Prabhas: ಆದಿಪುರುಷ್ ಸಿನಿಮಾ ಸೋತರು ಕೂಡ ಪ್ರಾಜೆಕ್ಟ್K ಸಿನಿಮಾಗೆ ಪ್ರಭಾಸ್ ಪಡೆದುಕೊಳ್ತಿರೋ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Prabhas ಬಾಹುಬಲಿ ಸಿನಿಮಾದ ನಂತರ ಪ್ರಭಾಸ್(Prabhas) ರವರ ಮಾರುಕಟ್ಟೆ ಭಾರತೀಯ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಮೊದಲು ಕೇವಲ ಒಬ್ಬ ತೆಲುಗು ಚಿತ್ರರಂಗದ ನಾಯಕ ಎಂಬುದಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾಸ್ ಆದಾದ ನಂತರ ಇಡೀ ಭಾರತೀಯ ಜನರಂಗದ ಪರ್ಫೆಕ್ಟ್ ಪ್ಯಾನ್ ಇಂಡಿಯಾ ಸ್ಟಾರ್ ಅನ್ನುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು.

ಬಾಹುಬಲಿ(Bahubali) ಸಿನಿಮಾದ ನಂತರ ಮಾಡಿರುವಂತಹ ಮೂರು ಸಿನಿಮಾಗಳು ಕೂಡ ಈಗ ನೆಲಕಚ್ಚಿದ್ದರು ಅವರ ಸಂಭಾವನೆಯ ಬೇಡಿಕೆ ಮಾತ್ರ ಇನ್ನೂ ಕೂಡ ಕಡಿಮೆ ಆಗಿಲ್ಲ ಎಂದು ಹೇಳಬಹುದು. ನೆಲಕಚ್ಚಿವೆಯಿಂದ ಮಾತ್ರಕ್ಕೆ ತೀರಾ ಕಡಿಮೆ ಕಲೆಕ್ಷನ್ ಏನು ಮಾಡಿಲ್ಲ. ಆದರೆ ಅವರು ಬಾಹುಬಲಿ ಸಿನಿಮಾದ ಮೂಲಕ ಸೆಟ್ ಮಾಡಿರುವ ಸ್ಟ್ಯಾಂಡರ್ಡ್ ಅವರ 200 ಮುನ್ನೂರು ಕೋಟಿ ಸಿನಿಮಾ ಗಳು ಕೂಡ ಕಡಿಮೆ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ ಮಾಡುವಂತೆ ಮಾಡಿದೆ.

ಆದಿಪುರುಷ್(Adipurush) ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಸಂಪೂರ್ಣವಾಗಿ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿರುವಂತಹ ಸಿನಿಮಾ ಆಗಿದ್ದರೂ ಕೂಡ ಸರಿಸುಮಾರು 300 ಕೋಟಿ ಕಲೆಕ್ಷನ್ ಮಾಡಿರುವುದು ಕೂಡ ಪ್ರಭಾಸ್ ರವರ ಜನಪ್ರಿಯತೆಗೆ ಕಾರಣವಾಗಿದೆ. ಇನ್ನು ಅವರು ತಮ್ಮ ಮುಂದಿನ ಪ್ರಾಜೆಕ್ಟ್K ಸಿನಿಮಾಗೆ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆಯನ್ನು ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡ್ತೀರ.

ಹೌದು ಮಿತ್ರರೇ ದೀಪಿಕಾ ಪಡುಕೋಣೆ(Deepika Padukone) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಹಾಗೂ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ರವರು ಈ ಸಿನಿಮಾದಲ್ಲಿ ನಟಿಸಲು ಭರ್ಜರಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಈ ಸಿನಿಮಾ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು ಸಾಕಷ್ಟು ಫ್ಯೂಚರ್ಸ್ಟಿಕ್ ಫಿಲಂ ಆಗಿರಲಿದೆ ಎಂಬುದಾಗಿ ತಿಳಿದುಬಂದಿದೆ.

Leave a Comment