Rashmika Mandanna ರಶ್ಮಿಕ ಮಂದಣ್ಣ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಈಗ ಇಡೀ ಭಾರತ ಚಿತ್ರರಂಗದಲ್ಲಿ(Indian Film Industry) ಮಿಂಚುತ್ತಿರುವಂತಹ ನಟಿ. ಅವರಿಗೆ ಈಗ ಯಾವುದೇ ಭಾಷೆಗಳ ಎಲ್ಲೇ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಕೂಡ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹೀಗಿದ್ದರೂ ಕೂಡ ಅವರಿಗೆ ಟ್ರೋಲ್ ಗಳ ಸುರಿಮಳೆ ಆಗಾಗ ಕಂಡು ಬರುತ್ತದೆ.
ವಿಶೇಷವಾಗಿ ಅವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ತೋರಿಸುವಂತಹ ನಿರ್ಲಕ್ಷ ಭಾವನೆ ಎನ್ನುವುದು ಅವರಿಗೆ ಸಾಕಷ್ಟು ಹೇಟ್ ಸಿಗುವಂತೆ ಮಾಡುತ್ತದೆ. ಆದರೆ ರಶ್ಮಿಕ ಮಂದಣ್ಣ(Rashmika Mandanma) ಇದು ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಯಾಕೆಂದರೆ ಅವರು ಎಷ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರಿಂದ ಟ್ರೋಲ್ ಆಗುತ್ತಿದ್ದರೂ ಕೂಡ ಅದರ ಕುರಿತಂತೆ ಯಾವತ್ತೂ ಕೂಡ ಮಾತನಾಡಿಲ್ಲ.
ಸದ್ಯಕ್ಕೆ ಅವರು ಬಾಲಿವುಡ್ ಚಿತ್ರರಂಗದಲ್ಲಿ ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಅನ್ನು ಅಪ್ಲೋಡ್ ಮಾಡಿದ್ದು ಸಾಕಷ್ಟು ಸಮಯಗಳಲ್ಲಿ ನಾನು ಪರಿಸ್ಥಿತಿಗಳಿಗೆ ಈ ರೀತಿ ರಿಯಾಕ್ಟ್ ಮಾಡುತ್ತೇನೆ ಎಂಬುದಾಗಿ ಹೇಳುವ ಮೂಲಕ ಅವರು ಯಾವ ರೀತಿ ಪ್ರತಿಕ್ರಿಸುತ್ತಾರೆ ಎಂಬುದಾಗಿ ತಿಳಿಸಿದ್ದಾರೆ. ಬನ್ನಿ ಹಾಗಿದ್ದರೆ ಅವರು ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ ಒಂದು ಫೋಟೋವನ್ನು ಅಪ್ಲೋಡ್ ಮಾಡುತ್ತಾ ರಶ್ಮಿಕ ಮಂದಣ್ಣ ಪರೋಕ್ಷವಾಗಿಯೇ ಟ್ರೋಲ್ ಸಂದರ್ಭದಲ್ಲಿ ನಾನು ಇದೇ ರೀತಿ ಪ್ರತಿಕ್ರಿಯಿಸುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಫೋಟೋ ನೋಡಿದ ನಂತರ ನಿಮಗೇನು ಅನಿಸ್ತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ರಶ್ಮಿಕ ಮಂದಣ್ಣ ಅವರ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕೂಡ ನೀವು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.