Pramodh Shetty: ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಪ್ರಮೋದ್ ಶೆಟ್ಟಿ ಕುಟುಂಬದ ಬ್ಯೂಟಿಫುಲ್ ಫೋಟೋಸ್!

ಸ್ನೇಹಿತರೆ, ತಮ್ಮ ದೇಸಿ ಅಭಿನಯದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ವಿಶೇಷ ಪೋಷಕ ನಟನ ಸ್ಥಾನವನ್ನು ಪಡೆದುಕೊಂಡು ಹಲವಾರು ವರ್ಷಗಳಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವಂತಹ ಪ್ರಮೋದ್ ಶೆಟ್ಟಿ (Pramodh Shetty) ಅವರು ಸಿನಿ ಬದುಕಿಗೆ ಎಂಟ್ರಿ ಕೊಟ್ಟ ಆರಂಭಿಕ ದಿನಗಳಲ್ಲಿ ಹಲವಾರು ಧಾರವಾಹಿಗಳಲ್ಲಿ ಅಭಿನಯಿಸುತ್ತ ಗುರುತಿಸಿಕೊಂಡಿದಂತಹ ನಟ.

ಅನಂತರ ‘ಜುಗಾರಿ’ (Jugari) ಎಂಬ ಚಿತ್ರದ ಮೂಲಕ 2010ರಲ್ಲಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಪ್ರಮೋದ್ ಶೆಟ್ಟಿ ಅವರಿಗೆ ಉಳಿದವರು ಕಂಡಂತೆ(Ulidavaru Kandante) ಹಾಗೂ ಕಿರಿಕ್ ಪಾರ್ಟಿ (Kirik Party) ಸಿನಿಮಾಗಳ ಪಾತ್ರ ಮನ್ನಣೆಯನ್ನು ತಂದುಕೊಡುತ್ತದೆ. ಈ ಮೂಲಕ ತಮ್ಮ ಅಭಿನಯದ ಪ್ರವೃತ್ತಿಯನ್ನು ಅನಾವರಣಗೊಳಿಸುತ್ತಾ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ಪ್ರಮೋದ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು,

ರಾಮಣ್ಣ ರೈ, ಒಂದು ಶಿಕಾರಿಯ ಕಥೆ, ಹೀರೋ, ಕೃಷ್ಣ ಟಾಕೀಸ್, ಅವನೇ ಶ್ರೀಮನ್ ನಾರಾಯಣ, ತೂತು ಮಡಿಕೆ, ದೃಶ್ಯ ಟು, ಶೋಕಿ ವಾಲಾ, ಹರಿಕಥೆ ಅಲ್ಲ ಗಿರಿಕಥೆ, ಚೇಸ್ ಹಾಗೂ ರಿಷಬ್ ಶೆಟ್ಟಿ ಅವರ ಕಾಂತರಾದಂತಹ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುತ್ತ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗನ್ನು ಸೃಷ್ಟಿಸಿಕೊಂಡಿದ್ದರು. ಇನ್ನೂ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಅವರ ಬಳಗದಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವಂತಹ ಪ್ರಮೋದ್ ಶೆಟ್ಟಿ

ಅವರು ಆಗಾಗ ತಮ್ಮ ಸ್ನೇಹಿತರೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸದ್ದು ಮಾಡುತ್ತಿರುತ್ತಾರೆ. ಅದರಂತೆ ಈಗ ಪ್ರಮೋದ್ ಶೆಟ್ಟಿ ಯವರ ಫ್ಯಾಮಿಲಿ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಹೌದು ಗೆಳೆಯರೇ 2010 ನಟಿ ಸುಪ್ರೀತಾ ಶೆಟ್ಟಿ (Supreetha Shetty) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಮೋದ್ ಶೆಟ್ಟಿ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಮೋದ್ ಹಾಗೂ ಸುಪ್ರಿತ ಇಬ್ಬರು ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದು ಮುಂದಿನ ದಿನಗಳಲ್ಲಿ ಈ ಅದ್ಭುತ ಕಲಾವಿದರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಹರಸಿ ಬರಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.

Leave a Comment