಿಕೊಂಡು ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಲಿದ್ದಾರೆ.
ಇದರ ಸರದಿಗೆ ಕಿರುತೆರೆ ನಟಿ ರಚಿತ ಮಹಾಲಕ್ಷ್ಮಿ(Rachitha Mahalakshmi) ಕೂಡ ಸೇರ್ಪಡೆಯಾಗಿದ್ದು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಎದೆ ಭಾಗದ ಮೇಲೆ ಗೂಬೆಯ ಟ್ಯಾಟು (Owl’s tattoo) ಹಾಕಿಸಿಕೊಂಡು ಅದರ ಕೆಲವು ಫೋಟೋಗಳನ್ನು instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ, ಕನ್ನಡ ಕಿರುತೆರೆ ಮೂಲಕ ತಮ್ಮ ವೃತ್ತಿ ಬದುಕನ್ನು ಪ್ರಾರಂಭ ಮಾಡಿದ ರಚಿತಾ ಮಹಾಲಕ್ಷ್ಮಿ ಅವರು ಸದ್ಯ
ತಮಿಳು, ತೆಲುಗು ಕಿರುತೆರೆಯಲ್ಲಿಯೂ ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಧಾರಾವಾಹಿಗಳ ಅವಕಾಶವನ್ನು ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಅಲ್ಲದೆ ತಮಿಳುನ ಬಿಗ್ ಬಾಸ್ ಸೀಸನ್ 6 ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಂಡಿದ್ದ ಈ ನಟಿ ಸಾಗುತ ದೂರ ದೂರ, ಸೂರ್ಯಕಾಂತಿ, ಮನೆ ಒಂದು ಮೂರು ಬಾಗಿಲು, ಸುಪ್ರಭಾತ, ಜೂನಿಯರ್ ಸೀನಿಯರ್, ಸವಿಗಾನ, ಗೀತಾಂಜಲಿ, ಮೇಘ ಮಂದಾರ ಹೇಗೆ ಮುಂತಾದ ಕನ್ನಡ ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದಿದ್ದವರು.
ನಟನೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವಂತಹ ಈ ನಟಿ ಆಗಾಗ ತಮ್ಮ ವಿಭಿನ್ನ ಫೋಟೋಶೂಟ್ಗಳ ಮೂಲಕ ಟ್ರೆಂಡಿಂಗ್ ನಲ್ಲಿ ಇರುತ್ತಿದ್ದರು. ಸದ್ಯ ಎದೆಯ ಮೇಲೆ ಗೂಬೆಯ ಚಿತ್ರವನ್ನು ಟ್ಯಾಟೂ (Tattoo) ಹಾಕಿಸಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಹೌದು ಗೆಳೆಯರೇ ನಟಿ ರಚಿತ ಮಹಾಲಕ್ಷ್ಮಿಯವರು ಅದರ ಕೆಲ ಫೋಟೋಗಳನ್ನು(photos) ತಮ್ಮ instagram ಖಾತೆಯಲ್ಲಿ ‘ಭಯವನ್ನು ಶಕ್ತಿಯಾಗಿ ಪರಿವರ್ತಿಸುವುದು’ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಮಾಡಿದ್ದಾರೆ.
ಈ ಫೋಟೋ ವೈರಲ್ ಆಗುತ್ತಾ ಇದ್ದ ಹಾಗೆ ಇದನ್ನು ಕಂಡಂತಹ ನೆಟ್ಟಿಗರು ಚಿತ್ರವಿಚಿತ್ರವಾಗಿ ಕಮೆಂಟ್ ಮಾಡುವ ಮೂಲಕ ನಟಿ ರಚಿತಾ ಮಹಾಲಕ್ಷ್ಮಿ(Rachitha Mahalakshmi) ಅವರ ಟ್ಯಾಟೂ ಕುರಿತು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಈ ಹಿಂದೆ ಹೊಸ ಕಾರನ್ನು(new car) ಖರೀದಿಸಿ ಬಾರಿ ಸದ್ದು ಮಾಡಿದ್ದ ರಚಿತ ಇದೀಗ ಮತ್ತೊಮ್ಮೆ ತಮ್ಮ ಟ್ಯಾಟೂ ಇಂದಾಗಿ ಸುದ್ದಿಗೊಳಗಾಗುತ್ತಿದ್ದಾರೆ. ಇದನ್ನೂ ಓದಿ Actor Kishore: ಕಾಂತರಾ ಸಿನಿಮಾದ ಕಡಕ್ ಪೊಲೀಸ್ ಆಫೀಸರ್ ಕಿಶೋರ್ ಕುಮಾರ್ ಕುಟುಂಬದ ಅಪರೂಪದ ಫೋಟೋಸ್!