Prabhas ಬಾಹುಬಲಿ(Bahubali) ಸಿನಿಮಾದ ಪ್ರಭಾಸ್ ರವರನ್ನು ಕೇವಲ ಭಾರತ ಚಿತ್ರರಂಗ ಮಾತ್ರವಲ್ಲದೆ ಬೇರೆ ದೇಶದವರು ಕೂಡ ಗುರುತಿಸುತ್ತಾರೆ. ಆ ರೀತಿ ಪ್ರಭಾಸ್ ರವರ ಜನಪ್ರಿಯತೆ ಎನ್ನುವುದು ವಿಶ್ವ ಚಿತ್ರರಂಗದ ಜಗತ್ತಿನಲ್ಲಿ ವೇಗವಾಗಿ ಹರಡಿದೆ ಹಾಗೂ ಇನ್ನೂ ಕೂಡ ಹರಡುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ನೀವು ಅರಿತುಕೊಳ್ಳಬೇಕಾಗಿರುವುದು ಏನೆಂದರೆ ಒಬ್ಬ ಸೂಪರ್ ಸ್ಟಾರ್ ಆಗಿ ಅವರ ಸತತ ಸಿನಿಮಾಗಳು ಸೋತರು ಕೂಡ ಅವರ ಜನಪ್ರಿಯತೆ ಎನ್ನುವುದು ಇಂದಿಗೂ ಕೂಡ ಸಿನಿಮಾ ಪ್ರೇಮಿಗಳಲ್ಲಿ ಹಾಗೆ ಇದೆ. ಪ್ರಭಾಸ್ ರವರ ಕಳೆದ ಮೂರು ಸಿನಿಮಾಗಳು ಅಷ್ಟೊಂದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಬಹುದಾಗಿದೆ.
ಈ ಹಿಂದೆ ಬಿಡುಗಡೆಯಾಗಿರುವ ಸಾಹೋ ಹಾಗೂ ರಾಧೇಶ್ಯಾಮ್ ಎರಡು ಸಿನಿಮಾಗಳು ಕೂಡ ಪ್ರೇಕ್ಷಕರ ಮನಸ್ಸನ್ನು ಸಂಪೂರ್ಣವಾಗಿ ಗೆಲ್ಲಲು ವಿಫಲವಾಗಿ ಪ್ರಭಾಸ್(Prabhas) ಅವರ ಇತ್ತೀಚಿನ ಸಿನಿಮಾ ಕರಿಯರ್ ನಲ್ಲಿ ಕಪ್ಪು ಚುಕ್ಕೆಗಳಾಗಿ ಕಾಣಿಸಿಕೊಂಡಿವೆ ಎಂದರು ತಪ್ಪಾಗಲಾರದು. ಹೀಗಿದ್ದರೂ ಕೂಡ ಅವರು ಈಗ ಮತ್ತೊಂದು ದಾಖಲೆಯನ್ನು ಮಾಡಿರುವುದು ಪ್ರತಿಯೊಬ್ಬರೂ ಕೂಡ ಮೆಚ್ಚಿ ಕೊಳ್ಳಬೇಕಾಗಿದೆ.
ಪ್ರಭಾಸ್ ಅವರ ಹಿಂದಿನ ಎರಡು ಸಿನಿಮಾಗಳು ಸೋತಿದ್ದರು ಕೂಡ ಎರಡು ಸಿನಿಮಾಗಳು ಕೂಡ ಮೊದಲ ದಿನ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದವು. ಈಗ ಅವುಗಳ ಜೊತೆಗೆ ಆದಿಪುರುಷ್(Adipurush) ಸಿನಿಮಾ ಕೂಡ ಮೊದಲನೇ ದಿನ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹ್ಯಾಟ್ರಿಕ್ ಬಾರಿಸಿರುವ ದಾಖಲೆಯನ್ನು ನಿರ್ಮಿಸಿದ್ದು ಇದು ಪ್ರಭಾಸ್ ಅವರ ಹೆಸರಿನಲ್ಲಿ ಮಾತ್ರ ಇರುವ ದಾಖಲೆ ಎಂಬುದು ಕೂಡ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.