Puneeth Rajkumar: ಬೇರೆ ಸ್ಟಾರ್ ನಟರಿಗೆ ಹೋಲಿಸಿದರೆ ಅಪ್ಪು ಕಡಿಮೆ ಸಂಭಾವನೆ ಯಾಕೆ ಪಡುತ್ತಿದ್ದರು ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟರ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೂಡ ಬೇರೆ ಟಾಪ್ ಹೀರೋಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು.

ಇಂದು ಕನ್ನಡ ಚಿತ್ರರಂಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಎರಡನೇ ಕಲಾವಿದನಾಗಿ ಕಾಣಿಸಿಕೊಂಡಿದ್ದು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂತಹ ಕೆಲಸಗಳನ್ನು ತಮ್ಮ ಮರಣದ ಅವಧಿಗೂ ಮುನ್ನ ಮಾಡಿದ್ದಾರೆ. ಇದಕ್ಕಾಗಿ ಅಪ್ಪು(Appu) ಅವರನ್ನು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು 8 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿರಲಿ. ಅವರು ಮನಸ್ಸು ಮಾಡಿದರೆ ಹನ್ನೆರಡರಿಂದ 15 ಕೋಟಿ ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳಬಹುದು. ಆದರೆ ಅವರು ಹಾಗೆ ಮಾಡಲು ಹೋಗಲಿಲ್ಲ.

ಪುನೀತ್ ರಾಜಕುಮಾರ್ ಅವರು ಆ ಸಂಭಾವನೆಯನ್ನು ಪಡೆಯುತ್ತಿದ್ದ ಹಿಂದಿನ ನಿಜವಾದ ಕಾರಣ ಏನೆಂದರೆ ನಿರ್ಮಾಪಕರು ಮೊದಲಿಗೆ ಸೇಫ್ ಆಗಲಿ ನಂತರ ಬೇಕಾದರೆ ಅವರ ಮನಸ್ಸಿನ ಇಚ್ಛೆಯಿಂದ ನೀಡುವಂತಹ ಲಾಭದ ಪಾಲನ್ನು ಪಡೆದುಕೊಳ್ಳಬಹುದು ಎಂಬುದಾಗಿ. ಹೀಗಾಗಿ ನಿರ್ಮಾಪಕರ ಬಜೆಟ್ ತನ್ನ ಸಂಬಳದ ಕಾರಣದಿಂದಾಗಿ ಹೆಚ್ಚಾಗುವುದು ಬೇಡ ಸಿನಿಮಾವನ್ನು ಚೆನ್ನಾಗಿ ಮಾಡಿ ಎಂಬುದಾಗಿ ಪುನೀತ್ ರಾಜಕುಮಾರ್(Puneeth Rajkumar) ಅವರು ಹೇಳುತ್ತಿದ್ದರಂತೆ.

Leave a Comment