Rachita Ram ಡಿಂಪಲ್ ಕ್ವೀನ್ ರಚಿತಾ ರಾಮ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುತ್ತಾರೆ. ಅದಾದ ನಂತರ ಮತ್ತೆ ಅವರು ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಬಹುತೇಕ ಎಲ್ಲಾ ಸ್ಟಾರ್ ನಾಯಕ ನಟರ ಜೊತೆಗೂ ಕೂಡ ರಚಿತರಾಮ್(Rachita Ram) ಕಾಣಿಸಿಕೊಂಡಿದ್ದಾರೆ.
ರಚಿತರಾಮ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷಗಳು ಕಳೆದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಅವರು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದಾರೆ ಎಂದರೆ ಅವರ ಜನಪ್ರಿಯತೆಯ ತೂಕವನ್ನು ನೀವೇ ಅಳತೆ ಮಾಡಬಹುದಾಗಿದೆ. ಇಂದಿಗೂ ಕೂಡ ಅವರ ಕೈಯಲ್ಲಿ ನಾಲ್ಕರಿಂದ ಐದು ಸಿನಿಮಾಗಳಿವೆ. ಕೆಲವೊಂದು ಮ್ಯೂಸಿಕ್ ಆಲ್ಬಮ್ ಸಾಂಗ್ ಗಳಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ.
ಪ್ರಮುಖವಾಗಿ ಅವರು ಇಷ್ಟು ವರ್ಷಗಳಾಗಿದ್ದರೂ ಕೂಡ ನಾಯಕಿಯ ಬೇಡಿಕೆಯನ್ನು ಚಿತ್ರರಂಗದಲ್ಲಿ ಕಡಿಮೆ ಮಾಡಿಕೊಂಡಿಲ್ಲ. ಸಾಮಾನ್ಯವಾಗಿ ನಾಯಕ ನಟಿಯರ ಬೇಡಿಕೆ ಚಿತ್ರರಂಗದಲ್ಲಿ ಕೆಲವೇ ವರ್ಷಗಳ ಕಾಲ ಮಾತ್ರ ಇರುತ್ತದೆ ಆದರೆ ರಚಿತಾ ರಾಮ್ ರವರು ಬುಲ್ ಬುಲ್ ಸಿನಿಮಾದಿಂದ ಪ್ರಾರಂಭಿಸಿ ಇಂದಿನವರೆಗೂ ಕೂಡ ತಮ್ಮ ಬೇಡಿಕೆಯನ್ನು ಕಡಿಮೆ ಮಾಡಿಕೊಂಡಿಲ್ಲ. ಇನ್ನು ಅವರು ಕೆಲವೊಂದು ಅಂಗಡಿ ಮುಂಗಟ್ಟುಗಳ ಓಪನಿಂಗ್ ಕಾರ್ಯಕ್ರಮಕ್ಕೆ ಕೂಡ ಮುಖ್ಯ ಅತಿಥಿಯಾಗಿ ಹೋಗುತ್ತಾರೆ ಆ ಸಂದರ್ಭದಲ್ಲಿ ಅವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ.
ಹೌದು ಗೆಳೆಯರೇ ಇಂತಹ ಕಾರ್ಯಕ್ರಮಗಳಿಗೆ ಸ್ಟಾರ್ ನಟಿ ಆಗಿರುವಂತಹ ರಚಿತಾ ರಾಮ್(Rachita Ram) ರವರು ಮುಖ್ಯ ಅತಿಥಿಯಾಗಿ ಹೋಗಲು ಹಾಗು ಉದ್ಘಾಟನೆ ಮಾಡಲು ಭರ್ಜರಿ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದಾಗಿ ತಿಳಿದಿದೆ. ಒಂದು ವೇಳೆ ನೀವು ಕೂಡ ಅವರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆಸಲು ಯೋಚನೆಯನ್ನು ಹೊಂದಿದ್ದರೆ ಇಷ್ಟೊಂದು ಹಣವನ್ನು ನೀವು ಕೂಡ ಹೊಂದಿರಬೇಕಾಗುತ್ತದೆ.