Pramod Shetty: 2014ರಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ) ಹಾಗೂ ಕಿಶೋರ್ ಕುಮಾರ್ ನಟನೆಯ ಉಳಿದವರು ಕಂಡಂತೆ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿದ ಪ್ರಮೋದ್ ಶೆಟ್ಟಿ(Pramod Shetty) ಆನಂತರ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಯು ಟರ್ನ್, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಗುಬ್ಬಿ ಮೇಲೆ ಬ್ರಹ್ಮಸ್ತ್ರ, ಕಥಾ ಸಂಗಮ, ಹಂಬಲ್ ಪೊಲಿಟಿಷಿಯನ್ ನಾಗರಾಜ್, ಕೃಷ್ಣ ಟಾಕೀಸ್ ಹಾಗೂ ಕಾಂತಾರ ಸಿನಿಮಾದಲ್ಲಿನ ಅಭಿನಯದಿಂದಾಗಿ ಗುರುತಿಸಿಕೊಂಡು ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಹೌದು ಸ್ನೇಹಿತರೆ ಮೂಲತಃ ಉಡುಪಿ ಜಿಲ್ಲೆಯವರಾದ ಪ್ರಮೋದ್ ಶೆಟ್ಟಿ ಅವರು ಸಿನಿಮಾ ರಂಗದ ಪರಿಚಯಕ್ಕೂ ಮುನ್ನ ಸಾಕಷ್ಟು ನಾಟಕ ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸುತ್ತ ಮನೆಮಾತಾಗಿದ್ದರು. ಆನಂತರ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರ ಪರಿಚಯದಿಂದ ಸಿನಿಮಾಗಳ ಅವಕಾಶ ಪಡೆದು ಇಂದು ಕನ್ನಡದ ಬಹು ಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ.
ಹೀಗೆ ದೇಸಿ ಸೊಗಡಿನ ಅಭಿನಯದಿಂದಲೇ ಸಾಕಷ್ಟು ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ಪಡೆದು ಜನಪ್ರಿಯರಾಗಿರುವ ಪ್ರಮೋದ್ ಶೆಟ್ಟಿ ಸೀರಿಯಲ್ಗಳ ಮೂಲಕ ತಮ್ಮ ಅಭಿನಯದ ಛಾಪನ್ನು ಕನ್ನಡಿಗರಿಗೆ ಪರಿಯಿಸಿ ವಿಶೇಷ ಹೆಸರು ಮಾಡಿದ್ದ ಸುಪ್ರೀತಾ ಶೆಟ್ಟಿ(Supreetha Shetty) ಎಂಬುವರೊಂದಿಗೆ ಎರಡು ಸಾವಿರದ ಹತ್ತರಲ್ಲಿ ಅದ್ದೂರಿಯಾಗಿ ವಿವಾಹವಾದರೂ,
ಈ ಜೋಡಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಆಗಾಗ ತಮ್ಮ ಫ್ಯಾಮಿಲಿ ಫೋಟೋ ಶೂಟ್ಗಳನ್ನು ಮಾಡಿಸಿ ಅದನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಸೋಶಿಯಲ್ ಮೀಡಿಯಾದಲ್ಲಿ ಗಂಡ ಹೆಂಡತಿಯರಿಬ್ಬರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಂತೆ ಕಳೆದ ಕೆಲ ದಿನಗಳ ಹಿಂದೆ ಪ್ರಮೋದ್ ಶೆಟ್ಟಿ ಅವರ ಸಾಕುಟುಂಬದ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ.
ಅದರಲ್ಲೂ ನಟಿ ಸುಪ್ರೀತಾ ಶೆಟ್ಟಿ(Supreetha Shetty) ಅವರ ಸೀಮಂತ(baby shower) ಶಾಸ್ತ್ರದಲ್ಲಿ ತೆಗೆಯಲಾದಂತಹ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದ್ದು, ಅಪ್ಪ ಹಾಗೂ ಮಗಳಿಬ್ಬರು ಹುಟ್ಟಲಿರುವ ಮಗುವನ್ನು ಬಹಳ ಪ್ರೀತಿಯಿಂದ ಬರಮಾಡಿಕೊಳ್ಳಲು ಕಾಯುತ್ತಿರುವಂತೆ ಫೋಟೋಗೆ ಫೋಸ್ ನೀಡಿದ್ದಾರೆ. ಈ ಎಲ್ಲಾ ಸುಂದರ ಫೋಟೋಗಳನ್ನು ನೀವು ಕೂಡ ಈ ಪುಟದ ಮುಖಾಂತರ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಇದನ್ನೂ ಓದಿ ಸರಳತೆಯ ಸಾಹುಕಾರ ಡಿ ಬಾಸ್ ದರ್ಶನ್ ಮತ್ತು ಅಭಿಮಾನಿಯ ಅವರ ಅಪರೂಪದ ಫೋಟೋಸ್ ವೈರಲ್