Pranitha Subhash: ಮುದ್ದು ಮಗಳೊಂದಿಗೆ ಸಾಂಪ್ರದಾಯಿಕ ಹುಡುಗಿಯಲ್ಲಿ ಕಾಣಿಸಿಕೊಂಡ ಪ್ರಣಿತ ಶುಭಾಷ್! ಇಲ್ಲಿವೆ ಫೋಟೋಸ್

Pranitha Subhash: ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಪೊರ್ಕಿ(Porki) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಣಿತ ಸುಭಾಷ್ ಇಂದು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಇಂಡಸ್ಟ್ರಿಗೆ ಬೇಕಿರುವಂತಹ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಮದುವೆಯಾಗಿ ಒಂದು ಮಗು ಜನಿಸಿದರು ಕೂಡ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವಂತಹ ಪ್ರಣಿತ ಸುಭಾಶ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಂತೂರ್ ಮಮ್ಮಿ (Santoor Mummy) ಎಂದು ಟ್ರೋಲ್ ಆಗುತ್ತಿರುತ್ತಾರೆ.

ಮಗಳ ಆರೈಕೆಯ ಸಲುವಾಗಿ ಎರಡು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿ ಇಂದ ಬ್ರೇಕ್ ಪಡೆದಿದ್ದಂತಹ ಪ್ರಣಿತ(Pranitha) ಇದೀಗ ಮತ್ತೆ ನಟನಾ ಬದುಕಿಗೆ ಕಂಬ್ಯಾಕ್ ಮಾಡಿದ್ದು, ಕನ್ನಡದ ರಾಮನ ಅವತಾರ(Ramana Avatara) ಎಂಬ ಚಿತ್ರದಲ್ಲಿ ಪ್ರಣಿತ ಸುಭಾಷ್ ಅಭಿನಯಿಸುತ್ತಿದ್ದಾರೆ. ಇದಲ್ಲದೆ ಮಲಯಾಳಂ ದಿಲೀಪ್ 148(Dileep 148) ಚಿತ್ರದಲ್ಲೂ ಅಭಿನಯಿಸುತ್ತಿರುವಂತಹ ಪ್ರಣಿತ, ಆಗಾಗ ಸಾರ್ವಜನಿಕವಾಗಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.

ಇನ್ನೂ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ ಪ್ರಣಿತ ತಮ್ಮ ಮುದ್ದು ಮಗಳೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ತಮ್ಮ ತಾಯ್ತನದ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೌದು ಗೆಳೆಯರೇ ಮಗಳೊಂದಿಗೆ ಆಗಾಗ ಟ್ವಿನ್ನಿಂಗ್ ಬಟ್ಟೆ ಧರಿಸಿ ಮಿಂಚುತ್ತಿರುನ ಪ್ರಣಿತ ಕಳೆದ ಕೆಲವು ದಿನಗಳ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ನಾನು ಮತ್ತು ಮಗಳು ಸ್ನೇಹಿತರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜಾ (Satyanarayana Pooja) ಕಾರ್ಯಕ್ರಮಕ್ಕೆ

ಹೋಗಿದ್ದೇವು, ಆ ಸಂದರ್ಭದಲ್ಲಿ ನಾನು ಅವಳನ್ನು, ಜೋಕಾಲಿಯೊಳಗೆ ಮಲಗಿಸಿ ಪೂಜಾ ಕೆಲಸದಲ್ಲಿ ಭಾಗಿಯಾಗಿ ಊಟ ಮಾಡಿ ಬರಲು ಹೋದೆನು, ವಾಪಸ್ ಬಂದು ನೋಡಿದಾಗ ಆಕೆ ಎದ್ದು ಜೋಕಾಲಿ ಇಂದ ಇಳಿದು ಬಾಲ್ಕನಿಯಲ್ಲಿ ತನ್ನ ಪುಟ್ಟ ಲೆಹಂಗಾ ಜಾಕೆಟ್ ಧರಿಸಿ ಆಟವಾಡುತ್ತಿದ್ದಳು. ನನ್ನ ರೀತಿ ತಾಯ್ತನದ ಸಂತೋಷವನ್ನು ಅನುಭವಿಸುತ್ತಿರುವಂತಹ ಹೆಂಗಸರು ಈ ಅನುಭವವನ್ನು ಆನಂದಿಸಿರುತ್ತಾರೆ ಎಂಬ ಕ್ಯಾಪ್ಚರ್ ಬರೆದು ತಮ್ಮ ಮುದ್ದು ಮಗಳೊಂದಿಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮನೆಯಲ್ಲಿ ನಡೆಯಿತು ಶ್ರಾವಣ ಪೂಜೆಯ ಸಂಭ್ರಮ! ದೇಸಿ ಉಡುಗೆಯಲ್ಲಿ ಮಿಂಚಿದ ನವ ದಂಪತಿ

Leave a Comment