ಪವರ್ ಸ್ಟಾರ್ ಹೆಸರು ಕೇಳಿದರೆ ಒಂದು ರೀತಿಯ ಕರೆಂಟ್ ಪಾಸಾಗುತ್ತದೆ. ಹೆಸರು ಕೇಳಿದರೆ ನಮ್ಮ ಕೈ ಕಾಲುಗಳು ಕುಣಿಯಲು ಶುರು ಮಾಡುತ್ತವೆ. ಯಾವಾಗಲೂ ಹಸನ್ಮುಖಿ ಆಗಿದ್ದು, ಯಾವುದೇ ರೀತಿಯ ಗೊಂದಲ ಗಲಾಟೆಗಳಿಗೆ ಸಿಲುಕಿ ಹಾಕಿ ಕೊಳ್ಳದೇ ಇರುವವರು ಪುನೀತ್ ರಾಜಕುಮಾರ್ ಅವರು.ಇವರು ರಾಜಕುಮಾರ್ ಅವರ ಕೊನೆಯ ಪುತ್ರ. ನಾವು ಇಲ್ಲಿ ಪುನೀತ್ ರಾಜಕುಮಾರ್ ಅವರ ಹೊಸ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚಿಕ್ಕ ವಯಸ್ಸಿನಲ್ಲೇ ಸಿನೆಮಾರಂಗಕ್ಕೆ ಇಳಿದು ತಮ್ಮ ನಟನೆಯಿಂದ ಅಭಿಮಾನಿಗಳ ಒಳಗೆ ಹೊಕ್ಕಿದವರು ಇವರು. ಇವರು ನಟಿಸಿದ ಎಲ್ಲಾ ಚಲನಚಿತ್ರಗಳು ಒಂದಲ್ಲಾ ಒಂದು ಜನಪ್ರಿಯ ಆಗುತ್ತಾ ಬಂದಿದೆ. ಕೊನೆಯದಾಗಿ ಅಂಜನೀಪುತ್ರ ಸಿನೆಮಾ ಮಾಡಿದ ಇವರು ನಂತರ ಯಾವ ಸಿನಿಮಾ ಮಾಡುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಇವರು ಒಂದು ಹೊಸ ಸಿನೆಮಾ ಮಾಡುತ್ತಿದ್ದಾರೆ. ಇವರು ತಮ್ಮ ಹೊಸ ಸಿನೆಮಾದ ಬಗ್ಗೆ ಯಾವತ್ತೂ ಸುಳಿವು ಕೊಟ್ಟವರಲ್ಲ. ಆದರೇ ಇದೀಗ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಪುನೀತ್ ರಾಜಕುಮಾರ್ ಅವರ ಹೊಸ ಸಿನೆಮಾದಲ್ಲಿ ಅಪ್ಪು ಸಿನೆಮಾದ ತರಹ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಾರಾ ಅಥವಾ ಬೇರೆ ಪಾತ್ರದ ನಟನೆ ಮಾಡುತ್ತಾರಾ ಅನ್ನುವುದು ಅಭಿಮಾನಿಗಳ ಮನಸ್ಸಿನಲ್ಲಿ ಕಲ್ಪನೆಗಳು ಮೂಡಿವೆ. ಹೀರೋ ಇನ್ ಆಯಿಷಾ ಅವರು ನಟಿಯಾಗಲಿದ್ದಾರಂತೆ. ಅಷ್ಟೇ ಅಲ್ಲ ದೂಧ್ ಪೇಡ ದಿಗಂತ್ ಮತ್ತು ಸೋನುಗೌಡ ಸಹ ಇದ್ದಾರಂತೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಸಿನೆಮಾದಲ್ಲಿ ಇದ್ದಾರಂತೆ. ದಸರಾ ಅಲ್ಲದೇ ಹೋದರೂ ದೀಪಾವಳಿಗಾದರೂ ಸಾಂಗ್ ರಿಲೀಸ್ ಮಾಡಬಹುದು ಎಂದು ಅನಿಸುತ್ತದೆ.
ಇದರ ನಂತರ ಮತ್ತೊಂದು ಸಿನೆಮಾಕ್ಕೆ ಇವರು ರೆಡಿಯಾಗಿದ್ದಾರೆ. ಅದೇ ಜೇಮ್ಸ್ ಸಿನೆಮಾ. ಈ ಸಿನಿಮಾವನ್ನು ಚೇತನ್ ಅವರು ನಿರ್ದೇಶನ ಮಾಡಲಿದ್ದಾರೆ. ಇವರು ಹೆಚ್ಚಾಗಿ ಮಾತುಗಳಿಗೆ ಬೆಲೆ ಕೊಡುತ್ತಿದ್ದರು. ಆದರೆ ಇಲ್ಲಿ ಗ್ರಾಫಿಕ್ಸ್ ಗೆ ಹೆಚ್ಚು ಬೆಲೆ ಕೊಡಲಿದ್ದಾರೆ. ಇದಕ್ಕೆ ಸಂಗೀತ ನೀಡುತ್ತಿರುವವರು ಚರಣ್ ರಾಜ್ ಅವರು. ಇದಕ್ಕೆ ಪ್ರಿಯಾ ಆನಂದ್ ಅವರನ್ನು ಹೀರೊ ಇನ್ ಆಗಿ ಆರಿಸಲಾಗಿದ್ದು ರಾಜಕುಮಾರ ಸಿನೆಮಾದ ಜೋಡಿ ಮತ್ತೆ ನಟಿಸಲಿದೆ. ಇದು ಶೂಟಿಂಗ್ ಗೆ ಎಲ್ಲಾ ತಯಾರಿ ಮಾಡಿಕೊಂಡಿದೆ.