ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾಳೆ ನೋಡಿ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ

ಪುಟ್ಟಗೌರಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಧಾರಾವಾಹಿ. 2012 ಮಾರ್ಚ್ ನಲ್ಲಿ ಪ್ರಾರಂಭವಾದ ಈ ಧಾರಾವಾಹಿ ಹತ್ತು ವರ್ಷಗಳು ಕಳೆದರೂ ಕೂಡ ಇನ್ನೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಹಿಂದಿ ಕಿರುತೆರೆಯ ಬಾಲಿಕಾ ವಧು ಹಿಂದಿ ಧಾರಾವಾಹಿಯ ರೀಮೇಕ್. ರಿಮೇಕ್ ಧಾರಾವಾಹಿಯಾದರೂ ಕೂಡ ಕನ್ನಡದಲ್ಲಿ ನಮ್ಮ ಸಂಸ್ಕೃತಿಗೆ ತಕ್ಕ ಹಾಗೆ ಈ ಧಾರಾವಾಹಿ ಮೂಡಿ ಬಂದಿದೆ.

ಪುಟ್ಟಗೌರಿ ಮೊದಲು ಪ್ರಾರಂಭವಾದ ವರ್ಷದಲ್ಲಿ ಪುಟ್ಟಗೌರಿ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರದ ಬಾಲನಟಿಯಾಗಿ ಸಾನ್ಯಾ ಅಯ್ಯರ್ ಎಂಬ ಹುಡುಗಿ ಕಾಣಿಸಿಕೊಂಡಿದ್ದಳು. ಮುದ್ದು ಮುದ್ದಾಗಿರುವ ಬಾಲನಟಿ ಸಾನ್ಯಾ ನಟನೆಯಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. ಒಂದು ವರ್ಷಗಳ ಕಾಲ ಸಾನ್ಯಾ ಬಾಲನಟಿಯಾಗಿ ಪುಟ್ಟಗೌರಿ ಮದುವೆ ಯಲ್ಲಿ ನಟಿಸಿದ್ದಳು. ಇದೀಗ ಸಾನ್ಯಾ ಬೆಳೆದು ದೊಡ್ಡವಳಾಗಿದ್ದಾಳೆ.

ಪುಟ್ಟಗೌರಿ ಮದುವೆ ಯ ಬಾಲನಟಿಯನ್ನು ಈಗ ನೀವು ನೋಡಿದರೆ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ ಅವಳನ್ನ ಪರಿಚಯ ಹಿಡಿಯೋಕೆ ನಿಮ್ಮ ಕೈಯಿಂದ ಸಾಧ್ಯವೇ ಇಲ್ಲ. ಇದೀಗ ಸಾನ್ಯಾ ಗೆ 20 ವರ್ಷ ವಯಸ್ಸಾಗಿದೆ. ಸಾನ್ಯಾ ನೋಡೋಕೆ ತುಂಬಾ ಮಾಡರ್ನ್ ಹಾಗೂ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾಳೆ. ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಕೂಡ ಈಕೆ ನಟಿಸುತ್ತಿದ್ದಾಳೆ. ಹಾಗೆ ಸಾನ್ಯಾ ಅವರ ತಂದೆ ಯಾರು ಎಂಬ ವಿಷಯ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಸಾನ್ಯಾ ಅವರ ತಂದೆ ಪದ್ಮಾವತಿ ಧಾರಾವಾಹಿ ನಿರ್ದೇಶಕ . ಸಾನ್ಯಾ ಅವರ ತಂದೆ ಬರಹಗಾರ ಮತ್ತು ನಟನಾಗಿ ಗುರುತಿಸಿಕೊಂಡಿದ್ದಾರೆ. ಸಾನಿಯಾ ಕಲಾವಿದರ ಕುಟುಂಬದಿಂದಲೇ ಬೆಳೆದು ಬಂದಿದ್ದರಿಂದ ಈಕೆಗೆ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ದೊಡ್ಡ ಆಸೆಯಿದೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಸಾನಿಯಾ ಮಿಂಚುತ್ತಿದ್ದಾಳೆ ಇನ್ನೇನು ಮುಂದಿನ ದಿನಗಳಲ್ಲಿ ಸಾನ್ಯಾ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ಕಡೆ ಸಾನ್ಯಾ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ ಮತ್ತು ಇನ್ನೊಂದು ಕಡೆ ಚಿತ್ರರಂಗದಲ್ಲೂ ಕೂಡ ಸಕ್ರಿಯ ವಾಗಿ ತೊಡಗಿಕೊಂಡಿದ್ದಾಳೆ.

https://youtu.be/FM-yTxJ_lo4

Leave a Comment