Prakash Raj: ಸ್ನೇಹಿತರೆ, ತಮ್ಮ ಅತ್ಯುನ್ನತ ಅಭಿನಯದ ಮೂಲಕ ಪಂಚ ಭಾಷೆಗಳಲ್ಲಿಯೂ ಅಭಿನಯಿಸುತ್ತ ಬಹು ಬೇಡಿಕೆಯ ಖಳ ನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್(Prakash Raj) ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್(active) ಇರುವ ಮೂಲಕ ಅಭಿಮಾನಿಗಳೊಂದಿಗೆ ಒಡನಾಟದಲ್ಲಿ ಇರುತ್ತಾರೆ.
ಹೌದು ಗೆಳೆಯರೇ ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಕ್ಕತ್ ಬ್ಯುಸಿ ಇರುವಂತಹ ಪ್ರಕಾಶ್ ರಾಜ್ ಅವರು ಆಗಾಗ ತಮ್ಮ ಕುಟುಂಬದೊಂದಿಗೆ ಕಳೆಯುವಂತಹ ಸುಮಧುರ ಕ್ಷಣಗಳನ್ನು ಕ್ಯಾಪ್ಚರ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಹೌದು ಗೆಳೆಯರೇ, 1994 ರಲ್ಲಿ ಲಲಿತಾ ಕುಮಾರಿ (lalitha Kumari) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಕಾಶ್ ರಾಜ್ ಹೊಂದಾಣಿಕೆ ಸರಿ ಬರೆದ ಕಾರಣ 2009ರಲ್ಲಿ ಅವರಿಂದ ವಿಚ್ಛೇದನ ಪಡೆದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ನಂತರ 2010ರಲ್ಲಿ ಪೋನಿ ವರ್ಮ (pony varma) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಕಾಶ್ ರಾಜ್ ದಂಪತಿಗಳಿಗೆ ಒಬ್ಬ ಮುದ್ದಾದ ಗಂಡು ಮಗನಿದ್ದಾನೆ.
ಅನುಕೂಲಕೊಬ್ಬ ಗಂಡ, ನಾಗಮಂಡಲ, ಪ್ರೀತ್ಸೋದ್ ತಪ್ಪಾ, ಶಾಂತಿ ಶಾಂತಿ ಶಾಂತಿ, ಕನಸಲೂ ನೀನೆ ಮನಸಲೂ ನೀನೆ, ಒಗ್ಗರಣೆ, ಕೋಟಿಗೊಬ್ಬ 2 ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿರುವ ನಟ ಪ್ರಕಾಶ್ ರಾಜ್ ಕೊರೋನಾ ಸಂದರ್ಭದಲ್ಲಿ ನಿರ್ಗತಿಕರಿಗೆ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು.
ಇದರ ಜೊತೆಜೊತೆಗೆ ತೆಲಂಗಾಣ ರಾಜ್ಯದ ಮೆಹಬೂಬ್ ನಗರ(Mehaboobh nagar) ಕೊಂಡರೆಡ್ಡಿ ಪಾಲ್ಯ ಎಂಬ ಗ್ರಾಮವನ್ನು ಮತ್ತು ಚಿತ್ರದುರ್ಗದ (chitradurga) ಬಂಡ್ಲರಹಟ್ಟಿ ಎಂಬ ಗ್ರಾಮವನ್ನು ದತ್ತು ಪಡೆದು ಗ್ರಾಮದ ಅಭಿವೃದ್ಧಿ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ Anchor Anushree: ರಾಜ್ ಬಿ ಶೆಟ್ಟಿ ಮತ್ತು ಅನುಶ್ರೀಯವರ ಈ ಫೋಟೋಸ್ ನೋಡಿದ ಅಭಿಮಾನಿಗಳು ಏನ್ ಹೇಳ್ತಿದಾರೆ ಗೊತ್ತಾ?