Rachita Ram: ಅದೊಂದು ಕನಸು ಈಡೇರಲಿ ಎಂಬುದಾಗಿ ದೇವಸ್ಥಾನ ಸುತ್ತುತ್ತಿದ್ದಾರಂತೆ ರಚಿತಾ ರಾಮ್.

Rachita Ram ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದಾಗಿನಿಂದಲೂ ಕೂಡ ಮತ್ತೆ ಅವರು ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದ ಉದಾಹರಣೆ ಇಲ್ಲ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಾಯಕ ನಟರ ಜೊತೆಗೂ ಕೂಡ ರಚಿತಾ ರಾಮ್(Rachita Ram) ರವರ ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಸಿನಿಮಾಗಳನ್ನು ನೀವು ಸಾಕಷ್ಟು ಬಾರಿ ನೋಡಿರಬಹುದಾಗಿದೆ. ಕನ್ನಡ ಚಿತ್ರರಂಗದ ನಾಯಕ ನಟರ ಲಕ್ಕಿ ಹೀರೋಯಿನ್ ಆಗಿ ಅವರು ಕಾಣಿಸಿಕೊಂಡಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಸಿನಿಮಾಗಳು ಕೂಡ ಯಶಸ್ವಿಯಾಗಿ ಸಿನಿಮಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿವೆ.

ಇನ್ನು ಇತ್ತೀಚಿನ ದಿನಗಳಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಟಿಯರು ಯಾರಾದರೂ ಇದ್ದರೆ ಅದು ರಚಿತಾ ರಾಮ್ ಅವರು ಎಂದು ಹೇಳಬಹುದಾಗಿದೆ ಅದರಲ್ಲಿ ಯಾವುದೇ ಅನುಮಾನ ಬೇಡ. ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್ ಅವರು ದೇವರ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದವನ್ನು ಪಡೆಯುತ್ತಿದ್ದಾರೆ ಅದಕ್ಕೆ ಒಂದು ಕಾರಣ ಕೂಡ ಇದೆ.

ಹೌದು ಮಿತ್ರರೇ ರಚಿತಾ(Rachita) ಅವರು ತಮ್ಮ ಕುಟುಂಬದ ಕೆಲವೊಂದು ಆಪ್ತರ ಜೊತೆಗೆ ದೇವಸ್ಥಾನಕ್ಕೆ ಹೋಗಿ ಆಶೀರ್ವಾದವನ್ನು ಪಡೆಯುತ್ತಿದ್ದು ಆದಷ್ಟು ಬೇಗ ಮಂಗಳ ಕಾರ್ಯ ಕೂಡಿ ಬರಲಿ ಎಂಬುದಾಗಿ ಆಶೀರ್ವಾದವನ್ನು ಪಡೆಯುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿದೆ. ಅವರ ಅಭಿಮಾನಿಗಳು ಕೂಡ ಇದನ್ನೇ ಹಾರೈಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

Leave a Comment