Prabhas: ಆದಿಪುರುಷ್ ಸಿನಿಮಾದ ನಡುವಲ್ಲಿಯೇ ತನ್ನ ಸೀತೆಯನ್ನು ಹುಡುಕಿಕೊಂಡ ಪ್ರಭಾಸ್! ಯಾರು ಆ ಬೆಡಗಿ.

Prabhas ನಟ ಪ್ರಭಾಸ್(Actor Prabhas) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕ ನಟ ಆಗಿದ್ದು ಅವರ ಜನಪ್ರಿಯತೆ ಭಾರತದ ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳಲ್ಲೂ ಕೂಡ ಇದೆ. ಬಾಹುಬಲಿ ಸಿನಿಮಾದ ನಂತರ ಅವರ ಭವಿಷ್ಯವೇ ಬದಲಾಗಿದೆ ಎಂದು ಹೇಳಬಹುದಾಗಿದೆ.

ಸಿನಿಮಾಗಳು ಸೋತಿರಬಹುದು ಆದರೆ ಅವರ ಜನಪ್ರಿಯದೆ ಮಾತ್ರ ಕಿಂಚಿತ್ತು ಕುಂದಿಲ್ಲ. ಸದ್ಯಕ್ಕೆ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ಬಹುನಿರೀಕ್ಷಿತ ಆದಿಪುರುಷ್(Adipurush) ಸಿನಿಮಾ ಇದೇ ಜೂನ್ 16ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಆದರೆ ಇದೇ ಸಿನಿಮಾದಲ್ಲಿ ಅಭಿಮಾನಿಗಳ ಪ್ರಕಾರ ಪ್ರಭಾಸ್(Prabhas) ರವರು ತಮ್ಮ ಜೀವನದ ಸೀತೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಅಂದರೆ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳ ಪ್ರಕಾರ ಪ್ರಭಾಸ್ ರವರು ಬಾಲಿವುಡ್ ನಟಿಯ ಪ್ರೇಮಪಾಶಕ್ಕೆ ಬಿದ್ದಿದ್ದಾರೆ.

ಹೌದು, ನಾವ್ ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ನಟಿ ಹಾಗೂ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ನಟಿ ಕೃತಿ ಸನೋನ್(Kriti Sanon) ರವರ ಬಗ್ಗೆ. ಇಬ್ಬರು ಕೂಡ ಸಾಕಷ್ಟು ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದ್ದು ಇದರ ಬಗ್ಗೆ ಅಧಿಕೃತ ಮಾಹಿತಿಗಳು ಇಬ್ಬರ ಬಾಯಿಯಿಂದಲೇ ಬರಬೇಕಾಗಿದೆ.

Leave a Comment