prashanth neel: ಪ್ರಶಾಂತ್ ನೀಲ್ ಅಲಿಯಾಸ್ ಪ್ರಶಾಂತ ನೀಲಕಂಠಪುರಂ ಅವರು 2014ರಲ್ಲಿ ತಮ್ಮ ಭಾಮೈದ ಅಂದರೆ ತಂಗಿ ಗಂಡ ಆದಂತಹ ಶ್ರೀಮುರಳಿ ಅವರಿಗೆ ಉಗ್ರಂ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಚಲನಚಿತ್ರ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹೀಗೆ ಆಕ್ಷನ್ ಸಿನಿಮಾದ ಮೂಲಕ ಬಹಳನೇ ಮಾಸಾಗಿ ಸಿನಿಮಾ ಬದುಕಿಗೆ ಎಂಟ್ರಿ ಕೊಟ್ಟಂತಹ ಪ್ರಶಾಂತ್ ನೀಲ್ (Prashanth Neel) ಉಗ್ರಂ ಸಿನಿಮಾದ ನಂತರ ಮತ್ತೆ ಯಾವುದೇ
ಸಿನಿಮಾವನ್ನು ಮಾಡದೆ ಅದರ ಭಾಗ ಎರಡರ ತಯಾರಿಯಲ್ಲಿ ಇರುತ್ತಾರೆ. ಇದರ ನಡುವೆ ಇನ್ನಷ್ಟು ಬುದ್ಧಿ ಉಪಯೋಗಿಸಿ ಕೋಲಾರ್ ಗೋಲ್ಡ್ ಫೀಲ್ಡ್ (Kolar gold field) ಎಂಬ ಸಿನಿಮಾದ ಕತೆಯನ್ನು ರೆಡಿ ಮಾಡಿ ಅದಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ರಾಕಿ ಭಾಯ್ಯಾಗಿ ನೇಮಕ ಮಾಡುತ್ತಾರ. 14 ಏಪ್ರಿಲ್ 2020 ರಂದು ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ತೆರೆಗೆ ತಂದಂತಹ ಪ್ರಶಾಂತ್ ನೀಲಾವರಿಗೆ ವ್ಯಾಪಕ ಮೆಚ್ಚುಗೆ ದೊರಕುತ್ತದೆ.
ಹೀಗೆ ತಮ್ಮ ಅದ್ಬುತ ನಿರ್ದೇಶನದ ಶೈಲಿಯಿಂದಲೇ ಕನ್ನಡದ ನಂಬರ್ ಒನ್ ಡೈರೆಕ್ಟರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದ ಶೈಲಿ ಎಷ್ಟು ಪವರ್ಫುಲ್ ಎಂಬುದು ಕೆಜಿಎಫ್ ಚಾಪ್ಟರ್ 2 ನಂತರ ಇಡೀ ದೇಶಕ್ಕೆ ಚಿರಪರಿಚಿತವಾಯಿತು. ಹೀಗೆ ಕೆಜಿಎಫ್ ಸೀರೀಸ್ (KGF Series)ನಿಂದ ಯಶಸ್ಸನ್ನು ಸಾಧಿಸಿದಂತಹ ಪ್ರಶಾಂತ್ ಪ್ಯಾನ್ ಇಂಡಿಯಾ ಸ್ಟಾರ್ ನಟರುಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದು,
ಮತ್ತೊಂದು ಪವರ್ ಫುಲ್ ಕಥೆಯನ್ನು ತೆರೆಗೆ ತರಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಪ್ರಶಾಂತ್ ನೀಲ್ (Prashanth Neel) ಅವರು ಜೂನ್ 4 1980 ರಂದು ಆಂಧ್ರಪ್ರದೇಶದ ಮಡಕಸಿರ ಬಳಿಯ ನೀಲಕಂಠಂಪುರಂ ಎಂಬ ಗ್ರಾಮದಲ್ಲಿ ಸುಭಾಷ್ ಮತ್ತು ಭಾರತಿ ದಂಪತಿಗಳಿಗೆ ಜನಿಸಿದರು.
ಅದರಂತೆ ತಮ್ಮ 30ನೇ ವರ್ಷಕ್ಕೆ ಲಲಿತ(Lalitha) ಎಂಬಾಕೆಯನ್ನು ಪ್ರೀತಿಸಿ ಮದುವೆಯಾದಂತಹ ಪ್ರಶಾಂತ ನೀಲ್ (Prashanth Neel) ದಂಪತಿಗಳಿಗೆ ಓರ್ವ ಗಂಡು ಮಗನಿದ್ದಾನೆ. ಆತ ಬೆಳೆದು ದೊಡ್ಡವನಾದ ಮೇಲೆ ತಮ್ಮ ತಂದೆಯ ನಿರ್ದೇಶನದ ಮೂಲಕವೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ ಧನಂಜಯ್ ಮತ್ತು ಅಮೃತ ಅಯ್ಯರ್ ಅವರ ಮುದ್ದಾದ ಫೋಟೋಸ್! ನೆಟ್ಟಿಗರ ಗಮನ ಸೆಳೆಯುತ್ತಿದೆ