Prabhas: ಸಲಾರ್ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಸಿನಿಮಾದಲ್ಲಿ ಕೆಲಸ ಮಾಡಿರುವವರಿಗೆ ಪ್ರಭಾಸ್ ಮಾಡಿದ್ದೇನು ಗೊತ್ತಾ?

Prabhas ನಟ ಪ್ರಭಾಸ್(Actor Prabhas) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗ ಹಿನ್ನೆಲೆ ಇರುವಂತಹ ಕುಟುಂಬದಿಂದಲೇ ಬಂದಿದ್ದರೂ ಕೂಡ ಚಿತ್ರರಂಗದಲ್ಲಿ ಗೆಲುವನ್ನು ಸಾಧಿಸಿದ್ದು ಮಾತ್ರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಎಂಬುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ.

ಪ್ರಭಾಸ್ ರವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೋಲಿನಿಂದ ಬಳಲುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಬಾಹುಬಲಿ ಸಂದರ್ಭದಲ್ಲಿ ಅವರನ್ನು ಸರಿಗಟ್ಟುವಂತಹ ಮತ್ತೊಬ್ಬ ನಾಯಕ ಭಾರತೀಯ ಚಿತ್ರರಂಗದಲ್ಲಿ ಇರಲಿಲ್ಲ ಎಂಬುದನ್ನು ಹೇಳಬಹುದಾಗಿದೆ.

ಆದರೆ ಈಗ ಸತತ ಮೂರು ಸಿನಿಮಾಗಳ ಸೋಲಿನಿಂದಾಗಿ ಪ್ರಭಾಸ್ ರವರ ಜನಪ್ರಿಯತೆ ಜೊತೆಗೆ ಮಾರುಕಟ್ಟೆಯಲ್ಲಿ ಇರುವಂತ ಅವರ ಬೇಡಿಕೆ ಕೂಡ ಕೊಂಚಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಇದೆ ಸೆಪ್ಟೆಂಬರ್ 28ರಂದು ಬಿಡುಗಡೆ ಆಗಲಿರುವಂತಹ ಸಲಾರ್(Salaar) ಸಿನಿಮಾ ಪ್ರತಿಯೊಬ್ಬರಲ್ಲಿ ಕೂಡ ನಿರೀಕ್ಷೆಯನ್ನು ಹುಟ್ಟಿಸಿದೆ.

ಸಲಾರ್ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಪ್ರಭಾಸ್ ರವರು ಮಾಡಿರುವಂತಹ ಕೆಲಸ ನಿಜಕ್ಕೂ ಕೂಡ ಈಗ ತಿಳಿದು ಬಂದಿದ್ದು ಎಲ್ಲರೂ ಕೂಡ ಅವರ ದೊಡ್ಡ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲಿ ಕೆಲಸ ಮಾಡಿರುವಂತಹ ಪ್ರತಿಯೊಬ್ಬರ ಖಾತೆಗೂ ಕೂಡ ತಾವೇ ಖುದ್ದಾಗಿ ಭರ್ಜರಿ ರೂ.10,000 ನಂತೆ ದಾನ ಮಾಡಿದ್ದಾರೆ. ಒಬ್ಬ ಸ್ಟಾರ್ ಅನ್ನೋದು ಅವರ ಜನಪ್ರಿಯತೆ ಹಾಗೂ ಫ್ಯಾನ್ ಫಾಲೋಯಿಂಗ್ ನಿಂದಲ್ಲ ಈ ರೀತಿ ಮಾನವೀಯ ಗುಣಗಳನ್ನು ತೋರಿಸಿದಾಗ.

ಇದನ್ನೂ ಓದಿ Prabhas Remuneration: ಆದಿಪುರುಷ್ ಸಿನಿಮಾಗೆ ಪ್ರಭಾಸ್ ಪಡೆದುಕೊಂಡ ಸಂಭಾವನೆ ಎಷ್ಟು?

Leave a Comment