ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಅವರು ಕೇವಲ ಒಬ್ಬ ನಟ ನಿರ್ಮಾಪಕನಾಗಿ ಕೋಟ್ಯಂತರ ಮಂದಿ ಜನರನ್ನು ಸಂಪಾದನೆ ಮಾಡಿದ್ದು ಹೇಗೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಅಪ್ಪು ಅವರು ಕೇವಲ ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿಲ್ಲ. ಅಪ್ಪು ಅವರು ನಟನಷ್ಟೆ ಅಲ್ಲದೆ ಒಳ್ಳೆಯ ವ್ಯಕ್ತಿ, ಸಹೃದಯಿ ಮತ್ತು ಸಹಾಯ ಮನೋಭಾವ ಉಳ್ಳುವಂತಹ ಅದ್ಭುತ ಮನುಷ್ಯನಾಗಿದ್ದರು. ಬಲ ಕೈಯಲ್ಲಿ ಮಾಡಿದ ಸಹಾಯವನ್ನು ಎಡಗೈಗೆ ಗೊತ್ತಾಗದ ಹಾಗೆ ಮಾಡುತ್ತಿದ್ದರು. ಅಪ್ಪು ಅವರ ನಿಷ್ಕಲ್ಮಶ ಮನಸ್ಸು ಪ್ರತಿಯೊಬ್ಬರನ್ನು ಮರುಳು ಮಾಡಿ ಬಿಡುತ್ತದೆ.
46 ಉಚಿತ ಶಾಲೆಗಳು,19 ಗೋಶಾಲೆಗಳು ,16 ವೃದ್ಧಾಶ್ರಮ, 26 ಅನಾಥಾಶ್ರಮ ಮತ್ತು 1800 ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ಪುನೀತ್ ಅವರು ಯಾರಿಗೂ ಗೊತ್ತಿಲ್ಲದ ಹಾಗೆ ಸಹಾಯ ಮಾಡುತ್ತಿದ್ದರು. ಅಷ್ಟೇನಾ ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಅಪ್ಪು ಅವರಿಗೆ ಬರುತ್ತಿದ್ದ ಸಂಭಾವನೆಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಕಷ್ಟದಲ್ಲಿ ಬದುಕುತ್ತಿರುವ ಜನರಿಗೆ ತಮ್ಮ ಕೈಲಾದಷ್ಟು ಹಣವನ್ನು ಕೊಡುತ್ತಿದ್ದರು. ಇಷ್ಟೆಲ್ಲ ರಹಸ್ಯಗಳು ಪುನೀತ್ ಅವರು ತೀರಿಕೊಂಡ ನಂತರವೇ.
ಕೇವಲ ಇಷ್ಟೇ ಅಲ್ಲ ಗೆಳೆಯರೇ ಪುನೀತ್ ಅವರು ತೀರಿಕೊಂಡ ನಂತರ ಸಾವಿರಾರು ಜನ ಪುನೀತ್ ಅವರು ಬದುಕಿದ್ದಾಗ ನಮಗೆ ತುಂಬಾ ದಾನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪುನೀತ್ ಅವರು ತೀರಿಕೊಂಡು 4 ತಿಂಗಳು ಕಳೆದಿವೆ. ಇದೀಗ ಮತ್ತೊಂದು ಶಾಕಿಂಗ್ ಸತ್ಯ ಹೊರ ಹೊಮ್ಮಿದೆ. ತಮಿಳುನಾಡಿನಲ್ಲಿರುವ ಮುರುಗನ್ ದೇವಸ್ಥಾನ 6 ವರ್ಷಗಳ ಹಿಂದೆ ತುಂಬಾ ಸಂಕಷ್ಟದ ಪರಿಸ್ಥಿತಿ ಯಲ್ಲಿತ್ತು. ಆಗ ಪುನೀತ್ ಅವರು ದೇವರ ರೂಪದಲ್ಲಿ ಬಂದು ದೇವಸ್ಥಾನವನ್ನು ಉಳಿಸಿದ್ದರು.
6 ವರ್ಷಗಳ ಹಿಂದೆ ತಮಿಳುನಾಡಿನ ಮುರುಗನ್ ದೇವಸ್ಥಾನದ ಉಳಿವಿಗೋಸ್ಕರ ಪುನೀತ್ ರಾಜ್ ಕುಮಾರ್ ಅವರು ದೇವಸ್ಥಾನವನ್ನು ನಿರೂಪಿಸಲು ಬಹುದೊಡ್ಡ ಹಣವನ್ನು ನೀಡಿದ್ದರು. ಬರೋಬ್ಬರಿ 3 ಕೋಟಿ ರುಪಾಯಿಗಳನ್ನು ಪುನೀತ್ ಅವರು ದಾನ ಮಾಡಿದ್ದರು. ಮುರುಗನ್ ದೇವಸ್ಥಾನದ ಮರು ನಿರ್ಮಾಣಕ್ಕೆ ದೊಡ್ಡ ಸಹಾಯ ವಸ್ತುವನ್ನು ಚಾಚಿದ್ದರು. ಈ ಒಂದು ವಿಷಯವನ್ನು ಸ್ವತಃ ಮುರುಗನ್ ದೇವಸ್ಥಾನದ ಮ್ಯಾನೇಜ್ಮೆಂಟ್ ಸಿಬ್ಬಂದಿಗಳೇ ತಿಳಿಸಿದ್ದಾರೆ.
ಈ ಮನುಷ್ಯ ಬದುಕಿದ್ದಾಗ ದೇವರು ಮಾಡಬೇಕಿದ್ದ ಕೆಲಸಗಳನ್ನೆಲ್ಲ ಯಾರಿಗೂ ತಿಳಿಯದಂತೆ ರಹಸ್ಯವಾಗಿ ತಾನೆ ಮಾಡುತ್ತಿದ್ದ. ಆ ದೇವರಿಗೆ ಈ ವಿಷಯ ತಿಳಿದು ಹೊಟ್ಟೆಕಿ ಚ್ಚಿನಿಂದ ನಮ್ಮ ಪುನೀತ್ ಅವರನ್ನು ಮೇಲೆ ಕರೆಸಿಕೊಂಡಿರಬೇಕು. ಕೆಲವೊಂದು ಸಲ ನಮಗೆ ಅನಿಸುತ್ತೆ ಸ್ವಾರ್ಥದ ಬದುಕು ಬದುಕುವ ಜನರೇ ಸುಖಿಗಳು ಅಂತ. ಒಳ್ಳೆಯವರಿಗೆ ಕಾಲ ಇಲ್ಲವಾ ಅಂತ ಬೇಸರವಾಗುತ್ತದೆ. ಸಂಕಷ್ಟದಲ್ಲಿದ್ದ ದೇವರಿಗೆ ಸಹಾಯ ಮಾಡಿದ ಅಪ್ಪುಗೆ ಕೊನೆ ಸಮಯದಲ್ಲಿ ದೇವರು ಯಾಕೆ ಸಹಾಯ ಮಾಡಿಲ್ಲ ಅಂತ ಮನಸ್ಸಿಗೆ ಬೇಜಾರಾಗುತ್ತೆ.