Prabhas: ಎಲ್ಲಾ ಕಡೆ ಟೀಕೆಗೆ ಒಳಗಾಗುತ್ತಿರುವ ಆದಿಪುರುಷ್ ಸಿನಿಮಾಗೆ ಪ್ರಭಾಸ್ ಪಡೆದುಕೊಂಡಿರುವ ಸಂಭಾವನೆ ಎಷ್ಟು?

Prabhas ಬಾಲಿವುಡ್ ಚಿತ್ರರಂಗ ಒಂದು ದೊಡ್ಡ ಮಟ್ಟದ ಸಿನಿಮಾ ಮಾಡುತ್ತದೆ ಎಂದರೆ ಖಂಡಿತವಾಗಿ ಅದರಲ್ಲಿ ಸಾಕಷ್ಟು ಲೋಪದೋಷಗಳನ್ನು ನಾವು ಹುಡುಕಬಹುದು ಮಾತ್ರವಲ್ಲದೆ ಆ ಸಿನಿಮಾದಲ್ಲೇ ನಟಿಸಿರುವಂತಹ ಪ್ರಮುಖ ನಾಯಕನಟನ ಕರಿಯರ್ ಅನ್ನು ಕೂಡ ಅದು ಮುಗಿಸಬಹುದಾದಂತಹ ಸಾದ್ಯತೆಯನ್ನು ಹೊಂದಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ ಯಾಕೆಂದರೆ ಆದಿಪುರುಷ್(Adipurush) ಸಿನಿಮಾ ಕೂಡ ಅದೇ ಸಾಲಿನ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

ಬಾಹುಬಲಿ ಸಂದರ್ಭದಲ್ಲಿ ಇಡೀ ಭಾರತದ ನಂಬರ್ ಒನ್ ಆಗಿದ್ದ ಪ್ರಭಾಸ್(Prabhas) ರವರು ಈಗ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದು ಆದಿಪುರುಷ್ ಸಿನಿಮಾದ ಗೆಲುವಿಗಾಗಿ ಕಾಯುತ್ತಿದ್ದರು. ಆದರೇ ಸಿನಿಮಾ ಮೊದಲ ವಾರದಲ್ಲಿ ಕಲೆಕ್ಷನ್ ಚೆನ್ನಾಗಿ ಮಾಡಬಹುದು ಆದರೆ ಮುಂದಿನ ದಿನಗಳಲ್ಲಿ ಅದು ಡಿಸಾಸ್ಟರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ ಹಾಕಿರುವುದು ಪ್ರಭಾಸ್ ರವರಿಗೆ ಈ ಸಿನಿಮಾ ಕೂಡ ಕೈ ಹಿಡಿಯೋದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಹೇಗಿದ್ದರೂ ಕೂಡ ಈ 600 ಕೋಟಿ ರೂಪಾಯಿ ಬಜೆಟ್ ಸಿನಿಮಾದಲ್ಲಿ ಪ್ರಭಾಸ್ ರವರು ಪಡೆದುಕೊಂಡಿರುವ ಸಂಭಾವನೆ ಮಾತ್ರ ಕಡಿಮೆ ಏನಿಲ್ಲ. ಹೌದು ಅವರ ಸಂಭಾವನೆಯಲ್ಲಿ ದೊಡ್ಡ ಬಜೆಟ್ನ ಸಿನಿಮಾವನ್ನೇ ನಿರ್ಮಿಸಬಹುದು ಅಷ್ಟರಮಟ್ಟಿಗೆ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಹೌದು ಗೆಳೆಯರೇ ಭರ್ಜರಿ 125 ಕೋಟಿ ರೂಪಾಯಿ ಸಂಭಾವನೆಯನ್ನು ಆದಿಪುರುಷ್ ಸಿನಿಮಾ ಗಾಗಿ ಪ್ರಭಾಸ್ ರವರು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಸಿನಿಮಾ ಮಾತ್ರ ಅವರ ಬಾಹುಬಲಿ ರೇಂಜ್ ನಲ್ಲಿ ಸದ್ದು ಮಾಡುತ್ತದೆ ಎಂಬುದಾಗಿ ಭಾವಿಸಲಾಗಿತ್ತು ಆದರೆ ನಿಜಕ್ಕೂ ಕೂಡ ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿರಬಹುದು.

Leave a Comment