Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದು ಹೋಗಿದ್ದರು ಕೂಡ ನೆನ್ನೆ ಮೊನ್ನೆ ಅಷ್ಟೇ ಅವರ ನಗುವನ್ನು ನಾವು ಎದುರಿಗೆ ನಿಂತು ನೋಡಿರುವಂತಹ ಅನುಭವ ಇನ್ನೂ ಕೂಡ ನಮ್ಮ ಸ್ಮೃತಿ ಪಟಲದಲ್ಲಿ ತಾಜಾ ಆಗಿ ಉಳಿದುಕೊಂಡಿದೆ.
ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಸವ್ಯಸಾಚಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ತಮ್ಮ ಪ್ರತಿಭೆಯ ಅನಾವರಣವನ್ನು ಮಾಡಿಕೊಂಡು ಬಂದವರು. ನಿಜಕ್ಕೂ ಅವರಿಗೆ ಹೋಲಿಕೆ ಆಗುವಂತಹ ಮತ್ತೊಬ್ಬ ಸೂಪರ್ ಸ್ಟಾರ್ ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕಂತೂ ಇಲ್ಲ.
ಹೌದು ಮಿತ್ರರೇ, ಇನ್ನು ಅವರು ಸಖತ್ ಫಿಟ್ನೆಸ್ ಫ್ರೀಕ್ ಆಗಿ ಕೂಡ ಕಾಣಿಸಿಕೊಂಡಿದ್ದರು. ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ತೋರಿಸಿದ್ದು ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಅಪ್ಪು(Appu) ಎಂದರೆ ತಪ್ಪಾಗಲಾರದು. ಹೌದು ಅದು ಅಲ್ಲದೆ ಅಪ್ಪು ಪ್ರತಿ ರಾತ್ರಿ ಅದೊಂದು ಕೆಲಸವನ್ನು ತಪ್ಪದೆ ಮಾಡುತ್ತಿದ್ದರಂತೆ.
ಅಪ್ಪು ಅವರ ಎರಡನೇ ಮಗಳಾಗಿರುವಂತಹ ವಂದಿತ ಅವರ ಜೊತೆಗೆ ಇಲ್ಲೇ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಪ್ರತಿದಿನ ರಾತ್ರಿ ಕೆಲಸ ಮುಗಿಸಿಕೊಂಡು ಬಂದ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ತಮ್ಮ ಮಗಳ ಜೊತೆಗೆ ವಾಕಿಂಗ್ ಹೋಗಿ ಬರುವ ಮೂಲಕ ದೈಹಿಕ ದಾಡ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು ಮಾತ್ರವಲ್ಲದೆ ತಮ್ಮ ಮಗಳಿಗಾಗಿ ಸಮಯವನ್ನು ಕೂಡ ಮೀಸಲಾಗಿರಿಸುತ್ತಿದ್ದರೂ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.